• Slide
  Slide
  Slide
  previous arrow
  next arrow
 • ರಾಜಕೀಯದಲ್ಲಿ ಹುದ್ದೆ ಶಾಶ್ವತವಲ್ಲ, ನಿಷ್ಠೆ ಶಾಶ್ವತವಾದದ್ದು: ಭೀಮಣ್ಣ ನಾಯ್ಕ

  300x250 AD

  ಯಲ್ಲಾಪುರ: ರಾಜಕಾರಣದಲ್ಲಿ ಹುದ್ದೆಗಳು ಇರುತ್ತವೆ, ಹೋಗುತ್ತವೆ. ಆದರೆ ನಿಷ್ಠೆ ಎನ್ನುವುದು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹುದ್ದೆ ಇದ್ದಾಗ ಜವಾಬ್ದಾರಿಯಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ತನಗೆ ಎಲ್ಲವನ್ನೂ ನೀಡಿದೆ. ಪಕ್ಷದ ಹಿರಿಯ ನಾಯಕರು ನನಗೆ ಬಹಳ ಪ್ರೀತಿ ತೋರಿಸಿದ್ದಾರೆ ಎಂದು ನಿಕಟಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯ್ಕ ಹೇಳಿದರು.
  ಅವರು ಶನಿವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ, ಬ್ಲಾಕ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ಸಿನ ವಿವಿಧ ಘಟಕಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಿಯೂ ಕೂಡ ಗುಂಪುಗಾರಿಕೆಗೆ ಅವಕಾಶ ನೀಡದಂತೆ ತಾಳ್ಮೆಯಿಂದ ಸ್ಥಳೀಯ ಮುಖಂಡರ ಹಾಗೂ ಕಾರ್ಯಕರ್ತರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ. ಒಂದುವೇಳೆ ಗುಂಪುಗಾರಿಕೆ ಆಗಿದ್ದರೂ ಕೂಡ ಅದು ತಾತ್ಕಾಲಿಕ ಗುಂಪುಗಾರಿಕೆಯಾಗಿದ್ದು, ಅದನ್ನು ಬಗೆಹರಿಸಲಾಗಿದೆ. ಜಿಲ್ಲೆಯ ಎಲ್ಲಾ ಬ್ಲಾಕ್ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ವಿಂಗ್‌ಗಳ ಅಧ್ಯಕ್ಷರು ಹಾಗೂ ಸದಸ್ಯರು, ಬೂತ್ ಮಟ್ಟದ ಕಾರ್ಯಕರ್ತರಿಂದ ಮೇಲ್ಮಟ್ಟದ ನಾಯಕರು ಕಳೆದ 13 ವರ್ಷದಿಂದ ನನ್ನೊಂದಿಗೆ ಸಹಕಾರ ನೀಡಿದ್ದಾರೆ ಎಲ್ಲರೂ ಸೇರಿ ಪಕ್ಷವನ್ನು ಗಟ್ಟಿಗೊಳಿಸುವಂತಹ ಪ್ರಯತ್ನ ಮಾಡಿದ್ದೇವೆ ಎನ್ನುವ ನೆಮ್ಮದಿ ಇದೆ ಎಂದು ಹೇಳಿದ ಅವರು, ಮುಂದಿನ ಚುನಾವಣೆಯಲ್ಲಿ ಪಕ್ಷ ತನಗೆ ಟಿಕೆಟ್ ನೀಡಲಿ ಅಥವಾ ನೀಡದೇ ಇರಲಿ. ತಾನೋರ್ವ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
  ಭೀಮಣ್ಣ ನಾಯ್ಕ ಅವರನ್ನು ಸನ್ಮಾನಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ ಮಾತನಾಡಿ, ಭೀಮಣ್ಣ ನಾಯ್ಕರವರು ಯಾರೂ ಇಲ್ಲದ ಕಾಲದಲ್ಲಿ, ಕಷ್ಟಕರ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೆಸ್ ಅನ್ನು ಮುನ್ನಡೆಸಿದ್ದಾರೆ. ಸರಳ ಸಜ್ಜನಿಕೆಯ ಮುಂಗೋಪಿಯಲ್ಲದ ವ್ಯಕ್ತಿ ಅವರು. ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ಪಕ್ಷದ ನಾಯಕರು ಬಯಕೆಯನ್ನು, ನಮ್ಮ ಬೇಡಿಕೆಗಳನ್ನು ಅವರು ಬಿಸಿಸಿ ಅಧ್ಯಕ್ಷರಾಗಿ ಈಡೇರಿಸಿದ್ದಾರೆ. ಐದು ವರ್ಷದ ಹಿಂದೆಯೇ ಅವರು ರಾಜೀನಾಮೆ ನೀಡಿದ್ದರು. ಪಕ್ಷ ಅವರ ನೇತೃತ್ವವನ್ನು ಐದು ವರ್ಷ ಮುಂದುವರೆಸಿತ್ತು. ಬದಲಾವಣೆ ನಿರೀಕ್ಷಿತ ಮುಂದೆಯೂ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ ಎಂದರು.
  ನಿಕಟಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ ಮಾತನಾಡಿ, ತಾವಾಗಿಯೇ ಬೇರೆಯವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಶಾಂತಾರಾಮ ಹೆಗಡೆಯವರಂತೆ ಭೀಮಣ್ಣ ನಾಯಕರು ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ತಮ್ಮ ಉದ್ಯಮದ ಲಾಭವನ್ನು ಪಕ್ಷದ ಸಂಘಟನೆಗೆ ಹಾಕುವುದರ ಮೂಲಕ ಯಾರಿಗೂ ಯಾವುದೇ ಕೊರತೆ ಬಾರದಂತೆ ನೋಡಿ ಕೊಂಡಿದ್ದಾರೆ. ಶಾಸಕರಿಗೆ ಸರಿ ಸಮಾನವಾಗಿ ನಿಲ್ಲುವಂತವರು ಅವರು. ನಮ್ಮಂತಹ ಕಾರ್ಯಕರ್ತರಿಗೆ ರಕ್ಷಣೆ ಮಾಡಿದ್ದಾರೆ. ಅಂತಹ ನಾಯಕತ್ವ ಗುಣ ಭೀಮಣ್ಣನವರದು ಎಂದರು.
  ಮಹಿಳಾ ಸೆಲ್ ಕಾಂಗ್ರೆಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸರಸ್ವತಿ ಗುನಗಾ ಮಾತನಾಡಿ, ಭೀಮಣ್ಣ ನಾಯ್ಕ ಅವರ ನಾಯಕತ್ವ ಗುಣ ಎಲ್ಲರಿಗೂ ಬರಬೇಕು ಎಂದರು.
  ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಕೆ.ಭಾಗ್ವತ, ತಾಲೂಕಾ ಕಾಂಗ್ರೆಸ್ ಅಧ್ಯಕ್ಷೆ ಪೂಜಾ ನೇತ್ರೇಕರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ ಮರಾಠೆ, ಸಾಮಾಜಿಕ ಜಾಲತಾಣದ ತಾಲೂಕ ಉಪಾಧ್ಯಕ್ಷೆ ಮುಶ್ರತ್ ಖಾನ್, ರವಿಚಂದ್ರ ನಾಯ್ಕ, ಸೀತಾ ಸಿದ್ದಿ, ಎಂ.ಡಿ.ಮುಲ್ಲಾ, ಜಿ.ವಿ.ಭಟ್, ಎಂ.ಡಿ.ಗೌಸ್, ಪ್ರಭಾಕರ ಭಟ್ ಇನ್ನಿತರರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top