ಕುಮಟಾ : ಪಟ್ಟಣದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಘಟನೆ ವರದಿಯಾಗಿದೆ. ಅಳ್ವೇಕೊಡಿಯ ಬಾಷಾ ಶೇಕ್ ಎನ್ನುವರಿಗೆ ಸೇರಿದ ಗುಜರಿ ಅಂಗಡಿಗೆ ಬೆಂಕಿ ತಗುಲಿದ್ದು ಬೆಂಕಿ ನಂದಿಸಲು ಕುಮಟಾ ಹೊನ್ನಾವರ ಅಂಕೊಲಾ ಭಟ್ಕಳ ಕಾರವಾರ ಅಗ್ನಿಶಾಮಕದಳದವರು ಸತತವಾಗಿ 6 ತಾಸುಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದರೂ ಬೆಂಕಿ ಮತ್ತೂ ಎಲ್ಲಾ ದಿಕ್ಕಿನಲ್ಲೂ ಹಬ್ಬುತ್ತಿದ್ದೆ ಎಂದು ವರದಿಯಾಗಿದೆ.
ಘಟನೆ ಸುತ್ತಮುತ್ತಲ ಸ್ಥಳೀಯ ಮನೆಯವರಿಗೆ ಆತಂಕವನ್ನು ಉಂಟು ಮಾಡಿದ್ದು, ಸ್ಥಳಿಯವಾಗಿದ್ದ ಕೆಲ ಮನೆಗಳೆಲ್ಲಾ ಖಾಲಿ ಮಾಡಿ, ಸ್ಥಳಿಯರೂ ಸಹ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಗುಜರಿ ಗೊಡೌನಿನಲ್ಲಿ ಬಾರಿ ಪ್ರಮಾಣದಲ್ಲಿ ಕಚ್ಚಾವಸ್ತುಗಳು ಸಂಗ್ರಹಿಸಿದ್ದು ಬೆಂಕಿ ಇನ್ನೂ ಹೆಚ್ಚಾಗಲು ಕಾರಣವಾಗಿದೆ. ಅಗ್ನಿಶಾಮಕದ ವಾಹನವನ್ನು ಒಳಗೆ ತರಲು ದಾರಿ ಇಲ್ಲದೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಸುಮಾರು ಎರಡುವರೆ ಎಕರೆ ಜಮೀನಿನಲ್ಲಿ ಕಚ್ಚಾವಸ್ತು ಇದ್ದು ಬೆಂಕಿಯ ಕೆನ್ನಾಲಿಗೆಗೆ ವಸ್ತುಗಳು ಆಹುತಿಯಾಗುವ ಜೊತೆಗೆ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಇಲ್ಲಿ ಹತ್ತಿರದಲ್ಲಿ ಗ್ಯಾಸ್ ಬಂಕರ್ ಹಾಗೂ ಪೆಟ್ರೋಲ್ ಬಂಕ್ ಇರುವುದು ಇನ್ನೂ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.