Slide
Slide
Slide
previous arrow
next arrow

ಭುವನೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕದಂಬ ಸೈನ್ಯದ ಆಗ್ರಹ

300x250 AD

ಸಿದ್ದಾಪುರ; ಕನ್ನಡಿಗರ ಕುಲದೇವತೆ ಶ್ರೀ ಭುವನೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಕದಂಬ ಸೈನ್ಯದವರು ಆಗ್ರಹಿಸಿದ್ದಾರೆ. ಈಕುರಿತು ತಹಶೀಲ್ದಾರ್ ಮೂಲಕ ಮನವಿ ನೀಡಿದರು.

ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ ಕನ್ನಡ ಕುಲದೇವಿಯ ಭುವನೇಶ್ವರಿ ಕದಂಬರ ಕಾಲದಲ್ಲಿ ಶಂಕುಸ್ಥಾಪನೆಯಾಗಿ ಪ್ರಾರಂಭವಾಗಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣ ಕಾರ್ಯ ಮುಂದುವರಿಸಿದ್ದರು. ನಂತರ 1692 ರಲ್ಲಿ ಬಿಳಗಿ ಸಾಮಾಜ್ಯದ ಅರಸರು ಪೂರ್ಣಗೊಳಿಸಿದರು. ಕದಂಬರು, ವಿಜಯನಗರ ಸಾಮ್ರಾಜ್ಯ ಬೆಳಗಿ ಸಾಮ್ರಾಜ್ಯದ ಆರಸರುಗಳು ಆರಾಧಿಸುತ್ತಿದ್ದರು. ನಾಡ ದೇವತೆಯಾಗಿ ಮೈಸೂರು ರಾಜಮನೆತನದವರು ಆರಾಧಿಸುತ್ತಿದ್ದರು. ಇಷ್ಟೊಂದು ಹಿನ್ನಲೆ ಇರುವ ದೇವಾಲಯ ಅಭಿವೃದ್ಧಿಯಾಗದೆ ಇರುವುದು ಜನಪ್ರತಿನಿದಿನಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಕೂಡಲೇ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಒತ್ತಾಯ ಮಾಡುತ್ತಿದ್ದೇವೆ ಎಂದರು.

300x250 AD

ಇದಕ್ಕೂ ಮೊದಲು ಶಂಕರ ಮಠದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾಗಿನೆಲೆಯನ್ನು ಅಭಿವೃದ್ಧಿಪಡಿಸಿದಂತೆ ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಒತ್ತಾಯಿಸುತ್ತಿದ್ದೇವೆ ಎಂದು ಅಗ್ರಹಿಸಿದರು. ಕನ್ನಡದ ಪ್ರಥಮ ರಾಜಧಾನಿ ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದರು ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಶಿವಪ್ಪ, ಸಿರ್ಸಿ ತಾಲೂಕ ಸಂಚಾಲಕ ಗುತ್ಯಪ್ಪ ಮಾದರ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ರಾಮು, ಶಂಕರ ಮಠದ ಧರ್ಮಾಧಿಕಾರಿ ವಿಜಯ್ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top