Slide
Slide
Slide
previous arrow
next arrow

ಪಹರೆ ವೇದಿಕೆಯಿಂದ ಕಾರವಾರದಿಂದ ಗೋವಾ ಗಡಿಗೆ ‘ಸ್ವಚ್ಛತಾ ನಡಿಗೆ’

300x250 AD

ಕಾರವಾರ: ಕಳೆದ ಎಂಟು ವರ್ಷಗಳಿಂದ ಕೇವಲ ಕಾರವಾರವಷ್ಟೇ ಅಲ್ಲದೇ, ಜಿಲ್ಲೆಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಂಡು ಜನರಲ್ಲಿ ಸ್ವಚ್ಛತಾ ಪ್ರಜ್ಞೆ ಮೂಡಿಸುತ್ತಿರುವ ಪಹರೆ ವೇದಿಕೆೆಯು 8 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಸ್ವಚ್ಛತಾ ಜಾಗೃತಿಗಾಗಿ ಕಾರವಾರದಿಂದ ಗೋವಾ ಗಡಿಯವರೆಗೆ 16 ಕಿ.ಮೀ. ಪಾದಯಾತ್ರೆ ನಡೆಸಿತು.
ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನಗರದ ಸುಭಾಷ್‌ಚಂದ್ರ ಬೋಸ್ ವೃತ್ತದಲ್ಲಿ ಬೋಸ್‌ರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ವೇದಿಕೆಯ ಗೌರವಾಧ್ಯಕ್ಷರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು. ನಗರದ ಸವಿತಾ ಸರ್ಕಲ್ ಮಾರ್ಗವಾಗಿ ಕೋಡಿಬಾಗ್‌ವರೆಗೆ ತೆರಳಿದ ಪಾದಯಾತ್ರೆ ಅಲ್ಲಿಂದ ಹೆದ್ದಾರಿ ಮೂಲಕ ಕಾಳಿ ಸೇತುವೆ ಮೇಲೆ ಸಾಗಿತು. ಸೇತುವೆ ಬಳಿ ಲಘು ಉಪಹಾರ ಸೇವಿಸಿ ಚಿತ್ತಾಕುಲ, ಮಾಜಾಳಿ ಮಾರ್ಗವಾಗಿ ಸುಮಾರು 16 ಕಿ.ಮೀ. ನಡೆದು ಗೋವಾ ಗಡಿ ತಲುಪಿತು. ಪಾದಯಾತ್ರೆಯುದ್ದಕ್ಕೂ ಚಳಿ, ಬಿಸಿಲನ್ನೂ ಲೆಕ್ಕಿಸದೇ ಹರೇಕಳ ಹಾಜಬ್ಬ ಅವರೂ ಸಹ ಜನಸಾಮಾನ್ಯರೊಡನೆ ನಡೆದು ಸಾಗಿದರು.
ಸ್ವಚ್ಛತಾ ಪಾದಯಾತ್ರೆ ಮಾರ್ಗದ ಅಲ್ಲಲ್ಲಿ ಸ್ಥಳೀಯರು ರಾಷ್ಟ್ರಧ್ವಜಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಪಾದಯಾತ್ರಿಗಳನ್ನು ಹುರಿದುಂಬಿಸಿದರು. ಮಾಜಿ ವಿಧಾನಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್, ಮಾಜಿ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರು ಸ್ವಚ್ಛತಾ ಪಾದಯಾತ್ರೆಯನ್ನು ಸ್ವಾಗತಿಸುವ ಮೂಲಕ ಬೆಂಬಲ ಸೂಚಿಸಿದರು. ಕೆಲ ಸಮಾನ ಮನಸ್ಕರಿಂದ ಆರಂಭವಾದ ಪಹರೆ ವೇದಿಕೆ ಇದೀಗ ಬೇರೆ ಬೇರೆ ತಾಲ್ಲೂಕುಗಳಲ್ಲೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಸ್ವಚ್ಚತೆಯ ಕುರಿತು ಗಡಿಯಾಚೆಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಗೋವಾದ ಸಂಘ, ಸಂಸ್ಥೆಗಳನ್ನು ಗಡಿಯಲ್ಲಿ ಆಹ್ವಾನಿಸಿ ಅವರಿಗೆ ಗಿಡ ನೀಡುವ ಮೂಲಕ ಸ್ವಚ್ಛತಾ ಅಭಿಯಾನದ ಕುರಿತು ಮಾಹಿತಿ ನೀಡಲಾಯಿತು.

300x250 AD
Share This
300x250 AD
300x250 AD
300x250 AD
Back to top