• Slide
    Slide
    Slide
    previous arrow
    next arrow
  • ಫೆ.17ರಿಂದ ಮೂರು ದಿನಗಳ ‘ಸಿದ್ದಾಪುರ ಉತ್ಸವ’

    300x250 AD

    ಸಿದ್ದಾಪುರ: ಪಟ್ಟಣದ ನೆಹರು ಮೈದಾನದಲ್ಲಿ ಇದೆ ಫೆ. 17 ರಿಂದ 19ರ ವರೆಗೆ ಮೂರು ದಿನಗಳ ಕಾಲ ಸಿದ್ದಾಪುರ ಉತ್ಸವವನ್ನು ನಡೆಸಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಅವಕಾಶ ಕಲಿಸುವುದರೊಂದಿಗೆ ಹೆಸರಾಂತ ಕಲಾವಿದರನ್ನು ಕರೆತಂದು ವಿಜೃಂಭಣೆಯಿoದ ಉತ್ವವ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸಿದ್ದಾಪುರ ಉತ್ಸವ ಸಮಿತಿಯ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಹೇಳಿದರು.
    ಅವರು ಪಟ್ಟಣದ ಗಂಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಹಿಂದೆ ಸರ್ಕಾರಿ ಕಾರ್ಯಕ್ರಮವಾಗಿ ಜಿಲ್ಲಾಡಳಿತದ ಮುಖಾಂತರ ಸಿದ್ದಾಪುರ ಉತ್ಸವವನ್ನು ಆಚರಣೆ ಮಾಡಿದ್ದರು. ನಾವು ಈ ಸಲದಿಂದ ಯಾಕೆ ಸಿದ್ದಾಪುರ ಉತ್ಸವವನ್ನು ಮಾಡಬಾರದು. ನಮ್ಮ ಅಕ್ಕಪಕ್ಕದ ತಾಲೂಕು ಜಿಲ್ಲೆಯ ಬೇರೆ ಬೇರೆ ತಾಲೂಕಿನಲ್ಲಿ ಅವರು ಅವರ ತಾಲೂಕಿನ ಉತ್ಸವವನ್ನು ಮಾಡುತ್ತಿದ್ದಾರೆ. ಆ ಉತ್ಸವಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶವನ್ನು ಕೊಡುವಂತದ್ದು ಹೊರಗಡೆಯಿಂದ ಕಲಾವಿದರನ್ನು ಕರೆಯಿಸಿ ಅಲ್ಲಿ ಕಾರ್ಯಕ್ರಮ ಮಾಡುವುದು ಉದ್ಘಾಟನೆ ಸಮಾರೋಪ ಸನ್ಮಾನ ಇಂತಹ ಎಲ್ಲಾ ಕಾರ್ಯಕ್ರಮವನ್ನು ಒಳಗೊಂಡoತೆ ತಾಲೂಕಿನ ಎಲ್ಲಾ ಸದಸ್ಯರನ್ನು ಸೇರಿಸಿಕೊಂಡು ಉತ್ಸವವನ್ನು ಆಚರಣೆ ಮಾಡಬೇಕೆಂಬ ಯೋಚನೆಯನ್ನು ಇಟ್ಟುಕೊಂಡು ಈ ವರ್ಷ ಫೆಬ್ರವರಿ 17, 18, 19 ಒಟ್ಟು ಮೂರು ದಿನಗಳ ಕಾರ್ಯಕ್ರಮ ನಡೆಸಲು ನಿಶ್ಚಯಿಸಲಾಯಿತು.
