Slide
Slide
Slide
previous arrow
next arrow

ಐತಿಹಾಸಿಕ ಸ್ಥಳಗಳ ಸಂರಕ್ಷಣೆಯಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳ ಪಾತ್ರ ಬಹುಮಖ್ಯ: ಎಸ್.ಕೆ. ಭಾಗವತ್

300x250 AD

ಶಿರಸಿ: ಇಂದು ದೇಶದ ಎಲ್ಲೆಡೆ ಎನ್ಎಸ್ಎಸ್ ಘಟಕಗಳು ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಿವೆ. ಐತಿಹಾಸಿಕ ಸ್ಥಳಗಳ ಸಂರಕ್ಷಣೆಯಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳು ಪ್ರಮುಖ ಪಾತ್ರವನ್ನು ವಹಿಸಬೇಕಿದೆ. ಅರಿವು  ಮೂಡಿಸುವ, ಸ್ವಚ್ಛತೆಯನ್ನ ಕಾಪಾಡುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಎಂದು ಎಂಎಂ ಕಾಲೇಜಿನ ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್ ಹೇಳಿದರು.

ಅವರು ಕಲ್ಲಿಯಲ್ಲಿ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ ಹಮ್ಮಿಕೊಂಡಿರುವ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಬಿರದಲ್ಲಿರುವಾಗ ಶಿಬಿರದ ಪರಿಸರದ ಅಧ್ಯಯನವನ್ನು ಮಾಡಬೇಕು. ನಮ್ಮ ಸುತ್ತಮುತ್ತಲಿನ ವಿಶೇಷ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಹಳ್ಳಿ ಬದುಕನ್ನು ಅರಿತುಕೊಳ್ಳಬೇಕು. ಸಂಸ್ಕೃತಿ ಅಧ್ಯಯನವನ್ನು ಮಾಡಬೇಕು. ಜೊತೆಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಉಷಾ ಹೆಗಡೆ ಮಾತನಾಡಿ ವಿದ್ಯಾರ್ಥಿಗಳು ತಮ್ಮನ್ನು ರೂಪಿಸಿಕೊಳ್ಳಲು ಗುರುವಿನ ಮಾರ್ಗದರ್ಶನ ಅಗತ್ಯ. ವಿದ್ಯಾರ್ಥಿ ಜೀವನ  ಅತಿ ಸುಂದರ ಕ್ಷಣವನ್ನು ಕಟ್ಟಿಕೊಳ್ಳುವ ಸಮಯವಾಗಿದ್ದು,  ವಿದ್ಯಾರ್ಥಿಗಳು ಸಮಾಜಮುಖಿ ಕೆಲಸವನ್ನು ಮಾಡುವುದಲ್ಲದೆ ಗುರಿಯನ್ನು ಹೊಂದಿರಬೇಕು. ಭಾರತ ಸನಾತನ ಸಂಸ್ಕೃತಿ ಹೊಂದಿರುವ ದೇಶ. ವಸುದೈವ ಕುಟುಂಬಕಂ ಎನ್ನುವುದು ನಮ್ಮ ಧ್ಯೇಯ. ವಿದ್ಯಾರ್ಥಿಗಳು ದೇಶದ ಐಕ್ಯತೆಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.

300x250 AD

      ಕಲ್ಲಿ ಮುರಾರ್ಜಿ ವಸತಿ  ಶಾಲೆಯ ಪ್ರಾಚಾರ್ಯ ರಾಘವೇಂದ್ರ ಅವರು ಮಾತನಾಡಿ ಶಿಕ್ಷಣ ಎನ್ನುವುದು ಪಠ್ಯಕಷ್ಟೇ ಸೀಮಿತವಾದುದಲ್ಲ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ.  ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ತ್ಯಾಗ ಸೇವೆಯ ಗುಣವನ್ನು ತಮ್ಮದಾಗಿಸಿಕೊಳ್ಳಬೇಕು. ಗುರು ಹಿರಿಯರನ್ನ ಗೌರವಿಸುವುದನ್ನು ಕಲಿಯಿರಿ ಎಂದರು.

         ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಮಾತನಾಡಿ ಇಂದಿನ ವಿದ್ಯಾರ್ಥಿಗಳೆ ಭವಿಷ್ಯದ ನಾಯಕರು. ನಾಯಕತ್ವ ಗುಣ ಬೆಳೆಯಬೇಕಾದರೆ ಧೈರ್ಯ, ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುವ ಸಾಮರ್ಥ್ಯ, ಚಾಕಚಕ್ಯತೆ ಹೊಂದಿರಬೇಕು. ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯವನ್ನು ಹೊಂದಿರಬೇಕು. ಎನ್ಎಸ್ಎಸ್ ಶಿಬಿರ ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಬೆಳೆಸುತ್ತದೆ. ಹಾಗಾಗಿ ಈ ಶಿಬಿರ ಬಹಳ ಮಹತ್ವವನ್ನು ಹೊಂದಿದೆ ಎಂದರು. ಪ್ರೊಫೆಸರ್ ಕೆ ಎನ್ ರೆಡ್ಡಿ ಉಪಸ್ಥಿತರಿದ್ದರು.

ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ  ಪ್ರೊ.ಜಿ.ಟಿ. ಭಟ್ ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಡಾ. ಆರ್.ಆರ್. ಹೆಗಡೆ ವಂದಿಸಿ, ನಿರೂಪಿಸಿದರು.

Share This
300x250 AD
300x250 AD
300x250 AD
Back to top