• Slide
    Slide
    Slide
    previous arrow
    next arrow
  • ಬೌದ್ಧಿಕ ಸಂಪತ್ತಿನ ಜೊತೆಗೆ ದೈಹಿಕ ಮತ್ತು ಮಾನಸಿಕ ಸ್ಥೈರ್ಯಗಳ ಗುಣಮಟ್ಟ ಅತಿಮುಖ್ಯ: M.N. ಭಟ್

    300x250 AD

    ಯಲ್ಲಾಪುರ: ತಾಲೂಕಿನ ಇಡಗುಂದಿ ಸ್ನೇಹ ಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಸ್ನೇಹ ಸಾಗರ ವಾರ್ಷಿಕ ಸಮ್ಮೆಳನ ನಡೆಯಿತು. ಇಂದಿನ ದಿನಗಳಲ್ಲಿ ನಮ್ಮ ಮಕ್ಕಳು ಬೌದ್ಧಿಕ ಸಂಪತ್ತಿಗಿoತ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಸಂಪತ್ತಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಇಲ್ಲವಾದರೆ ಏನನ್ನು ಸಾಧಿಸಲಾಗದು ಎಂದು ಯಲ್ಲಾಪುರದ YTSS ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ M.N. ಭಟ್ ಅವರು ಅಭಿಪ್ರಾಯ ಪಟ್ಟರು.
    ಅವರು ಸಮ್ಮೆಳನದ ‘ಆರೋಗ್ಯವೇ ಭಾಗ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಾಲೆಯಲ್ಲಿ ಮಕ್ಕಳು ಸಾತ್ವಿಕವಾದ ಬೈಗುಳವನ್ನು ಬೈಸಿಕೊಳ್ಳಬೇಕು ಅದು ಕೂಡ ಶಾಲೆಯಲ್ಲಿ ನೀಡುವ ಜೀವನದ ತಾತ್ವಿಕ, ಸಾತ್ವಿಕದ ಕ್ರಮವೇ ಆಗಿದೆ. ಆ ದಿಸೆಯಲ್ಲಿ ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಬೌತಿಕ, ಮಾನಸಿಕ ಸತ್ವಗಳನ್ನು ನೀಡಿದಾಗ ಮಾತ್ರ ಮಕ್ಕಳ ಜೀವನದಲ್ಲಿ ಆಗುವ ದುರಂತಗಳನ್ನು ದೂರಮಾಡಬಹುದು ಹಾಗೂ ಪಾಲಕರು ಮಕ್ಕಳಿಗೆ ಒತ್ತಡ ಹೇರದೆ ಸ್ವತಂತ್ರವಾಗಿ ಸಂಸ್ಕಾರಯುತವಾಗಿ ಶಿಕ್ಷಣವನ್ನು ದೊರಕುವಲ್ಲಿ ಗಮನವಹಿಸಬೇಕು ಎಂದರು.

    ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಲ್ ಭಟ್ಟ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಒಂದು ವಸತಿ ಶಾಲೆಯು ಸರಿಯಾದ ಕ್ರಮದಲ್ಲಿ ಸಾಗಬೇಕಾದರೆ ಪಾಲಕರ ಸಹಕಾರ ಸಹ ಅತ್ಯವಶ್ಯಕವಾಗಿದೆ. ಮಕ್ಕಳ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದೇವೆ. ಆದ ಕಾರಣ ನಮ್ಮ ಮಕ್ಕಳು ಪಿರಾಮಿಡ್ ನಂತಹ ದೈಹಿಕ ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ನೆರವೇರಿಸಿದ್ದಾರೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯವಾಗಿದೆ. ಇಂದಿನ ಸಮಾಜವು ಜೀವನ ಮತ್ತು ಉಪಜೀವನದ ಸ್ಥಿತಿಯನ್ನು ಅರಿತು ದೇಶದ ಒಳಿತಿಗಾಗಿ ಮಕ್ಕಳು ಭವಿಷ್ಯದ ಮಹತ್ತರವಾದ ಸಾಧನೆಯನ್ನು ಪಡೆಯಲು ಅಂಕಗಳ ಜೊತೆಗೆ ಸಂಸ್ಕಾರಗಳ ಮೌಲ್ಯವನ್ನು ಪಡೆಯಬೇಕು ಎಂದರು.

    300x250 AD

    ಸಮ್ಮೆಳನದ ಸಭಾಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಆಗಿರುವ ಎನ್. ಎ. ಭಟ್ ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದ ಮಾಹಿತಿಯನ್ನು ನೀಡಿ, ಪಾಲಕರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ ಎಂದು ತಿಳಿಸಿದರು. ಇದೇ ಸಮಯದಲ್ಲಿ 2022 ರ ಸಾಲಿನ ಶಾಲೆಗೆ ಕೀರ್ತಿತಂದ ಮಕ್ಕಳನ್ನು ಹತ್ತು ಸಾವಿರದ ಗೌರವ ಧನದೊಂದಿಗೆ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ಶಾಲೆಯ ಕಾರ್ಯಕಾರಿಣಿ ವೀಣಾ ಎಸ್ ಭಟ್, ಇನ್ನೋರ್ವ ನಿದೇರ್ಶಕರಾದ ವಿನಾಯಕ ಹೆಬ್ಭಾರ್, ಸಮಾರಂಭದ ವ್ಯವಸ್ಥಾಪಕರಾದ ರಮೇಶ ಬಿ. ವಿ. ವಸತಿ ವಿಭಾಗದ ಕೃಷ್ಣಮೂರ್ತಿ ರಾವ್ ಸಭಾ ಗೌರವಕ್ಕೆ ಪಾತ್ರರಾದರು. ಸಹಶಿಕ್ಷಕಿ ಸ್ವಪ್ನಜಾ ನಿರ್ವಹಿಸಿದರು. ಗುರುದತ್ ಎಮ್. ಎಸ್ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top