ಹೊನ್ನಾವರ: ದಕ್ಷ ಪೊಲೀಸ್ ಅಧಿಕಾರಿ ಎಂದು ಜನಮನ್ನಣೆಗಳಿಸಿ ವರ್ಗಾವಣೆಗೊಂಡ ಸಿಪಿಐ ಶ್ರೀಧರ್ ಎಸ್.ಆರ್. ಅವರಿಗೆ ಪಟ್ಟಣದ ಪ್ರತಿಭೋದಯದಲ್ಲಿ ‘ನಾಗರಿಕ ಸನ್ಮಾನ’ ಕಾರ್ಯಕ್ರಮ ನೇರವೇರಿತು.
ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ ನಾಗರಾಜ ನಾಯ್ಕಡ್ ಮಾತನಾಡಿ, ತಾಲೂಕಿನಲ್ಲಿ ಅವರು ನೆರೆ, ಅಪಘಾತ, ಪ್ರತಿಭಟನೆಯ ಸಮಯದಲ್ಲಿ ಕರ್ತವ್ಯ ನಿಭಾಯಿಸುವಾಗಿ ಅಚ್ಚುಕಟ್ಟಾಗಿ, ಕಾನೂನಿನ ಚೌಕಟ್ಟಿನೊಳಗೆ ನಿರ್ವಹಿಸುವ ಜೊತೆ ಮಾನವೀಯ ಮೌಲ್ಯಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ಘಟನೆ ನಡೆದ ಸಂದರ್ಭದಲ್ಲಿ ಚಾಕಚಕ್ಯತೆಯಿಂದ ಕೆಲಸ ಮಾಡುತ್ತಾರೆ. ಸೂಕ್ಷ್ಮ ವಿಷಯಗಳನ್ನು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮೇಲಿನ ಅಭಿಮಾನದಿಂದ ಇಂದು ಜಾತ್ಯತೀತ, ಪಕ್ಷಾತೀತವಾಗಿ ಸನ್ಮಾನಿಸದ್ದಾರೆ. ಅವರ ಮುಂದಿನ ಸೇವಾವಧಿಯು ಉತ್ತಮವಾಗಿರಲಿ ಎಂದು ಶುಭಹಾರೈಸಿದರು.
‘ನಾಗರಿಕ ಸನ್ಮಾನ’ ಸ್ವೀಕರಿಸಿದ ಸಿಪಿಐ ಶ್ರೀಧರ್ ಎಸ್.ಆರ್. ಮಾತನಾಡಿ, ಹೊನ್ನುರು ಎಂದು ಹಿರಿಮೆ ಇರುವ ಈ ತಾಲೂಕಿನ ಜನತೆಯ ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕೇವಲ ಪೊಲೀಸರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ. ಜನತೆ, ಜನಪ್ರತಿನಿಧಿ, ಅಧಿಕಾರಿ ವರ್ಗ,ಮಾಧ್ಯಮದವರು ಎಲ್ಲರು ಸೇರಿ ಕೆಲಸ ಮಾಡಿದರೆ ಶಾಂತಿಯುತ ಸಮಾಜವನ್ನು ನಿರ್ಮಾಣ ಮಾಡಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ನೀಡಲು ಸಾಧ್ಯ. ಇಲ್ಲಿನ ಜನತೆ ಪೊಲೀಸ್ ಇಲಾಖೆಯ ಬಗ್ಗೆ ಸಾಕಷ್ಟು ಪ್ರೀತಿ ವಿಶ್ವಾಸವನ್ನು ತೋರಿಸಿದ್ದಾರೆ. ಇದು ಒಂದು ಹೃದಯ ಸ್ಪರ್ಶಿ ಸನ್ಮಾನ ಎಂದು ತಾಲೂಕಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‌ಪಿ ಶ್ರೀಕಾಂತ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸಮಯದಲ್ಲಿ ಸನ್ಮಾನ ಸ್ವೀಕರಿಸುದು ಕಷ್ಟವಾಗಿದೆ. ಆದರೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿರುದರಿಂದಲೇ ಇಂದು ಹಬ್ಬದ ರೀತಿ ಜನಸಾಗರ ಸೇರುವ ಮೂಲಕ ಸನ್ಮಾನ ನಡೆದಿದೆ ಎಂದರು.
ಐವತ್ತಕ್ಕೂ ಅಧಿಕ ಸಂಘಟನೆ ಹಾಗೂ ವೈಯಕ್ತಿಕವಾಗಿ ಸನ್ಮಾನಿಸುವ ಮೂಲಕ ಬಿಳ್ಕೋಡು ಶುಭ ಹಾರೈಸಿದರು. ಈ ವೇಳೆ ಇ.ಓ ಸುರೇಶ ನಾಯ್ಕ, ಪಿಎಸೈ ಮಹಾಂತೇಶ ನಾಯಕ, ಸಾವಿತ್ರಿ ನಾಯಕ, ಮಂಜೇಶ್ವರ ಚಂದಾವರ ಉಪಸ್ಥಿತರಿದ್ದರು. ಸಂಘಟನೆಯ ನೇತೃತ್ವ ವಹಿಸಿದ ಸತ್ಯ ಜಾವಗಲ್ ಸ್ವಾಗತಿಸಿ, ದೃಶ್ಯಮಾಧ್ಯಮ ಸಂಯೋಜಕ ಜಗದೀಶ ಭಾವೆ ವಂದಿಸಿದರು. ಸೇಪಸ್ಟಾರ್ ಮ್ಯಾನೇಜಿಂಗ್ ಡೈರಕ್ಟರ ಜಿ.ಜಿ.ಶಂಕರ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಯುವ ಜನಸೇವಾಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.