    ಸಮಿತಿಯ ಗೌರವಾಧ್ಯಕ್ಷರಾಗಿ ಉದ್ಯಮಿ ಉಪೇಂದ್ರ ಪೈ ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರನ್ನಾಗಿ ಕೆ.ಜಿ ನಾಯ್ಕ ಹಣಜಿಬೈಲ, ಉಪಾಧ್ಯಕ್ಷರಾಗಿ ಮಾರುತಿ ನಾಯ್ಕ ಹೊಸೂರ, ವೀರಭದ್ರ ನಾಯ್ಕ ಮಳವಳ್ಳಿ, ನಾಗರಾಜ್ ನಾಯ್ಕ ಬೇಡ್ಕಣಿ, ಸತೀಶ್ ಹೆಗಡೆ ಬೈಲ್ ಹಳ್ಳಿ ಕಾರ್ಯದರ್ಶಿಯಾಗಿ ಆಕಾಶ್ ಕೊಡ್ಲಿ ರವರನ್ನು ಆಯ್ಕೆ ಮಾಡಲಾಗಿದೆ. ತಕ್ಷಣದಲ್ಲಿ ಸಮಿತಿಯ ಪದಾಧಿಕಾರಿಗಳನ್ನು, ಉತ್ಸವ ಸಮಿತಿಯ ವಿವಿಧ ಉಪ ಸಮಿತಿಗಳನ್ನು ರಚನೆ ಮಾಡಲಾಗುವುದು. ಇದು ಯಾವುದೇ ಪಕ್ಷ ಜಾತಿ ಮತ ಪಂಗಡಗಳಿಗೆ ಸೀಮಿತವಾದ ಉತ್ಸವವಲ್ಲ. ಆದ್ದರಿಂದ ಸಿದ್ದಾಪುರ ಉತ್ಸವವನ್ನು ವಿಜೃಂಭಣೆಗಳಿAದ ಆಚರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು.
    ಸಮಿತಿಯ ಗೌರವಾಧ್ಯಕ್ಷ ಉಪೇಂದ್ರ ಪೈ ಮಾತನಾಡಿ ಉತ್ಸವದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಬೆಳಗುವಂತಾಗಬೇಕು ಎನ್ನುವುದು ಉತ್ಸವದ ಉದ್ದೇಶವಾಗಿದೆ. ಸಿದ್ದಾಪುರ ಉತ್ಸವ ಇತಿಹಾಸದಲ್ಲಿ ನೆನಪುಳಿಯುವಂತ ಉತ್ಸವ ವಾಗಬೇಕು. ಇದಕ್ಕೆ ತಾಲೂಕಿನ ಎಲ್ಲಾ ಜನತೆಯ ಸಹಕಾರ ಅತ್ಯವಶ್ಯಕ ಎಂದರು.
    ಸಭೆಯಲ್ಲಿ ಉತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾರುತಿ ಟಿ.ನಾಯ್ಕ ಹೊಸೂರ, ವೀರಭದ್ರ ನಾಯ್ಕ ಮಳವಳ್ಳಿ, ನಾಗರಾಜ ಆರ್. ನಾಯ್ಕ ಬೇಡ್ಕಣಿ, ಸತೀಶ್ ಹೆಗಡೆ ಬೈಲಳ್ಳಿ, ಕಾರ್ಯದರ್ಶಿಯಾಗಿ ಆಯ್ಕೆಯಾದ ಆಕಾಶ್ ಕೊಡ್ಲಿ, ಪ್ರಮುಖರಾದ ವಿನಯ್ ಹೊನ್ನೆಗುಂಡಿ, ಲಕ್ಷ್ಮಣ ನಾಯಕ್ ಬೇಡ್ಕಣಿ, ಸುಧೀರ್ ನಾಯ್ಕ ಕೊಂಡ್ಲಿ, ಎಚ್.ಕೆ ಶಿವಾನಂದ, ನಂದನ್ ಬೋರ್ಕರ್, ರಾಘವೇಂದ್ರ ರಾಯ್ಕರ, ಸುರೇಶ ನಾಯ್ಕ ಬಾಲಿಕೊಪ್ಪ, ತೋಟಪ್ಪ ನಾಯ್ಕ ಹೊಸೂರು,ಹರೀಶ ಗೌಡರ್ ಹರಳಿಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top