• Slide
  Slide
  Slide
  previous arrow
  next arrow
 • ಫೆ.10 ರಂದು ಎಂ.ಟಿ.ಕೊಡಿಯ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ ಪ್ರದಾನ

  300x250 AD

  ಸಿದ್ದಾಪುರ; ಆಧಾರ ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಕಲ್ಪ ದಿನಾಚರಣೆ ಕಾರ್ಯಕ್ರಮವನ್ನು ಫೆ.10 ರಂದು ಪಟ್ಟಣದಲ್ಲಿ ನಡೆಸಲಾಗುತ್ತಿದೆ. ಅಂದು ಜಿಲ್ಲಾ ಮಟ್ಟದಲ್ಲಿ ನೀಡುವ ನಿವೃತ್ತ ಶಿರಸ್ಥೆದಾರರಾದ ದಿ.ಎಂ.ಟಿ.ಕೊಡಿಯ ಅವರ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ತಿಳಿಸಿದ್ದಾರೆ.
  ಫೆ.10 ಆಧಾರ ಸಂಸ್ಥೆಯನ್ನು ಹುಟ್ಟುಹಾಕುವುದಕ್ಕೆ ಸಮಾನ ಮನಸ್ಕರು ಸಂಕಲ್ಪ ಮಾಡಿದ ದಿನ. ಆ ದಿನವನ್ನು ಸಂಕಲ್ಪ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಅದೆ ದಿನದಂದು ದಿ.ಎಂ.ಟಿ.ಕೊಡಿಯ ಅವರ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ.
  ದಿ.ಎಂ.ಟಿ.ಕೊಡಿಯ ಅವರು ತಾಲೂಕಿನ ನಿವೃತ್ತ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷರು, ಆಧಾರ ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಲ್ಲಿ ಒರ್ವರು. ನಮ್ಮ ಸಂಸ್ಥೆಯ ಆರಂಭದ ದಿನದಿಂದ ಅವರ ಕೊನೆಯ ದಿನಗಳವರೆಗೂ ಸಂಸ್ಥೆಗೆ ಮಾರ್ಗದರ್ಶಕರಾಗಿ ಆಧಾರ ಆಗಿದ್ದರು. ಅವರು ತಮ್ಮ ವೃತ್ತಿಯ ಹಾಗೂ ನಿವೃತ್ತಿಯ ಬದುಕಿನಲ್ಲಿ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಸಮಾಜಮುಖಿಯಾಗಿದ್ದ ಅವರು ಶೋಷಿತರ ಪರವಾದ ಧ್ವನಿಯಾಗಿದ್ದರು. ಸಮಾಜಕ್ಕೆ ಆದರ್ಶವಾಗಿದ್ದರು. ಇವರ ಹೆಸರನ್ನು ಜೀವಂತವಾಗಿಡುವ ಪುಟ್ಟ ಪ್ರಯತ್ನವನ್ನು ಸಂಸ್ಥೆ ಮಾಡುವುದಕ್ಕೆ ಮುಂದಾಗಿದೆ.ಈ ಮೊದಲು ಸಿದ್ದಾಪುರದ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಗೌಡರ್ ಹೊಗ್ಗೋಡಮನೆ, ಹೊನ್ನಾವರದ ಜೀವನಾಧಾರ ಟ್ರಷ್ಟ ಸಂಸ್ಥಾಪಕರಾದ ದಿ.ಜಾಕಿ ಡಿ’ಸೋಜ್, ಚಿಂತಕರು,ನಿವೃತ್ತ ಪ್ರಾಚಾರ್ಯರಾದ ಶಿರ್ಸಿಯ ಪ್ರೊ.ಕೆ.ಎನ್.ಹೊಸಮನಿ ಇವರುಗಳಿಗೆ ನೀಡಿ ಗೌರವಿಸಲಾಗಿದೆ.


  ಆಧಾರಶ್ರೀ ಪ್ರಶಸ್ತಿ; ದಿ.ಎಂ.ಟಿ.ಕೊಡಿಯ ಅವರ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ಯು ಜಿಲ್ಲಾ ಮಟ್ಟದಾಗಿದೆ. ಸರಕಾರಿ ನೌಕರಿಯಲ್ಲಿ ಇದ್ದವರು ಅಥವಾ ನಿವೃತ್ತರಾಗಿದ್ದವರು ಮಾಡಿರುವ ಜನಪರವಾದ ಕೆಲಸ ಕಾರ್ಯಗಳನ್ನು ಗಮನಿಸಿ ಪ್ರಶಸ್ತಿಗೆ ಅಯ್ಕೆ ಮಾಡಲಾಗುತ್ತದೆ. ಪ್ರಶಸ್ತಿಗೆ ಯಾವುದೆ ಕಾರಣಕ್ಕು ಅರ್ಜಿ ಸ್ವೀಕರಿಸಲಾಗುವುದಿಲ್ಲ. ಪ್ರಶಸ್ತಿ ಫಲಕದೊಂದಿಗೆ ಮೈಸೂರು ಪೆಟಾ ತೋಡಿಸಿ, ಶಾಲು ಹೊದಿಸಿ ಫಲತಾಂಬೂಲ, ಐದು ಸಾವಿರ ನಗದು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿ ವರ್ಷ ಫೆ.10 ರಂದು ಸಂಸ್ಥೆಯ ಸಂಕಲ್ಪ ದಿನಾಚರಣೆಯ ದಿನದಂದು ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top