• Slide
    Slide
    Slide
    previous arrow
    next arrow
  • ಸೂರ್ಯನಾರಾಯಣ‌ ಪ್ರೌಢಶಾಲಾ ವಾರ್ಷಿಕ‌ ಸ್ನೇಹ ಸಮ್ಮೇಳನ: ಹಸ್ತಪತ್ರಿಕೆ ಬಿಡುಗಡೆ

    300x250 AD

    ಶಿರಸಿ: ಇತ್ತೀಚೆಗೆ ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ  ಬಿಸಲಕೊಪ್ಪದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್ ಹೆಗಡೆ ಹುಗ್ಗಿಕೊಪ್ಪ ಇವರು ಆಗಮಿಸಿ ವಿದ್ಯಾರ್ಥಿಗಳ ಹಸ್ತಪತ್ರಿಕೆ ‘ರವಿ ರಶ್ಮಿ’ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

    ಮಕ್ಕಳ ಸೃಜನಶೀಲತೆ ಹಾಗೂ ಅವರ ಪ್ರತಿಭೆ ಹೊರಬರಲು ಇಂತಹ ಹಸ್ತ ಪತ್ರಿಕೆಗಳು ಅತಿ ಅಗತ್ಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಹೆಗಡೆ ಹೊಡೆಲಕೊಪ್ಪ ವಹಿಸಿ ಮಕ್ಕಳಲ್ಲಿ ಶಿಸ್ತು ಮತ್ತು ಆರೋಗ್ಯದ ಗುಟ್ಟನ್ನು ಪ್ರಯೋಗದ ಮೂಲಕ ತೋರಿಸಿ ಶುಭ ಕೋರಿದರು. ಮುಖ್ಯೋಪಾಧ್ಯಾಯ ಗಣೇಶ್ ಭಟ್ ವಾನಳ್ಳಿ ವಾರ್ಷಿಕ ವರದಿ ವಾಚನವನ್ನು ಮಾಡಿದರು. ಈ ಸಂದರ್ಭದಲ್ಲಿ ವಿಷಯವಾರು ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಕನ್ನಿಕಾ ಪರಮೇಶ್ವರಿ ಹೆಗಡೆ ಇವಳಿಗೆ ಶಿಕ್ಷಕರು ನೀಡುವ ಬಹುಮಾನ ಗಳನ್ನು ವಿತರಿಸಲಾಯಿತು. ಅಲ್ಲದೆ ಕ್ರೀಡಾಕೂಟದಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಶಿಕ್ಷಕ ಪ್ರಸಾದ ಹೆಗಡೆ ನಿರ್ವಹಿಸಿದರೆ, ಶ್ರೀಮತಿ ಸವಿತಾ ಭಟ್ ಸ್ವಾಗತಿಸಿದರು. ಬಿ.ಎಂ. ಭಜಂತ್ರಿ ವಂದಿಸಿದರು. ಶಿಕ್ಷಕರಾದ ಲೋಕನಾಥ್ ಹರಿತಂತ್ರ ಹಾಗೂ ಸತೀಶ್ ಹೆಗಡೆ ಹಾಗೂ ಗಣೇಶ ಹೆಗಡೆ ವೇದಿಕೆಯಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top