• Slide
  Slide
  Slide
  previous arrow
  next arrow
 • ಉಳವಿ ಜಾತ್ರೆ: ನಿಷೇಧವಿದ್ದರು ಬರುತ್ತಿರುವ ಚಕ್ಕಡಿ ಗಾಡಿಯೊಂದಿಗೆ ಬರುತ್ತಿರುವ ಭಕ್ತಾದಿಗಳು

  300x250 AD

  ಜೊಯಿಡಾ: ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶ್ರೀಕ್ಷೇತ್ರ ಉಳವಿ ಜಾತ್ರೆ ಜನವರಿ 28ರಿಂದ ಪ್ರಾರಂಭವಾಗಿದ್ದು, ರಾಜ್ಯದಾದ್ಯಂತ ದನಗಳಿಗೆ ಚರ್ಮಗಂಟು ರೋಗವಿರುವುದರಿಂದ ಚಕ್ಕಡಿಗಾಡಿಗಳು ಬರಬಾರದು ಎಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ಉಳವಿ ಜಾತ್ರೆಗೆ ಚಕ್ಕಡಿಗಳ ದಂಡು ಆಗಮಿಸುತ್ತಿವೆ.
  ಆರೋಗ್ಯವಾಗಿರುವ, ವಾಕ್ಸಿನ್ ಆಗಿರುವ ಎತ್ತುಗಳನ್ನು ಜಾತ್ರಗೆ ಬಿಡಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದ್ದು, ಇದರಿಂದ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಬಹಳಷ್ಟು ಚಕ್ಕಡಿಗಾಡಿಗಳು ತಮ್ಮ ಎತ್ತುಗಳು ಆರೋಗ್ಯಕರವಾಗಿವೆ, ವಾಕ್ಸಿನ ಆಗಿದೆ ಎಂದು ನೂರಾರು ಚಕ್ಕಡಿಗಳು ಬರುವ ಸಾಧ್ಯತೆ ಇದೆ. ಉತ್ತರಕನ್ನಡ, ಧಾರವಾಡ, ಬೆಳಗಾವಿ ಜಿಲ್ಲಾಧಿಕಾರಿಗಳು ರೋಗ ಹೆಚ್ಚಾಗಬಾರದು ಎನ್ನುವ ಉದ್ದೇಶದಿಂದ ಚಕ್ಕಡಿಗಾಡಿಗಳನ್ನು ಉಳವಿ ಜಾತ್ರೆಗೆ ತರಬೇಡಿ ಎನ್ನುವ ಆದೇಶವನ್ನು ಮಾಡಿದ್ದರು.
  ಈ ಆದೇಶವನ್ನು ಮೀರಿಯು ಚಕ್ಕಡಿ ಗಾಡಿಗಳು ಉಳವಿ ಜಾತ್ರೆಗೆ ಬರುತ್ತಿವೆ, ಜಾತ್ರೆ ಆರಂಭದಲ್ಲೇ ಬಹಳಷ್ಟು ಚಕ್ಕಡಿಗಾಡಿಗಳು ಉಳವಿಯತ್ತ ಧಾವಿಸುತ್ತಿವೆ, ಈ ಬಗ್ಗೆ ಪೋಲಿಸ್ ಇಲಾಕೆ ಮತ್ತು ಜಿಲ್ಲಾಡಳಿತ,ತಾಲೂಕಾ ಆಡಳಿತ ಚರ್ಮಗಂಟು ರೋಗ ಬಂದ ಕಾರಣ ಚಕ್ಕಡಿಗಾಡಿಗಳನ್ನು ತರಬಾರದು ಎನ್ನುವ ಬೋರ್ಡ್ ಗಳನ್ನು ಹಾಕಿದ್ದರು ಸಹಿತ ರೈತರು ಚಕ್ಕಡಿಗಾಡಿಗಳನ್ನು ತರುತ್ತಿದ್ದಾರೆ.
