Slide
Slide
Slide
previous arrow
next arrow

ಇಂದು ಯಲ್ಲಾಪುರ ಜಾತ್ರೆಯ ಪ್ರಥಮ ಹೊರ ಮಂಗಳವಾರ

300x250 AD

ಯಲ್ಲಾಪುರ: ಫೆಬ್ರುವರಿ 22 ರಿಂದ ಮಾರ್ಚ್ 2 ರವರೆಗೆ ಅದ್ದೂರಿಯಾಗಿ ನಡೆಯುವ ಯಲ್ಲಾಪುರ ಗ್ರಾಮದೇವಿ ಜಾತ್ರೆ ಮೊದಲ ಹೊರ ಮಂಗಳವಾರ ಪ್ರಾರಂಭವಾಗಲಿದೆ. ಇಂದಿನಿoದ ಮೂರು ಹೊರ ಮಂಗಳವಾರದoದು ಯಲ್ಲಾಪುರ ಪಟ್ಟಣ ನಿವಾಸಿಗಳು, ಅದರಲ್ಲಿಯೂ ಹಿಂದುಗಳು ಬೆಳಿಗ್ಗೆ 10ರಿಂದ ಸಂಜೆ 4:30ರ ವರೆಗೆ ಮನೆಯಿಂದ ಹೊರಗೆ ಉಳಿದು ಜಾತ್ರೆ ಪೂರ್ವದ ಸಂಪ್ರದಾಯವನ್ನು ಆಚರಿಸುತ್ತಾರೆ.
ಯಲ್ಲಾಪುರ ಗ್ರಾಮದೇವಿ ಜಾತ್ರೆ ಪ್ರಾರಂಭವಾಗುವ ಮುನ್ನ ಈ ಸಂಪ್ರದಾಯ ಆಚರಿಸುವ ಪದ್ಧತಿ ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಂಗಳವಾರ ಬೆಳಿಗ್ಗೆ 10:00 ಗಂಟೆಯ ಒಳಗೆ ಮನೆಯನ್ನು ಶುಭ್ರವಾಗಿಸಿ, ದೇವರಿಗೆ ದೀಪ ಹಚ್ಚಿ ಪೂಜೆ ಸಲ್ಲಿಸಿ 10:00 ಗಂಟೆಯ ಸಮಯಕ್ಕೆ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮುಖ್ಯವಾಗಿ ಮನೆಯ ಸದಸ್ಯರೆಲ್ಲ ಮನೆಯಿಂದ ದೂರ ಉಳಿಯುತ್ತಾರೆ. ಬಹಳಷ್ಟು ಜನ ಸಮೀಪದ ಉದ್ಯಾನವನ, ಜಲಪಾತಗಳು ತಮ್ಮ ಹೊಲಗದ್ದೆಗಳು ಅಥವಾ ತೋಟದ ಮನೆಗಳಿಗೆ ತೆರಳುತ್ತಾರೆ. ಬೇರೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗದವರು ಮನೆಯಲ್ಲಿಯೇ ಬೆಳಿಗ್ಗೆ ಅಡುಗೆ ಸಿದ್ಧತೆ ಮಾಡಿಕೊಂಡು, ಐಬಿ ರಸ್ತೆಯ ಮಕ್ಕಳ ಉದ್ಯಾನವನ, ಎಪಿಎಂಸಿ ಎದುರಿನ ಅರಣ್ಯ ಇಲಾಖೆಯ ಉದ್ಯಾನವನಕ್ಕೆ ತೆರಳುತ್ತಾರೆ. ಪರಿಚಯಸ್ಥರೊಂದಿಗೆ ಮಾತನಾಡುತ್ತಾ, ಹರಟೆ ಹೊಡೆಯುತ್ತಾ ಸಂಜೆವರೆಗೂ ದಿನ ಕಳೆಯುತ್ತಾರೆ. ಸಂಜೆ 4:00 ಗಂಟೆ ನಂತರ ಮನೆಕಡೆಗೆ ಮುಖ ಮಾಡುವ ಕುಟುಂಬದವರು, 4:300ರ ನಂತರ ಮನೆಯ ಬಾಗಿಲನ್ನು ತೆರೆದು ಮುಂದಿನ ಹೊರ ಮಂಗಳವಾರ ಬರುವವರೆಗೆ ಎಂದಿನoತೆ ಸಹಜವಾಗಿ ಮನೆಯಲ್ಲಿರುತ್ತಾರೆ.
ಯಲ್ಲಾಪುರ ಪಟ್ಟಣಕ್ಕೆ ಹೊರ ಪ್ರದೇಶದಿಂದ ಬಂದ ಸರ್ಕಾರಿ ನೌಕರ ಅಧಿಕಾರಿಗಳು ಸಿಬ್ಬಂದಿಗಳು ಕೂಡ ಈ ಹೊರಮಂಗಳ ಪದ್ದತಿಯನ್ನು ಆಚರಿಸುತ್ತಿರುವುದು ಗಮನಾರ್ಹವಾಗಿದೆ. ಮಧ್ಯಾಹ್ನದ ಸಮಯಕ್ಕೆ ಕಚೇರಿಗಳಿಂದ ನೇರವಾಗಿ ತಮ್ಮ ಕುಟುಂಬ ಇರುವ ಉದ್ಯಾನವನ ಅಥವಾ ಇನ್ನಿತರ ಸ್ಥಳಗಳಿಗೆ ತೆರಳುವ ಸರ್ಕಾರಿ ಸಿಬ್ಬಂದಿಗಳು ಅಲ್ಲಿಗೆ ಊಟ ಮಾಡಿ ಮತ್ತೆ ಮಧ್ಯಾಹ್ನದ ಕೆಲಸಕ್ಕೆ ಹಿಂದಿರುಗುತ್ತಾರೆ. ಅದೇ ರೀತಿ ಶಾಲಾ ಕಾಲೇಜು ಮಕ್ಕಳು ಕೂಡ ಮಧ್ಯಾಹ್ನದ ಊಟದ ಸಮಯಕ್ಕೆ ತಮ್ಮ ತಾಯಿ ತಂದೆ ಇರುವ ಹೊರಮಂಗಳವಾರ ಆಚರಿಸುವ ಪ್ರದೇಶಕ್ಕೆ ತೆರಳಿ ಅಲ್ಲಿ ಊಟ ಮಾಡಿ ಮರಳಿ ಮಧ್ಯಾಹ್ನ ಶಾಲೆಗೆ ತೆರಳುತ್ತಾರೆ.
