Slide
Slide
Slide
previous arrow
next arrow

ಲಯನ್ಸ್ ಶಾಲಾ ಪ್ರಾಂಗಣದಲ್ಲಿ ಗಣರಾಜ್ಯೋತ್ಸವ ಸಂಭ್ರಮ

300x250 AD

ಶಿರಸಿ: 74ನೇ ಗಣರಾಜ್ಯೋತ್ಸವದ ಸಂಭ್ರಮವನ್ನು ಶಿರಸಿ ಲಯನ್ಸ್ ಶಾಲೆಯ ಪ್ರಾಂಗಣದಲ್ಲಿ ಸರಳವಾಗಿ ಅಷ್ಟೇ ವಿಶೇಷ ರೀತಿಯಿಂದ ಆಚರಿಸಲಾಯಿತು.
ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಲ. ಪ್ರೊ. ಎನ್.ವಿ.ಜಿ. ಭಟ್ ಇವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ, ಎಲ್ಲರಿಗೂ ಸಿಹಿ ವಿತರಿಸಿ ಸಂತಸ ಹಂಚಿಕೊಂಡರು.
ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಲ. ಪ್ರೊ.ರವಿ ನಾಯಕ್ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳಲ್ಲಿ, ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.
ಶಾಲೆಯ ಪ್ರಾಥಮಿಕ ವಿಭಾಗದ ಒಂದರಿಂದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ವಿಶಿಷ್ಟ ರೀತಿಯ ಕವಾಯಿತು ನೃತ್ಯ ಪ್ರದರ್ಶನ ಮತ್ತು ವಂದೇ ಮಾತರಂ ನೃತ್ಯವನ್ನು ಕೂಡ ವಿಶೇಷ ರೀತಿಯಲ್ಲಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೊಳಿಸಿದರು. ಶಾಲೆಯ ಶಿಕ್ಷಕಿರಾದ ಶ್ರೀಮತಿ ಸಂಧ್ಯಾ ಭಟ್ ಶ್ರೀಮತಿ ಲಕ್ಷ್ಮ್ಮೀ ಅಮೀನ್ ಮತ್ತು ಶ್ರೀಮತಿ ಚೇತನಾ ಪಾವಸ್ಕರ್ ಎರಡು ನೃತ್ಯಗಳನ್ನು ನಿರ್ದೇಶಿಸಿದ್ದರು.
ಸ್ಮಾರ್ಟ್ ಗ್ರೂಪ್ ಶಿರಸಿ ಅವರು ಕರಾಟೆ ಪ್ರದರ್ಶನವನ್ನು ಕೂಡ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ವಂದಿಸಿದರು.
ಶ್ರೀಮತಿ ಮುಕ್ತಾ ನಾಯ್ಕ ಮತ್ತು ಶ್ರೀಮತಿ ಚೇತನಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಎಂ. ಜೆ .ಎಫ್.ಲ. ಪ್ರಭಾಕರ್ ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ. ಜೆ. ಎಫ್. ಲ. ತ್ರಿವಿಕ್ರಂ ಪಟವರ್ಧನ್, ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಎಂ. ಜೆ .ಎಫ್. ಲ. ರಮಾ ಪಟವರ್ಧನ್, ಲಯನ್ಸ್ ಎಜುಕೇಶನ್ ಸೊಸೈಟಿಯ ಸದಸ್ಯರಾದ ಲ.ಕೆ.ಬಿ.ಲೊಕೇಶ್ ಹೆಗಡೆ, ಲ. ವಿನಯ್ ಹೆಗಡೆ, ಲ. ಅಶ್ವಥ್ ಹೆಗಡೆ (ಲಿಯೋ ಅಡ್ವೈಸರ್) ಇನ್ನಿತರ ಲಯನ್ಸ್ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಭಾಗವಹಿಸಿದ್ದರು.
ಅಲ್ಲದೇ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವದ ಅದ್ದೂರಿ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮತ್ತು ಇನ್ನಿತರ ವಿದ್ಯಾರ್ಥಿಗಳು ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು, ಗೈಡ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ್, ಮತ್ತು ದೈಹಿಕ ಶಿಕ್ಷಕ ನಾಗರಾಜ ಜೋಗಳೆಕರ್ ಇವರ ನೇತೃತ್ವದಲ್ಲಿ ಭಾಗವಹಿಸಿದ್ದರು. ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಧ್ವಜ ಗೀತೆ ಮತ್ತು ವಂದೇ ಮಾತರಂ ಗೀತೆಗಳನ್ನು ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ್ ನಿರ್ದೇಶನದಲ್ಲಿ ಹಾಡಿದರು. ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ, ರಾಷ್ಟ್ರ ಮಟ್ಟದಲ್ಲಿ ಸ್ಕೇಟಿಂಗ್ ನಲ್ಲಿ ಸಾಧನೆಗೈದ ಕುಮಾರಿ ಖುಷಿ ಸಾಲೇರ್ ಇವಳನ್ನು ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ದಿನ ವಿಶೇಷವಾಗಿ ಸನ್ಮಾನಿಸಲಾಯಿತು.
ಇನ್ನೂ ಕೆಲವು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top