Slide
Slide
Slide
previous arrow
next arrow

ಫೆ.8ರಿಂದ ದಾಂಡೇಲಿ ಪ್ರಿಮಿಯರ್ ಲೀಗ್

300x250 AD

ದಾಂಡೇಲಿ: ಕಳೆದ ವರ್ಷ ಚೊಚ್ಚಲ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿ, ಐತಿಹಾಸಿಕವನ್ನಾಗಿಸಿ ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲ ಜನತೆಯ ಶ್ಲಾಘನೆಗೆ ಪಾತ್ರವಾದ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯು ಈ ವರ್ಷ ಎರಡನೇ ವರ್ಷದ ದಾಂಡೇಲಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಇದೇ ಬರುವ ಫೆ.08ರಿಂದ 12ರವೆರೆಗೆ ಆಯೋಜಿಸಿದೆ.
ಸುದ್ದಿಗೋಷ್ಟಿಯಲ್ಲಿ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಚೇರ್‌ಮೆನ್ ಅನಿಲ್ ಪಾಟ್ನೇಕರ್ ಮಾಹಿತಿ ನೀಡಿ, ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲಿನ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಗೂ ಭವಿಷ್ಯದಲ್ಲಿ ದಾಂಡೇಲಿಯಲ್ಲಿ ಕ್ರಿಕೆಟ್ ಆಟದ ಬಲವರ್ಧನೆಯ ಆಶಯವನ್ನಿಟ್ಟುಕೊಂಡು ಉದ್ಯಮಿ ವಿಷ್ಣುಮೂರ್ತಿ ರಾವ್ ಅವರ ಅಧ್ಯಕ್ಷತೆಯ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯು ಕಳೆದ ವರ್ಷ ಸರ್ವರ ಸಹಕಾರದಲ್ಲಿ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಕಳೆದ ವರ್ಷದ ಯಶಸ್ಸು ಮತ್ತು ಸರ್ವ ಜನತೆಯ ಬೆಂಬಲವನ್ನು ಮುಂದಿಟ್ಟುಕೊOಡು ಈ ವರ್ಷ ಇದೇ ಬರುವ ಫೆ:08 ರಿಂದ ಫೆ:12 ರವೆರೆಗೆ ದಾಂಡೇಲಿಯ ಡಿ.ಎಫ್.ಎ ಮೈದಾನದಲ್ಲಿ 5 ದಿನಗಳವರೆಗೆ ಅದ್ದೂರಿಯಾಗಿ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷ ಎಂಟು ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದ್ದು, ತಂಡಗಳ ಆಯ್ಕೆ ಪ್ರಕ್ರಿಯೆ ಈಗಾಗಲೆ ಮುಕ್ತಾಯಗೊಂಡಿದೆ ಎಂದು ತಿಳಿಸಿದರು.
ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ನಗದು ರೂ.1,11,111/- ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ನಗದು ರೂ: 55,555/- ಮತ್ತು ಶಾಶ್ವತ ಫಲಕ ಹಾಗೂ ಅತ್ಯುತ್ತಮವಾಗಿ ಪ್ರದರ್ಶನ ತೋರಿದ ಆಟಗಾರರಿಗೆ ಪಂದ್ಯ ಪುರುಷೋತ್ತಮ, ಸರಣಿ ಪುರುಷೋತ್ತಮ, ಸರಣಿಯ ಅತ್ಯುತ್ತಮ ಬೌಲರ್ ಮತ್ತು ಅತ್ಯುತ್ತಮ ದಾಂಡಿಗ ಬಹುಮಾನವನ್ನು ನೀಡಲಾಗುತ್ತದೆ. ಪಂದ್ಯಾವಳಿಯ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಕ್ಕೆ ರಾಷ್ಟç, ಅಂತರಾಷ್ಟಿçÃಯ ಮಟ್ಟದ ಕ್ರಿಕೆಟ್ ಆಟಗಾರರನ್ನು ಅಹ್ವಾನಿಸುವ ಕರ‍್ಯ ನಡೆಯುತ್ತಿದೆ ಎಂದರು.
