Slide
Slide
Slide
previous arrow
next arrow

ಅಧರ್ಮದಿಂದ ಸಿಗುವ ಸುಖ ಶಾಶ್ವತವಲ್ಲ: ಸ್ವರ್ಣವಲ್ಲಿ ಶ್ರೀ

300x250 AD

ಯಲ್ಲಾಪುರ: ಜಾಗತಿಕವಾಗಿ ಅಧರ್ಮದಿಂದ ಸುಖ ಸಿಗುತ್ತದೆ ಎನ್ನುವ ಭ್ರಾಂತಿಯಲ್ಲಿ ಜನರಿದ್ದಾರೆ. ಆದರೆ ಅದು ಶಾಶ್ವತ ಸುಖವಲ್ಲ. ಧರ್ಮದ ಮೂಲಕ ಬರುವ ಸುಖವೇ ಶಾಶ್ವತವಾದ ಸುಖ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಶ್ರೀ ನುಡಿದರು.
ಪಟ್ಟಣದ ಸಬಗೇರಿಯಲ್ಲಿ ಶನಿವಾರ ಸಂಜೆ ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರಿ ಸಂಘ ಆವಾರದಲ್ಲಿ ನೂತನವಾಗಿ ನಿರ್ಮಿಸಲಾದ ‘ಸಹಕಾರಿ ಸಂಕೀರ್ಣ’ ಕಟ್ಟಡವನ್ನು ಉದ್ಘಾಟಿಸಿ, ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ವಿದ್ಯೆಯಿಂದ ವಿನಯವನ್ನು ಗಳಿಸುತ್ತಾನೆ, ವಿನಯದಿಂದ ಅರ್ಹತೆಯನ್ನು ಗಳಿಸುತ್ತಾನೆ. ಅರ್ಹತೆಯಿಂದ ಹಣಗಳಿಸುತ್ತಾನೆ, ಹಣದಿಂದ ಧರ್ಮ ಆಗಬೇಕು ತನ್ಮೂಲಕ ಸುಃಖವನ್ನು ಸವಿಯಬೇಕು. ಧರ್ಮದ ಮುಖ್ಯ ಅಂಶವಿದು. ಧರ್ಮದಿಂದ, ಯಜ್ಞ ಯಾಗಾದಿಗಳಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಧರ್ಮದ ಕಾರಣಕ್ಕೆ ಭಾರತ ದೇಶ ಇಂದು ಜಾಗತೀಕ ಮಟ್ಟದ ಅನೇಕ ಸವಾಲುಗಳನ್ನು ಎದುರಿಸಿ ನಿಂತಿದೆ ಎಂದ ಶ್ರೀಗಳು ರಥ ಸಪ್ತಮಿಯಂದು ಲೋಕಾರ್ಪಣೆಗೊಂಡ ಈ ಕಟ್ಟಡ ಸಂಘಕ್ಕೆ ಲಾಭ ತಂದು ಕೊಡಲಿದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹರಿಸಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಸಹಕಾರಿ ಸಂಸ್ಥೆ ಜೀವಂತವಾಗಿರದ ಕಡೆಗಳಲ್ಲಿ ರೈತ ಬಹಳಷ್ಟು ಕಷ್ಟ್ಟ ಎದುರಿಸುತ್ತಿದ್ದಾನೆ. ಎಲ್ಲಿಯವರೆಗೆ ಸಹಕಾರಿ ಸಂಸ್ಥೆ ಜೀವಂತವಾಗಿರುತ್ತದೆ. ಅಲ್ಲಿಯವರೆಗೆ ರೈತ ನೆಮ್ಮದಿಯಿಂದ ಇರುತ್ತಾನೆ. ನಮ್ಮ ಜಿಲ್ಲೆಯ ಹೆಚ್ಚು ಸಹಕಾರಿ ರತ್ನ ಪ್ರಶಸ್ತಿ ಲಭಿಸಿದೆ. ಸಂಘ ಗಟ್ಟಿಯಿದ್ದರೇ ರೈತ ಗಟ್ಟಿಯಿರುತ್ತಾನೆ. ರೈತ ಗಟ್ಟಿಯಿದ್ದಾಗ ಸಂಘ ಗಟ್ಟಿಯಿರುತ್ತದೆ. ಇವರಿಬ್ಬರು ಗಟ್ಟಿಯಾದಾಗ ಕೆಡಿಸಿಸಿ ಬ್ಯಾಂಕ್ ಗಟ್ಟಿಯಾಗುತ್ತದೆ ಎಂದು ಹೇಳಿದ ಅವರು, ಬಹಳಷ್ಟು ಹಳೆಯ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ರೈತರೊಂದಿಗೆ ಇನ್ನಿತರ ಗ್ರಾಹಕರು ವ್ಯವಹಾರ ನಡೆಸಿದಾಗ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಕಡವೆ ಹೆಗಡೆಯವರು ಅದನ್ನು ಮಾಡಿ ತೋರಿಸಿದ್ದಾರೆ. ಕೇವಲ ಸಂಘದ ಅಧ್ಯಕ್ಷರೊಬ್ಬರಿಂದಲೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಎಲ್ಲ ಸದಸ್ಯರು ಸಹಕಾರ ನೀಡಿದಾಗ ಸಹಕಾರಿ ಸಂಸ್ಥೆ ಬೆಳೆಯುತ್ತದೆ ಎಂದು ಹೇಳಿದರು.
ಉಪಾಧ್ಯಕ್ಷ ಟಿ.ಆರ್.ಹೆಗಡೆ ತೊಂಡೇಕೆರೆ ಮಾತನಾಡಿ, ನಮ್ಮ ಸಂಘಕ್ಕೆ 20 ಗುಂಟೆ ಜಾಗ ಉತ್ತಮ ವ್ಯವಹಾರಿಕ ಸ್ಥಳದಲ್ಲಿದೆ. ಹೀಗಾಗಿ ಇಲ್ಲಿ 30 ವಾಣಿಜ್ಯೋದ್ದೇಶದ ಮಳಿಗೆಗಳನ್ನು ನಿರ್ಮಾಣ ಮಾಡಿದ್ದೇವೆ. ಎಲ್ಲ ಮಳಿಗೆಗಳಿಗೂ ಬೇಡಿಕೆಯಿದೆ ಎಂದು ಹೇಳಿದರು.
ಟಿ.ಎಸ್.ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ಸಂಘದಲ್ಲಿಯ ಎಲ್ಲ ಸದಸ್ಯರು ಸಂಘದ ಬೆಳವಣಿಗೆಯಲ್ಲಿ ಶ್ರಮವಹಿಸಬೇಕು ಎಂದರು. ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಈ ಸಂದರ್ಭದಲ್ಲಿ ನಿರ್ದೇಶಕರಾದ, ಸುಬ್ರಾಯ ಭಟ್ಟ, ತಿಮ್ಮಣ್ಣ ಭಟ್ಟ, ಪ್ರಧಾನ ವ್ಯವಸ್ಥಾಪಕ ಎಂ.ಎಸ್.ಹೆಗಡೆ, ಅಪ್ಪು ಆಚಾರಿ, ಸಂತೋಷ ನಾಯ್ಕ, ಸುಜಾತಾ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.
ಕಟ್ಟಡದ ಗುತ್ತಿಗೆದಾರ ಎಸ್.ವಿ.ಭಟ್ ಹಾಗೂ ತೆರಿಗೆ ಸಲಹೆಗಾರ ವಿಘ್ನೇಶ್ವರ ಗಾಂವ್ಕರ್ ಅವರನ್ನು ಈ ಸಂದರ್ಭದಲ್ಲಿ ಶ್ರೀಗಳು ಸನ್ಮಾನಿಸಿದರು. ಎಲ್‌ಎಸ್‌ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಸ್ವಾಗತಿಸಿ, ಪ್ರಾಸ್ತಾವಿಕಗೈದರು. ಸಂಘದ ನಿರ್ದೇಶಕ ಆರ್.ಎಸ್.ಭಟ್ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top