• Slide
    Slide
    Slide
    previous arrow
    next arrow
  • ಅಂಕೋಲಾದಲ್ಲಿ 108 ಸೂರ್ಯನಮಸ್ಕಾರ: ಅರ್ಥಪೂರ್ಣ ರಥಸಪ್ತಮಿ

    300x250 AD

    ಅಂಕೋಲಾ: ಪತಂಜಲಿ ಯೋಗಸಮೀತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಪಿ.ಎಂ.ಪ್ರೌಡಶಾಲಾ ಆವರಣದಲ್ಲಿ ಮಾಘಮಾಸ ಶುಕ್ಲಪಕ್ಷ ಸಪ್ತಮಿ ದಿನದಂದು 108 ಸೂರ್ಯ ನಮಸ್ಕಾರ ಮಾಡುವ ಮೋಲಕ ರಥಸಪ್ತಮಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
    ಈ ಸಂದರ್ಭದಲ್ಲಿ ಪೂರ್ಣಪ್ರಜ್ಞಾ, ಹಿಮಾಲಯ, ಪಿ.ಎಂ ಪ್ರೌಢಶಾಲೆ, ಪಿಎಂ ಜ್ಯುನಿಯರ್ ಕಾಲೇಜ್, ಬೇಲೆಕೇರಿ ಬಗ್ರಿಗದ್ದೆ ಕಿರಿಯ ಪ್ರಾಥಮಿಕ ಶಾಲೆ, ಸರಕಾರಿ ನಂ1 ಶಾಲೆಯ ವಿದ್ಯಾಥಿಗಳು ಹಾಗೂ ಶಿಕ್ಷಕರು ,ಸಾರ್ವಜನಿಕರು ಹಾಗೂ ಪತಂಜಲಿ ಯೋಗಸಮೀತಿಯ ಸದಸ್ಯರು ಕಾರ್ಯಕೃಮದಲ್ಲಿ ಭಾಗವಹಿಸಿದ್ದರು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪತಂಜಲಿ ಯೋಗಸಮೀತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು.
    ಕಾರ್ಯಕ್ರಮವನ್ನು ಹಿರಿಯ ವಕೀಲ ಸುಭಾಷ ನಾರ್ವೇಕರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪಿ.ಎಂ.ಪ್ರೌಢಶಾಲೆಯ ಮುಖ್ಯಾಧ್ಯಾಪಕ ಚಂದ್ರಶೇಖರ ಕಡಿಮನೆ ವಹಿಸಿದ್ದರು. ಪತಂಜಲಿ ಯೋಗ ಸಮಿತಿಯ ತಾಲೂಕಾ ಪ್ರಭಾರಿ ವಿನಾಯಕ ಗುಡಿಗಾರ ಪ್ರಾಸ್ತಾವಿಕ ಮಾತನಾಡಿದರು. ಪತಂಜಲಿ ಮಹಿಳಾ ಪ್ರಭಾರಿ ಜೋಸ್ನಾ ನಾರ್ವೇಕರ, ಪಿ.ಎಂ ಪ್ರೌಢಶಾಲೆಯ ಎನ್‌ಸಿಸಿ ಶಿಕ್ಷಕ ಜಿ.ಆರ್.ತಾಂಡೇಲ್, ಪತಂಜಲಿ ಸಮಿತಿಯ ಸದಸ್ಯರಾದ ರಾಜು ಹರಿಕಂತ್ರ ಕಣಗೀಲ್, ಅಭಯ ಮರಬಳ್ಳಿ, ರಾಮಾ ನಾಯ್ಕ, ಡಾ.ವಿಜಯದೀಪ, ಯೋಗಿತಾ ಶೆಟ್ಟಿ, ಲತಾ ನಾಯ್ಕ, ನಾಗವೇಣಿ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು. ಶ್ರೇಯಾ ಮತ್ತು ಆರ್ಯ ಶೆಟ್ಟಿ ಸ್ವಾಗತಗೀತೆ ಹಾಡಿದರು. ಶಿಕ್ಷಕ ವಿ.ಕೆ.ನಾಯರ ಸ್ವಾಗತಿಸಿದರು. ಸ್ಮಿತಾ ರಾಯಚೂರ್ ವಂದಿಸಿದರು. ಪ್ರಶಾಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top