ಈ ಪಂದ್ಯಾವಳಿಯ ಮುನ್ನ ದಿನ ಫೆ:07 ರಂದು ಸಂಜೆ :04 ಗಂಟೆಗೆ ಅದ್ದೂರಿ ಮೆರವಣಿಗೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯು ಆಕರ್ಷಕ ಮತ್ತು ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ ಎಂದ ಅನಿಲ್ ಪಾಟ್ನೇಕರ್ ಅವರು ದಾಂಡೇಲಿಯಲ್ಲಿ ಕ್ರೀಡಾಕ್ಷೇತ್ರಕ್ಕೆ ವಿಫುಲವಾದ ಅವಕಾಶವಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು, ಈ ಭಾಗದ ಕ್ರೀಡಾಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲು ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಸಣ್ಣ ಪ್ರಯತ್ನ ಇದಾಗಿದ್ದು, ನಮ್ಮ ಈ ಪ್ರಯತ್ನಕ್ಕೆ ಸರ್ವರೂ ಸಹಕರಿಸಿ, ದಾಂಡೇಲಿಯ ಕೀರ್ತಿಯನ್ನು ಮತ್ತಷ್ಟು ಪಸರಿಸುವ ಕಾರ್ಯ ಮಾಡೋಣ ಎಂದರು.
ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷ ವಿಷ್ಣುಮೂರ್ತಿ ರಾವ್ ಮಾತನಾಡಿ, ಕಳೆದ ವರ್ಷವೂ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದಂತೆ ಈ ವರ್ಷವೂ ಸರ್ವರೂ ಪ್ರೀತಿಯ ಬೆಂಬಲವನ್ನು ನೀಡಿ ಸಹಕರಿಸಬೇಕೆಂದು ವಿನಂತಿಸಿದರು.
ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಕರ‍್ಯದರ್ಶಿ ಜೋಸೆಫ್ ಗೋನ್ಸಾಲಿಸ್ ಅವರು ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಉದ್ದೇಶವನ್ನು ವಿವರಿಸಿ, ಇದು ಆರಂಭ. ಈ ಆರಂಭ ಭವಿಷ್ಯದ ಬದಲಾವಣೆಗಾಗಿ ಮತ್ತು ಈ ಭಾಗದಲ್ಲಿ ಕ್ರಿಕೆಟ್ ಕ್ಷೇತ್ರದ ಉನ್ನತಿಗಾಗಿ ಎಂಬ ಮಹತ್ವಕಾಂಕ್ಷಿ ಉದ್ದೇಶವನ್ನಿಟ್ಟುಕೊಂಡು ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಇಮಾಮ್ ಸರ್ವರ್, ಖಜಾಂಚಿ ಮನೋಹರ್ ಕದಂ, ಸಮಿತಿ ಪ್ರಮುಖರುಗಳಾದ ನರಸಿಂಗ್ ದಾಸ್ ರಾಠಿ, ವಸೀಂ ಅಂಕೋಲೆಕರ್, ಸಂದೀಪ್ ರಜಪೂತ್ ಮೊದಲಾದವರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ದಾಂಡೇಲಿಯ ಚಿನ್ನಸ್ವಾಮಿ ಕ್ರೀಡಾಂಗಣ ಎಂದೆ ಜನಖ್ಯಾತಿಯನ್ನು ಪಡೆದ ಡಿ.ಎಫ್.ಎ ಮೈದಾನದಲ್ಲಿ ಕ್ರಿಕೆಟ್ ಹಬ್ಬ, ಕ್ರಿಕೆಟ್ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಒಟ್ಟಿನಲ್ಲಿ ಎಲ್ಲರ ನಿರೀಕ್ಷೆಗೂ ಮೀರಿ ಪಂದ್ಯಾವಳಿ ಆಯೋಜನೆಗೆ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯು ಸರ್ವ ಸನ್ನದ್ಧವಾಗಿದೆ.

300x250 AD
Share This
300x250 AD
300x250 AD
300x250 AD
Back to top