ಹೊರಮಂಗಳವಾರ ಆಚರಣೆಗೆ ಒಂದು ಧಾರ್ಮಿಕ ಪದ್ಧತಿಯಾಗಿದ್ದು, ಯಲ್ಲಾಪುರದಲ್ಲಿ ಹೊರಮಂಗಳವಾರ ಆಚರಿಸುವ ಸಂದರ್ಭದಲ್ಲಿ ಸದ್ದು ಗದ್ದಲ ಆಗದಂತೆ ಶಾಂತವಾಗಿರಬೇಕು ಎಂದು ಪದ್ಧತಿ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಹೊರ ಮಂಗಳವಾರವನ್ನು ಪಿಕ್ ನಿಕ್ ರೀತಿಯಲ್ಲಿ ಆಚರಿಸಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಕಳೆದ ಜಾತ್ರೆಯಲ್ಲಿ ಐಬಿ ರಸ್ತೆಯ ಮಕ್ಕಳ ಉದ್ಯಾನವನದಲ್ಲಿ ಸಂಘಟನೆ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಮೋಜಿನ ಆಟ ಪ್ರಾರಂಭ ಮಾಡಿತ್ತು. ಈ ಸಂದರ್ಭದಲ್ಲಿ ಬೃಹತ್ ಧ್ವನಿವರ್ಧಕ ಬಳಸಿತ್ತು. ಈ ಚಟುವಟಿಕೆಗಳು ಜಾತ್ರೆಯ ಧಾರ್ಮಿಕ ಆಚರಣೆ ಪದ್ಧತಿಯ ಪ್ರಕಾರ ಮಾಡುವ ಜನರ ಕಣ್ಣು ಕೆಂಪಾಗಲು ಕಾರಣವಾಗಿತ್ತು. ಅಂತಹ ಆಚರಣೆಗಳು ನಡೆಯಕೂಡದು ಎಂದು ಕೂಡ ಈ ಬಾರಿ ಜಾತ್ರೆಗೆ ಹಲವು ಸಭೆಗಳಲ್ಲಿ ಕೆಲವರು ಸೂಚಿಸಿದ್ದರು.
ಅದೇನೇ ಇದ್ದರೂ ಕೂಡ ಯಲ್ಲಾಪುರದ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನ ಜಾತ್ರೆಯಷ್ಟೆ ನಿರೀಕ್ಷೆಯನ್ನು ಹೊರಮಂಗಳವಾರದoದು ಕೂಡ ಹೊಂದಿರುತ್ತಾರೆ. ಹೊರ ಮಂಗಳವಾರವನ್ನು ಹಬ್ಬದಂತೆ ಆಚರಿಸುತ್ತಾರೆ. ಹಿಂದಿನ ಹೊರಮಂಗಳವಾರದoದು ಹಿಂದೆ ಕೆಲವು ಸಂಘ ಸಂಸ್ಥೆಗಳು ಮನೆಯಿಂದ ಹೊರಗಿದ್ದ ಜನರಿಗಾಗಿ ಮಧ್ಯಾಹ್ನದ ಭೋಜನ ವ್ಯವಸ್ಥೆಗಳನ್ನು ಕೂಡ ಮಾಡಿರುವದನ್ನು ಇಲ್ಲಿ ನೆನಪಿಸಬಹುದು. ಹೊರಮಂಗಳವಾರದoದು ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದು ಪಟ್ಟಣದ ಹೃದಯ ಭಾಗದಲ್ಲಿ ಕಾಣಬಹುದಾಗಿದೆ. ಜನವರಿ 31ರ ಪ್ರಥಮ ಹೊರ ಮಂಗಳವಾರ, ಫೆಬ್ರುವರಿ 7ರಂದು ಎರಡನೇ ಹೊರಗೆ ಮಂಗಳವಾರ ಹಾಗೂ ಫೆಬ್ರುವರಿ 14ರಂದು ಮೂರನೇ ಹೊರಮಂಗಳವಾರ ಗ್ರಾಮದೇವಿ ಅಪ್ಪಣೆ ಪಡೆದು ದೇವಸ್ಥಾನ ಸಮಿತಿಯವರು ನಿಗದಿಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top