  ಜಾತ್ರೆಗೆ ಚಕ್ಕಡಿ ತರಲೇಬೇಕು ಇಲ್ಲವಾದರೆ ದೇವರು ಶಾಪ ನೀಡುತ್ತಾನೆ, ಬೆಳೆ ಉತ್ತಮವಾಗಿ ಬರುವುದಿಲ್ಲ ಇಂತಹ ಮೂಢನಂಬಿಕೆಗಳಿಗೆ ಒಳಗಾಗಿ ಚಕ್ಕಡಿಗಾಡಿಗಳನ್ನು ತರುತ್ತಾರೆ,ಆದರೆ ಮೂಕ ಪ್ರಾಣಿಗಳಾದ ದನಗಳಿಗೆ ಇದರಿಂದ ತೊಂದರೆ ಉಂಟಾಗುತ್ತದೆ, ಜೋಯಿಡಾ ತಾಲೂಕಿನ ಹಲವಾರು ಕಡೆಗಳಲ್ಲಿ ಈಗಾಗಲೇ ಚರ್ಮಗಂಟು ರೋಗ ಹರಡಿದ್ದು, ಜಾತ್ರೆಗೆ ಬರುವ ಎತ್ತುಗಳಿಗೂ ಹರಡುವ ಸಾಧ್ಯತೆ ಇದೆ, ಹೀಗಾಗಿ ಜಾತ್ರೆಗೆ ಚಕ್ಕಡಿ ತರಬಾರದು ಎಂದು ತಿಂಗಳುಗಳ ಹಿಂದೆಯೇ ಸರ್ಕಾರದ ಕಡೆಯಿಂದ ಎ ಸಿ ವಿಜಯಲಕ್ಷ್ಮಿ ರಾಯಕೋಡ ಅವರು ಸಭೆ ನಡೆಸಿ ಸಂಭoದಪಟ್ಟ ಅಧಿಕಾರಿಗಳಿಗೆ ಹಾಗೂ ಉಳವಿ ಟ್ರಸ್ಟ್ ಕಮಿಟಿಯವರಿಗೆ ತಿಳಿ ಹೇಳಿದ್ದರು.
  ಬಯಲುಸೀಮೆಯಿಂದ ಬರುವ ಒಂದೊAದು ಎತ್ತುಗಳಿಗೂ ಒಂದರಿoದ ಎರಡು ಲಕ್ಷ ಮೌಲ್ಯವಿರುತ್ತದೆ,ಜಾತ್ರೆಗೆ ಬಂದು ರೋಗಕ್ಕೆ ತುತ್ತಾಗಿ ಸತ್ತರೆ ರೈತನಿಗೂ ನಷ್ಟ, ಇಲ್ಲಿಯ ಅಧಿಕಾರಿಗಳಿಗೂ ಹಾಗೂ ಜಾತ್ರಾ ಕಮಿಟಿಯವರಿಗೂ ಕೆಟ್ಟ ಹೆಸರು ಎನ್ನುವುದು ಸಾರ್ವಜನಿಕರ ಮಾತು. ಜೊಯಿಡಾ ಪಶು ಇಲಾಕೆ ಅಧಿಕಾರಿಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂಬುದು ಪಶು ಅಧಿಕಾರಿ ಡಾ.ಮಂಜಪ್ಪ ಅವರ ಮಾತಾಗಿದೆ. ಅದೇನೆ ಇರಲಿ ಉಳವಿ ಜಾತ್ರೆಗೆ ಬರುವ ಎತ್ತುಗಳ ಬಗ್ಗೆ ಕಾಳಜಿ ಅತ್ಯಗತ್ಯವಾಗಿದ್ದು ಧಾರವಾಡ ಬೆಳಗಾವಿ ಮೂಲದಿಂದ ಬರುವ ಎತ್ತುಗಳನ್ನು ವಾಪಾಸ ಕಳಿಸುವ ವ್ಯವಸ್ಥೆ ಆಯಾ ಕ್ಷೇತ್ರ ಪೋಲಿಸ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top