Slide
Slide
Slide
previous arrow
next arrow

ಜಿಲ್ಲೆಯಲ್ಲಿ ಆಪ್ ಬಲಿಷ್ಠ ಪಕ್ಷವಾಗಿ ತಲೆ ಎತ್ತುತ್ತಿದೆ: ಬಾಲಕೃಷ್ಣ ನಾಯ್ಕ

300x250 AD

ಹೊನ್ನಾವರ: ಕೊಟ್ಟ ಭರವಸೆ ಈಡೇರಿಸುವ ಮೂಲಕ ಜನರ ವಿಶ್ವಾಸ ಗಳಿಸಿರುವ ಆಮ್ ಆದ್ಮಿ ಪಕ್ಷ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೂ ಉತ್ತಮ ಸಾಧನೆ ಮಾಡಲಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಮೂವರು, ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಇಬ್ಬರು, ಕಾರವಾರ-ಅಂಕೋಲಾ ಕ್ಷೇತ್ರದಲಲ್ಲಿ ಇಬ್ಬರು, ಯಲ್ಲಾಪುರ ಕ್ಷೇತ್ರದಲ್ಲಿ ಮೂವರು, ಶಿರಸಿ ಕ್ಷೇತ್ರದಲ್ಲಿ ನಾಲ್ವರು, ಹಳಿಯಾಳ ಕ್ಷೇತ್ರದಲ್ಲಿ ಇಬ್ಬರು ಆಕಾಂಕ್ಷಿಗಳು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಜಿಲ್ಲೆಯಲ್ಲಿ ಜನರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಬಲಿಷ್ಠ ಪಕ್ಷವಾಗಿ ತಲೆ ಎತ್ತುವತ್ತ ದಾಪುಗಾಲು ಇಡುತ್ತಿದೆ. ಮಿಸ್ಡ್ ಕಾಲ್ ಅಭಿಯಾನದಲ್ಲಿ ಕೇವಲ ಒಂದು ತಿಂಗಳಲ್ಲಿ 7800 ಕ್ಕೂ ಹೆಚ್ಚು ಜನರು ಪಕ್ಷದ ಸದಸ್ಯತ್ವ ಸ್ವೀಕರಿಸಿದ್ದಾರೆ. ಭದ್ರ ಭಾರತದ ಕನಸಿಗೆ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಎಂದರು.

ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಕೆಲವು ನಾಯಕರು ಆಪ್ ಸೇರಲು ಉತ್ಸುಕರಾಗಿದ್ದಾರೆ. ಪಕ್ಷದ ಸಮಿತಿ ಇದನ್ನು ಪರಿಶೀಲಿಸಿ ನಿರ್ಣಯಿಸಲಿದೆ. ಆಪ್ ಹಣ. ಹಂಚಿ ಚುನಾವಣೆ ಮಾಡುವುದಿಲ್ಲ. ಹಂಚುವವರ ಮೇಲೆ ನಿಗಾ ಇರಿಸಲಿದೆ ಜಿಲ್ಲೆಯಲ್ಲಿ ಕಳಪೆ ಕಾಮಗಾರಿ, ಜನರಿಗೆ ಆಗುವ ಅನ್ಯಾಯದ ವಿರುದ್ದ ಆಪ್ ಧ್ವನಿ ಎತ್ತಲಿದೆ ಎಂದರು.

300x250 AD

ಮುoಬರುವ ಜಿಲ್ಲಾ. ತಾಲೂಕಾ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಆಪ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದ ಅವರು ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಗಳನ್ನು ಉಳಿದ ಪಕ್ಷಗಳು ನಕಲು ಮಾಡುತ್ತಿವೆ. ಉಚಿತ ವಿದ್ಯುತ್ ನೀಡುವುದನ್ನು ವಿರೋಧಿಸಿದವರು ಈಗ ಅದನ್ನು ನಕಲು ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರು ನಮ್ಮ ಪ್ರಣಾಳಿಕೆಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅಬ್ದುಲ್ ಶೇಖ್, ನಾಜಿರ್ ಶೇಖ್, ಅಮ್ಜದ್ ಅಲಿ ಶೇಖ್, ಅಮೀನ್ ಶೇಖ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ನಾಯ್ಕ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top