ಕಾರವಾರ: ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ತಂಡವು ಕುಂದು ಕೊರತೆ ನಿವಾರಣಾ ಸಭೆಯನ್ನು ನಡೆಸಲು ಮತ್ತು ಯಾವುದೇ ಮಕ್ಕಳ ಹಕ್ಕುಗಳ ಉಲ್ಲಂಘನೆಯ ವಿರುದ್ಧ ದೂರುಗಳನ್ನು ತೆಗೆದುಕೊಳ್ಳಲು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಬೀದಿ ಮಕ್ಕಳು, ಶಾಲಾ ಮಕ್ಕಳು, ಪೋಷಕರು, ಶಿಶು ಪಾಲನಾ ಸಂಸ್ಥೆಗಳು, ಮನೆಯ ಮಕ್ಕಳು, ವಸತಿ/ತರಬೇತಿ ಪಡೆಯುವ ಸಂಸ್ಥೆಗಳು ಸೇರಿದಂತೆ ಎಲ್ಲಾ ವಿಭಾಗಗಳ ಮಕ್ಕಳು ಮತ್ತು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಆಯೋಗ/ಪೀಠದ ಮುಂದೆ ಬಂದು ದೂರನ್ನು ಸಲ್ಲಿಸಬಹುದು.
ನಗರದ ಕಾಜುಬಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಫೆ.06ರ ಬೆಳಿಗ್ಗೆ 10ರಿಂದ ಸಭೆ ಆರಂಭವಾಗಲಿದ್ದು, 9ಗಂಟೆಗೆ ನೋಂದಣಿ ಆರಂಭವಾಗಲಿದೆ. ಅಪಾಯಕಾರಿ ಉದ್ಯೋಗದಲ್ಲಿ, ಗೃಹ ಕಾರ್ಮಿಕರಂತೆ ಬಾಲಕಾರ್ಮಿಕರನ್ನು ತೊಡಗಿಸಿಕೊಳ್ಳುವುದು. ರಕ್ಷಿಸಲ್ಪಟ್ಟ ಬಾಲಕಾರ್ಮಿಕರನ್ನು ಸ್ವದೇಶಕ್ಕೆ ಕಳುಹಿಸುವುದು. ಬಾಕಿ /ಪರಿಹಾರವನ್ನು ಪಾವತಿಸದಿರುವುದು. ರಸ್ತೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಮಗು, ಆಸಿಡ್ ದಾಳಿ ಸಂಬoಧಿಸಿದ ವಿಷಯಗಳ ಬಗ್ಗೆ ಇಲ್ಲಿ ಚರ್ಚೆ ಮಾಡಬಹುದಾಗಿದೆ.
ಬಲವಂತದ ಭಿಕ್ಷೆ, ಪೋಷಕರು/ಯಾವುದೇ ವ್ಯಕ್ತಿಯೊಂದಿಗೆ ಬೀದಿಗಳಲ್ಲಿ ಭಿಕ್ಷೆ ಬೇಡುವುದು. ಕೌಟುಂಬಿಕ ಹಿಂಸೆಗೆ ಬಲಿಯಾದ ಮಗು, ಹೆಚ್.ಐ.ವಿ. ಸ್ಥಿತಿ ಆಧಾರದ ಮೇಲೆ ಮಗುವಿನ ತಾರತಮ್ಯ. ದೈಹಿಕ ನಿಂದನೆ/ ಆಕ್ರಮಣ/ ಪರಿತ್ಯ/ ನಿರ್ಲಕ್ಷಿಸಿದ ಮಗು, ಪೊಲೀಸರಿಂದ ಬೆಳೆಸಿದ ಮಗು, ಅಕ್ರಮ ದತ್ತು, ಸಿಸಿಐಯಲ್ಲಿ ಮಗುವಿನ ದುರ್ಬಳಕೆ/ಅಸಭ್ಯ ವರ್ತನೆ, ಸಿಸಿಐ ಮೂಲಕ ಮಗುವಿನ ಮಾರಾಟ, ಮಕ್ಕಳ ಮೇಲಿನ ದೌರ್ಜನ್ಯ, ಮಗುವಿನ ಮಾರಾಟ, ನಿರ್ಲಕ್ಷದಿಂದ ಸಾವಿಗೊಳಗಾದ ಮಗು, ಅಪಹರಣ, ಕಾಣೆಯಾದ ಮಗು, ಆತ್ಮಹತ್ಯೆ, ಸಾಮಾಜಿಕ ಮಾಧ್ಯಮ ಮುಖಾಂತರ ಮಕ್ಕಳ ಹಕ್ಕುಗಳ ಉಲ್ಲಂಘನೆ, ನೆರೆಹೊರೆಯಲ್ಲಿ ಶಾಲೆಯಿಲ್ಲದಿರುವುದು, ಮೂಲಭೂತ ಸೌಕರ್ಯಗಳ ಕೊರತೆ, ಶಾಲೆಯಲ್ಲಿ ದೈಹಿಕ ಹಿಂಸೆ, ಶಾಲಾ ಪ್ರವೇಶ ನಿರಾಕರಣೆ, ಅಂಗವೈಕಲ್ಯ ಸಂಬAಧಿತ ದೂರು, ಪಠ್ಯಪುಸ್ತಕಗಳಿಗೆ ಸಂಬoಧಿಸಿದ ದೂರುಗಳು, ಶೈಕ್ಷಣಿಕ ಪ್ರಾಧಿಕಾರದಿಂದ ಪಠ್ಯಕ್ರಮ ಮೌಲ್ಯಮಾಪನ ಕಾರ್ಯವಿಧಾನವನ್ನು ರೂಪಿಸಲಾಗದೆ ಇರುವ ಕುರಿತು, ಶಾಲಾ ಆವರಣದ ದುರ್ಬಳಕೆ, ಶಾಲೆಯ ಕಟ್ಟಡವನ್ನು ಮುಚ್ಚುವ (ಸ್ವಾಧೀನ ಪಡೆಸಿಕೊಳ್ಳುವ ಸಂದರ್ಭದಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದಿರುವುದು, ಲೈಂಗಿಕ ದೌರ್ಜನ್ಯ, ಪರಿಹಾರ, ವೈದ್ಯಕೀಯ ನಿರ್ಲಕ್ಷತೆ, ರೋಗ ಹಾಗೂ ಚಿಕಿತ್ಸೆಯಲ್ಲಿ ವಿಳಂಭ, ನಿಷ್ಕ್ರಿಯತೆಗೆ ಸಂಬಂಧಿಸಿದಂತೆ ದೂರುಗಳು, ಅಪೌಷ್ಠಿಕತೆ, ಮಧ್ಯಾಹ್ನದ ಊಟ, ಮಾದಕ ವಸ್ತುಗಳ ದುರ್ಬಳಕೆ, ಬಾಲ್ಯದ ಬೆಳವಣಿಗೆಯ ಅಸ್ವಸ್ಥೆಗಳಿಗೆ ಮನರ್ವಸತಿ ಒದಗಿಸುವ ಕುರಿತು ದೂರು ನೀಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.6ಕ್ಕೆ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಸಭೆ
