Slide
Slide
Slide
previous arrow
next arrow

ಜ.28, 29ಕ್ಕೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ’ಹಿಂದೂ ರಾಷ್ಟ್ರ-ಜಾಗೃತಿ’ ಅಧಿವೇಶನ

300x250 AD


ಬೆಂಗಳೂರು: ಭಾರತವು ಹಿಂದೂ ಬಹುಸಂಖ್ಯಾತ ದೇಶವಾಗಿದೆ. ಜಗತ್ತಿನಾದ್ಯಂತದ ಹಿಂದೂಗಳಿಗೆ ಆಶ್ರಯ ನೀಡುವ ಸಾಮರ್ಥ್ಯವಿರುವ ನಮ್ಮ ದೇಶ ಭಾರತ. ಆದರೆ ಇಂದು ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳ ದಮನವಾಗುತ್ತಿದೆ. ಸ್ವಾತಂತ್ರೋತ್ತರ ಕಾಲದಲ್ಲಿ ಇತರ ಪಂಥೀಯರನ್ನು ಓಲೈಸುವ ಹಾಗೂ ಹಿಂದೂಗಳನ್ನು ದ್ವೇಷಿಸುವ ಸರಕಾರಗಳು ಅಧಿಕಾರಕ್ಕೆ ಬಂದವು. ಅದರಿಂದ ಹಿಂದೂಗಳ ಮತಾಂತರ, ಹಿಂದುತ್ವನಿಷ್ಠರ ಹತ್ಯೆ, ಶ್ರದ್ಧಾಸ್ಥಾನಗಳ ವಿಡಂಬನೆ, ದೇವಸ್ಥಾನಗಳ ಧ್ವಂಸ, ಗೌರವಶಾಲಿ ಇತಿಹಾಸಗಳ ವಿಕೃತೀಕರಣ ಮುಂತಾದ ಹಿಂದೂದ್ವೇಷಿ ಘಟನೆಗಳು ರಾಜಾರೋಷವಾಗಿ ಘಟಿಸುತ್ತಿದ್ದವು. ಕೆಲವು ಇಂತಹ ಘಟನೆಗಳ ಹಿಂದೆ ಸರಕಾರದ ಬೆಂಬಲವೂ ಸಹ ಇತ್ತು. 2014 ರಲ್ಲಿ ಅಧಿಕಾರ ಬದಲಾವಣೆಯಾದ ನಂತರ ಹಿಂದೂಗಳ ಮೇಲಿನ ದೌರ್ಜನ್ಯಗಳಿಗೆ ಅಂಕುಶ ಬಂದಿದ್ದರೂ, ಹಿಂದೂಗಳ ದಮನದ ಘಟನೆಗಳು ಸಂಪೂರ್ಣ ನಿಂತಿಲ್ಲ. ಹಿಂದೂದ್ವೇಷಿ ಮತಾಂಧರು, ಸಾಮ್ಯವಾದಿಗಳು, ಪ್ರಗತಿಪರರು, ಅದೇ ರೀತಿ ಸೆಕ್ಯುಲರ್ ಗುಂಪುಗಳಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದ್ದರೂ ಈ ಗುಂಪಿನವರ ಧರ್ಮ ಮತ್ತು ರಾಷ್ಟ್ರವಿರೋಧಿ ಕಾರ್ಯಾಚರಣೆಗಳು ನಿಂತಿಲ್ಲ. ಜಗತ್ತಿನ ಇತರ ಯಾವುದೇ ದೇಶದಲ್ಲಿ ಬಹುಸಂಖ್ಯಾತರ ಅಧಿಕಾರಗಳನ್ನು ತುಳಿಯಲ್ಪಡುವುದಿಲ್ಲ: ಆದರೆ ಭಾರತದ ’ಸೆಕ್ಯುಲರ್’ ರಾಜ್ಯವ್ಯವಸ್ಥೆಯಿಂದಾಗಿ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳನ್ನು ಉಪೇಕ್ಷಿಸಲಾಗುತ್ತಿದೆ. ಹಾಗಾಗಬಾರದೆಂದು ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು ಆವಶ್ಯಕವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ಇಡೀ ದೇಶದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಬಂಧಿಸಿದಂತೆ ಅಭಿಯಾನವನ್ನು ನಡೆಸುತ್ತಿದೆ. ಅದಕ್ಕಾಗಿ ಹಿಂದೂ ಸಂಘಟನೆಗಳನ್ನು ಸಂಘಟಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಜನವರಿ 28 ಮತ್ತು 29 ರಂದು ಬೆಂಗಳೂರಿನಲ್ಲಿ ’ರಾಜ್ಯ ಸ್ತರದ ಹಿಂದೂ ರಾಷ್ಟ್ರ-ಜಾಗೃತಿ ಅಧಿವೇಶನ’ವನ್ನು ಆಯೋಜಿಸಲಾಗಿದೆ.

1. ಪ್ರೇಮದ ಹೆಸರಿನಲ್ಲಿ ‘ಲವ್ ಜಿಹಾದ್ ನ ಷಡ್ಯಂತ್ರ : ದೆಹಲಿಯ ಜಿಹಾದಿ ಅಫ್ತಾಬ್‌ನೊಂದಿಗೆ ಲಿವ್-ಇನ್ ನಲ್ಲಿದ್ದ ಹಿಂದೂ ಯುವತಿ ಶ್ರದ್ಧಾ ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಅವಳನ್ನು ಹತ್ಯೆ ಮಾಡಿ 35 ತುಂಡು ಮಾಡಿದ ಘಟನೆ ಜರುಗಿದೆ. ಈ ಘಟನೆ ದೇಶಾದ್ಯಂತ ಚರ್ಚೆಯಲ್ಲಿರುವಾಗಲೇ ರಾಜ್ಯದಲ್ಲಿ ಅನೇಕ ಲವ್ ಜಿಹಾದ್ ಘಟನೆಗಳು ಜರುಗುತ್ತಿದೆ. ಗದಗದಲ್ಲಿ ಇತ್ತಿಚೆಗೆ ಪ್ರಕಾಶ ಇವರ ಹೆಂಡತಿ ಮತ್ತು ಅವರ ಮಗಳನ್ನು ಲವ್ ಜಿಹಾದ್ ಮೂಲಕ ಮತಾಂತರ ಮಾಡಲಾಯಿತು. ಡಿಸೆಂಬರ್ ಮೊದಲ ವಾರದಲ್ಲಿ ಇಬ್ಬರು ಹಿಂದೂ ಮಹಿಳೆಯರು ರಾಯಚೂರಿನಲ್ಲಿ ಲವ್ ಜಿಹಾದ್‌ಗೆ ಬಲಿಯಾದರು.  ಕೊಡಗಿನ ದೀಪ್ತಿ ಎಂಬ ದಂತ ವೈದ್ಯೆ ವಿಧ್ಯಾರ್ಥಿನಿಯು ಲವ್ ಜಿಹಾದ್‌ನಿಂದ ಇಸ್ಲಾಮ್‌ಗೆ ಮತಾಂತರವಾದಳು ಮತ್ತು ಕೊನೆಗೆ ಐಸಿಸ್ ಭಯೋತ್ಪಾದನಾ ಚಟುವಟಿಕೆಯಲ್ಲಿ ಆಕೆಯ ಬಂಧನವನ್ನು ಎನ್‌ಐಎ ಮಾಡಿತು. ಉಡುಪಿಯ ಕೊಟೆಶ್ವರದಲ್ಲಿ 25 ವರ್ಷದ ಶಿಲ್ಪಾ ದೇವಾಡಿಗ ಎನ್ನುವ ಯುವತಿಯನ್ನು ಅಜಿಜ್ ಎನ್ನುವ ಇಸ್ಲಾಮಿಕ್ ಜಿಹಾದಿಯು ಪ್ರೀತಿಯ ನಾಟಕವಾಡಿ, ಆಕೆಯ ಮದುವೆಯ ಭರವಸೆ ನೀಡಿ, ಆಕೆಯನ್ನು ಲೈಂಗಿಕವಾಗಿ ಬಳಸಿ, ಆಕೆಯ ನಗ್ನ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ ಮಾಡಿ ಆಕೆಯನ್ನು ಇಸ್ಲಾಮ್ ಗೆ ಮತಾಂತರ ಮಾಡಲು ಪ್ರಯತ್ನಿಸಿದಾಗ, ಆಕೆ ಇಲಿಯ ಪಾಷಾಣ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಗದಗದಲ್ಲಿ ಅಪೂರ್ವ ಎನ್ನುವ ಎಮ್‌ಬಿಎ ಓದುವ ಯುವತಿ ಆಟೋ ಡ್ರೈವರ್ ಇಜಾಜ್ ಎಂಬ ಜಿಹಾದಿಯು ಆಕೆಯನ್ನು ಅರ್ಫಾ ಭಾನು ಎಂದು ಇಸ್ಲಾಮಗೆ ಮತಾಂತರ ಮಾಡಿ, ತದನಂತರ ಆಕೆಯ ಮೇಲೆ 25 ಕಡೆ ಚಾಕು ಹಾಕಿ ಹತ್ಯೆ ಮಾಡುವ ಪ್ರಯತ್ನ ಮಾಡಿದನು.  ಮಂಗಳೂರಿನ ಆಶಾಳು ಆಯೆಶಾ ಭಾನು ಆಗಿ ಮತಾಂತರವಾಗಿ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಪ್ರಕರಣದಲ್ಲಿ ಪೋಲಿಸರು ಬಂಧನ ಮಾಡಿದರು. ಇದೇ ರೀತಿ ಕರ್ನಾಟಕದ ಮಂಗಳೂರು, ಉಡುಪಿ, ಮಡಿಕೇರಿ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಮುಸಲ್ಮಾನ ಯುವತಿಯರ ಶಾಹಿನ್ ಗ್ಯಾಂಗ್ ಹಿಂದೂ ಯುವತಿಯರನ್ನು ಲವ್ ಜಿಹಾದ್ ಗೆ ಪ್ರಚೋಧನೆ ನೀಡುವ ಪ್ರಕರಣವನ್ನು ರಾಷ್ಟ್ರೀಯ ತನಿಕಾ ದಳವು ಬಯಲು ಮಾಡಿದೆ.  ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿಯೂ ಇದೇ ರೀತಿಯ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿವೆ. ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ. ಇದರಲ್ಲಿ ಹಿಂದೂ ಹುಡುಗಿಯರು ಭಯಂಕರವಾಗಿ ಶೋಷಣೆಗೆ ಒಳಗಾಗುತ್ತಾರೆ. 2014 ರಿಂದ 2019 ರ ಕಾಲಾವದಿಯಲ್ಲಿ 21 ಸಾವಿರ ಅಮಯರುಕರು ಕಾಣೆಯಾಗಿದ್ದು ಅದರಲ್ಲಿ ಲವ್ ಜಿಹಾದ್ ಶಂಕೆ ಅಡಕವಾಗಿದೆ.

2. ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ : ಕರ್ನಾಟಕದಲ್ಲಿ ಕಳೆದ 10 ವರ್ಷಗಳಲ್ಲಿ 30 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಮತಾಂಧ ಜಿಹಾದಿಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಯಿತು. ರಾಷ್ಟ್ರೀಯ ತನಿಕಾ ದಳವು ಈ ಹತ್ಯೆಗಳ ಪ್ರಕರಣಗಳ ತನಿಕೆಯನ್ನು ಮಾಡಿದಾಗ, ಇದರ ಹಿಂದೆ ಮತಾಂಧ ಸಂಘಟನೆಗಳ ಕೈವಾಡವಿದ್ದು ಭಾರತದಲ್ಲಿ ಇಸ್ಲಾಮಿಕ್ ರಾಷ್ಟ್ರ ತರುವ ಉದ್ದೇಶಕ್ಕಾಗಿ ಈ ಹತ್ಯೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದೆ. ದೇಶದ ಅನೇಕ ರಾಜ್ಯಗಳಲ್ಲಿ ಹಿಂದೂ ನಾಯಕರ ಹತ್ಯೆ ಹೆಚ್ಚಾಗಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕಾಗಿ ಕಾರ್ಯ ಮಾಡುವ ಕಾರ್ಯಕರ್ತರ ರಕ್ಷಣೆ ಅತ್ಯಂತ ಮಹತ್ವದ ವಿಷಯವಾಗಿದೆ. 1990 ರಲ್ಲಿ ಯಾವ ಸ್ಥಿತಿ ಕಾಶ್ಮೀರದಲ್ಲಿ ನಿರ್ಮಾಣವಾಗಿತ್ತೋ, ಅದೇ ಸ್ಥಿತಿ 2022 ರಲ್ಲಿ ದೇಶದ ಇತರ ರಾಜ್ಯಗಳಲ್ಲಿ ನಿರ್ಮಾಣವಾಗುತ್ತಿದ್ದರೆ, ಅದು ಹಿಂದೂಗಳ ಅಸ್ತಿತ್ವದ ದೃಷ್ಟಿಯಲ್ಲಿ ಚಿಂತಾಜನಕವಾಗಿದೆ. ಇಂದು ದೇಶದ 775 ಜಿಲ್ಲೆಗಳಲ್ಲಿ 102 ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂಗಳ ಅಸ್ತಿತ್ವ ಕುಸಿಯುವುದೆಂದರೆ ರಾಷ್ಟ್ರದ ದೃಷ್ಟಿಯಲ್ಲಿ ಅಪಾಯದ ಕರೆಗಂಟೆಯಾಗಿದೆ.

3. ಲೌಡ್ ಸ್ಪೀಕರ್ ಉಪಯೋಗ  ಮತ್ತು ಹನುಮಾನಚಾಲೀಸಾ : ದೇಶದ ಅನೇಕ ಸ್ಥಳಗಳಲ್ಲಿ ಮಸೀದಿಗಳ ಬೊಂಗಾಗಳಿಂದ ಮುಂಜಾನೆ ಕರ್ಣಕರ್ಕಶವಾಗಿ ಅಜಾನ್ ನೀಡಲಾಗುತ್ತದೆ. ಈ ಕರ್ಕಶ ಧ್ವನಿಯಿಂದ ನಾಗರಿಕರ ನಿದ್ರೆಯನ್ನು ಕೆಡಿಸಿ ಅವರ ಶಾಂತ ನಿದ್ರೆಯ ಅಧಿಕಾರವನ್ನು ಕಸಿದುಕೊಳ್ಳಲಾಗುತ್ತದೆ. ನ್ಯಾಯಾಲಯವೂ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ವೇಳೆಯಲ್ಲಿ ’ಲೌಡ್‌ಸ್ಪೀಕರ್’ ಹಚ್ಚಬಾರದೆಂದು ನಿರ್ಬಂಧ ಹೇರಿದ್ದರೂ ಬೋಂಗಾದ ಮೂಲಕ ನೀಡುವ ಅಜಾನ್‌ನಲ್ಲಿ ಕಿಂಚಿತ್ತೂ ವ್ಯತ್ಯಾಸವಾಗಿರಲಿಲ್ಲ. ನ್ಯಾಯಾಲಯ ಈ ಅನಧಿಕೃತ ಬೋಂಗಾಗಳನ್ನು ತೆಗೆಯಲು ಆದೇಶ ನೀಡಿದ್ದರೂ ಪೊಲೀಸ್ ಇಲಾಖೆಯು ಅದನ್ನು ಅನುಷ್ಠಾನಗೊಳಿಸಲು ಹಿಂಜರಿಯುತ್ತಿತ್ತು. ಇಂದು ಬೋಂಗಾದ ವಿರುದ್ಧ ’ಲೌಡ್‌ಸ್ಪೀಕರ್’ನಲ್ಲಿ ಹನುಮಾನಚಾಲೀಸಾ ಪಠಣ ಮಾಡುವ ಪ್ರತಿಕ್ರಿಯಾತ್ಮಕ ಭೂಮಿಕೆಯನ್ನು ಕೆಲವು ರಾಜಕೀಯ ಪಕ್ಷಗಳು ಹಮ್ಮಿಕೊಳ್ಳುತ್ತಿವೆ. ಆಗ ಹನುಮಾನಚಾಲೀಸಾವನ್ನು ವಿರೋಧಿಸಲಾಗುತ್ತಿದೆ. ಇದಕ್ಕೆ ’ಸಮಾನ ನ್ಯಾಯ’ವೆಂದು ಹೇಳಬಹುದೇ ? ಹಿಂದೂಗಳ ಮೇಲಾಗುವ ಇಂತಹ ಅನ್ಯಾಯವನ್ನು ದೂರಗೊಳಿಸಲು ಹಿಂದೂ ರಾಷ್ಟ್ರದ ಅವಶ್ಯಕತೆಯಿದೆ.

4. ಹಿಂದೂಗಳ ಮೇಲಿನ ಆಘಾತ : ಇಂದು ದೇಶದಲ್ಲಿ ಸರಾಗವಾಗಿ ಹಿಂದೂಗಳ ಮತಾಂತರದ ಘಟನೆಗಳು ಘಟಸುತ್ತಿವೆ. ಮೊನ್ನೆಯಷ್ಟೇ ಮಕರ ಸಂಕ್ರಾಂತಿ ನಿಮಿತ್ತ ದೇಶಾದ್ಯಂತ ಹಿಂದೂಗಳು ಸಂಭ್ರಮದಿಂದ ಹಬ್ಬದ ಆಚರಣೆ ಮಾಡುತ್ತಿದ್ದರೆ ಗುಂಡ್ಲುಪೇಟೆಯ ಕ್ರೈಸ್ತ ಶಾಲೆಯಲ್ಲಿ ಹಬ್ಬದ ದಿನವೂ ಎಂದಿನಂತೆ ಶಾಲೆ ನಡೆಯುತ್ತಿತ್ತು. ಆದರೆ  ಡಿಸೆಂಬರ್ ತಿಂಗಳು ಹತ್ತಿರವಾಗುತ್ತಿರುವಂತೆ ಇದೇ ಶಾಲೆಗಳಲ್ಲಿ ಕ್ರಿಸ್‌ಮಸ್ ನಿಮಿತ್ತ ವಾರಗಟ್ಟಲೆ ರಜೆ ಘೋಶಿಸಲಾಗುತ್ತದೆ. ’ಜೀಸಸ್ ಮಹಾನ, ಹಿಂದೂ ಸೈತಾನ’ ಎನ್ನುವ ಬೋಧನೆಯನ್ನು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಕರ ಪ್ರಯತ್ನವಾಗಿರಲಿ, ವಿಭೂತಿ ಮತ್ತು ರುದ್ರಾಕ್ಷಿಯನ್ನು ಧರಿಸುವ ವಿದ್ಯಾರ್ಥಿಯನ್ನು ಕ್ರೈಸ್ತ ಶಿಕ್ಷಕನು ಥಳಸುವ ಪ್ರಸಂಗವಿರಲಿ, ’ಲಾವಣ್ಯಾ’ಳಂತಹ ವಿದ್ಯಾರ್ಥಿನಿಗೆ ಮತಾಂತರಕ್ಕಾಗಿ ಒತ್ತಡ ಹೇರುವ ಕೃತ್ಯವಾಗಿರಲಿ ಅಥವಾ ಆಮಿಷ ತೋರಿಸಿ ಹಿಂದೂಗಳನ್ನು ಕುಲಗೆಡಿಸುವ ಕೃತ್ಯವಿರಲಿ ! ಹಿಂದೂಗಳ ಮೇಲಾಗುವ ಮಾರಣಾಂತಿಕ ಆಕ್ರಮಣಗಳು ಮತ್ತು ಆಗುವ ಮತಾಂತರದಿಂದ ಹಿಂದೂಗಳ ಸಂಖ್ಯೆ ಕುಸಿಯುತ್ತಿದೆ. ಹಾಗೂ ಇತರ ಪಂಥಗಳ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಿಂದೂಗಳಿಗೆ ಭದ್ರತೆಯನ್ನು ನೀಡುವ ಕ್ಷಮತೆ ಇಂದಿನ ವ್ಯವಸ್ಥೆಯಲ್ಲ್ಲಿಲ್ಲವೆಂಬುದು ಸಾಬೀತಾಗಿದೆ, ಎಂಬುದು ಇದರಿಂದ ತಿಳಿಯುತ್ತದೆ.

300x250 AD

5. ಹಿಂದವೀ ಸ್ವರಾಜ್ಯದಂತಹ ’ಹಿಂದೂ ರಾಷ್ಟ್ರ’ದ ಅವಶ್ಯಕತೆಯಿದೆ : ಇಂದು ಎಂತಹ ಸ್ಥಿತಿ ಇದೆಯೋ, ಅದೇ ಸ್ಥಿತಿ 400 ವರ್ಷಗಳ ಹಿಂದೆಯೂ ಇತ್ತು. ಆದಿಲಶಾಹಿ, ನಿಜಾಮಶಾಹಿ, ಇಮಾದಶಾಹಿ, ಬರೀದಶಾಹಿ ಮತ್ತು ಕುತುಬಶಾಹಿ ಈ 5 ಇಸ್ಲಾಮೀ ಬಾದಶಾಹಿಗಳು ಹಿಂದೂಗಳನ್ನು ಗೋಳಾಡಿಸುತ್ತಿದ್ದರು. ಆಗ ಛತ್ರಪತಿ ಶಿವಾಜಿ ಮಹಾರಾಜರು ಈ ಇಸ್ಲಾಮೀ ರಾಜರನ್ನು ಮಣ್ಣು ಮುಕ್ಕಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು ಹಾಗೂ ಹಿಂದೂಗಳಿಗೆ ಭದ್ರತೆಯನ್ನು ನೀಡಿದರು. ಹಿಂದೂಗಳ ಶ್ರದ್ಧಾಸ್ತಾನಗಳನ್ನು ರಕ್ಷಿಸಿದರು. ಇಂದು ಕೂಡ ಹಿಂದವೀ ಸ್ವರಾಜ್ಯಕ್ಕೆ ಸಮಾನವಾದ ಹಿಂದೂ ರಾಷ್ಟ್ರದ ಅವಶ್ಯಕತೆಯಿದೆ. ಹಿಂದೂ ರಾಷ್ಟ್ರವೇ ದೇಶದ ಮುಂದಿರುವ ಎಲ್ಲ ಸಮಸ್ಯೆಗಳಿಗೆ ಉತ್ತರವಾಗಿದೆ. ಹಿಂದೂ ರಾಷ್ಟ್ರವು ಯಾವುದೇ ರಾಜಕೀಯ ಸಂಕಲ್ಪನೆಯಲ್ಲ. ಅದು ಆಧ್ಯಾತ್ಮಿಕ ಸಂಕಲ್ಪನೆಯಾಗಿದೆ.

ಹಿಂದೂ ರಾಷ್ಟ್ರದ ಸಂಕಲ್ಪನೆಯನ್ನು ಜನಸಾಮಾನ್ಯರಲ್ಲಿ ಬಿಂಬಿಸುವ ಕಾರ್ಯದಲ್ಲಿ ಗೋವಾದಲ್ಲಿ ಪ್ರತಿವರ್ಷ ನಡೆಯುವ ’ಅಖಿಲ ಭಾರತೀಯ ಹಿಂದೂ ಅಧಿವೇಶನ’ದ ಪಾಲು ಮಹತ್ವದ್ದಾಗಿದೆ. ಅದೇ ರೀತಿ ಈ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ರಾಜ್ಯಾದ್ಯಂತ 50 ಕ್ಕಿಂತಲೂ ಹೆಚ್ಚು ಸಂಘಟನೆಗಳ 500 ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳಿಗೆ ಆಮಂತ್ರಣವನ್ನು ನೀಡಲಾಗಿದೆ. ಹಿಂದೂ ರಾಷ್ಟ್ರ ನಿರ್ಮಾಣ ಕಾರ್ಯದ ವೇಗವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಸಮಾನಕೃತಿ ಕಾರ್ಯಕ್ರಮವನ್ನು ನಿರ್ಧರಿಸುವುದು. ಕಾರ್ಯ ಮಾಡುವಾಗ ಬರುವ ಅನುಭವಗಳನ್ನು ಹಂಚಿಕೊಳ್ಳುವುದು, ಕಾರ್ಯದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ದೃಷ್ಟಿಯಲ್ಲಿ ಉಪಾಯಯೋಜನೆಯನ್ನು ಮಾಡುವುದು, ಹಿಂದೂ ರಾಷ್ಟ್ರದ ವೈಚಾರಿಕ ಭೂಮಿಕೆಯನ್ನು ಪ್ರಸಾರ ಮಾಡುವುದು ಇತ್ಯಾದಿ ಅನೇಕ ಅಂಗಗಳ ವಿಷಯದಲ್ಲಿ ಅಧಿವೇಶನದಲ್ಲಿ ಬೆಳಕನ್ನು ಚೆಲ್ಲಲಾಗುತ್ತದೆ. ಇದೇ 28 ಹಾಗೂ 29 ಜನವರಿ ಈ ದಿನಗಳಲ್ಲಿ ಬೆಂಗಳೂರಿನನಲ್ಲಿ ಈ ಅಧಿವೇಶನ ನೆರವೇರಲಕ್ಕಿದೆ. ಅಧಿವೇಶನದಲ್ಲಿ ಪ್ರತ್ಯಕ್ಷ ಭಾಗವಹಿಸಲು ಇಚ್ಛಿಸುವವರು 7204082609 ಈ ಕ್ರಮಾಂಕಕ್ಕೆ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಬಹುದು. ಈ ಅಧಿವೇಶನರೂಪಿ ಹಿಂದೂ ರಾಷ್ಟ್ರದ ಯಜ್ಞದಲ್ಲಿ ಸಮಿಧೆಯ ರೂಪದಲ್ಲಿ ತಮ್ಮ ಯೋಗದಾನವನ್ನು ನೀಡಲು ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳಿಗೆ ಪ್ರೇರಣಿ ಸಿಗಲಿ, ಎಂದು ಪ್ರಕಟಣೆಯಲ್ಲಿ‌ ಕೋರಲಾಗಿದೆ.

Share This
300x250 AD
300x250 AD
300x250 AD
Back to top