Slide
Slide
Slide
previous arrow
next arrow

ಮೊಟ್ಟೆ ಇಡುವ ಸಮಯ ಬದಲಾಯಿಸಿದ ಕಡಲಾಮೆಗಳು

300x250 AD

ಹೊನ್ನಾವರ: ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ ಕಡಲಾಮೆಗಳು ಮೊಟ್ಟೆ ಇಡುವ ಸಾಂಪ್ರದಾಯಿಕ ಸಮಯ ಬದಲಾಯಿಸುತ್ತಿದ್ದು, ಪ್ರಸ್ತುತ ಸಂದರ್ಭದಲ್ಲಿ ತಾಲೂಕಿನ ಕಾಸರಕೋಡ ಟೊಂಕದ ಕಡಲತೀರದಲ್ಲಿ ಹಗಲಿನ ವೇಳೆಯಲ್ಲಿಯೂ ಸಹ ಮೊಟ್ಟೆ ಇಡುತ್ತಿವೆ ಎನ್ನಲಾಗಿದೆ.
ಕಳೆದ ಎರಡು ದಿನಗಳಿಂದ ಆಲಿವ್ ರಿಡ್ಲೆ ಜಾತಿಯ ಕಡಲಾಮೆಗಳು ಕಾಸರಕೋಡ ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗಾಗಿ ಮೀಸಲಿಟ್ಟ ಜಾಗದಲ್ಲಿ ಮತ್ತು ಕಡಲತೀರದಲ್ಲಿ ನೂರಾರು ಸಂಖ್ಯೆಯಲ್ಲಿ ಮೊಟ್ಟೆ ಇಟ್ಟು ಗೂಡನ್ನು ಮುಚ್ಚಿಡುತ್ತಿರುವ ದೃಶ್ಯವನ್ನು ಸ್ಥಳೀಯರು ಜಿಪಿಎಸ್ ಕ್ಯಾಮ್ ಮೂಲಕ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆಲಿವ್ ರೆಡ್ಲಿ ಜಾತಿಯ ಕಡಲಾಮೆಗಳು ಪೂರ್ವ ಕರಾವಳಿಯ ಓರಿಸ್ಸಾ ಕಡಲತೀರದಲ್ಲಿ ದಿನದ ಸಮಯದಲ್ಲಿ ಮೊಟ್ಟೆ ಇಡುವುದು ವಾಡಿಕೆ. ಈ ಹಿಂದೆ ಡಿಸೆಂಬರ್‌ನಿoದ ಮೇ ತಿಂಗಳ ಮೊದಲ ವಾರದಲ್ಲಿ ಪಶ್ಚಿಮ ಕರಾವಳಿಯಲ್ಲಿ ರಾತ್ರಿ ಸಮಯದಲ್ಲಿ ಮೊಟ್ಟೆ ಇಡುವ ವಾಡಿಕೆ ಇತ್ತು.
ಕಾಸರಕೋಡ ಟೊಂಕದ ಸುತ್ತಮುತ್ತಲಿನ ಕಡಲತೀರದಲ್ಲಿ ಪ್ರತಿ ವರ್ಷ ಡಿಸೆಂಬರ್‌ನಿOದ ಏಪ್ರಿಲ್ ಅವಧಿಯಲ್ಲಿ ಕಡಲಾಮೆಗಳು ಮೊಟ್ಟೆ ಇಡುವ ತಾಣಗಳಲ್ಲಿ ಒಂದು ಎನ್ನುವ ಪ್ರತೀತಿ ಇದ್ದು, ಅರಣ್ಯ ಇಲಾಖೆ ಮೊಟ್ಟೆ ಗಳನ್ನು ಸಂರಕ್ಷಿಸಿ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಬಿಟ್ಟಿರುವ ಅಧೀಕ್ರತ ದಾಖಲೆಗಳನ್ನು ಹೊಂದಿದ್ದರೂ ಸಾಂಪ್ರದಾಯಿಕ ಮೊಟ್ಟೆ ಇಡುವ ಕಾಸರೋಡ ಟೊಂಕಾ ಮರಳು ತೀರದಲ್ಲಿ ಕಡಲಾಮೆ ಮೊಟ್ಟೆ ಇಡುವುದು ಕಂಡುಬoದಿಲ್ಲ ಎಂದು ಈ ಹಿಂದೆ ಚೆನ್ನೈನ ಕಡಲ ಸಂಶೋಧನಾ ಸಂಸ್ಥೆ ಎನ್‌ಸಿಎಸ್‌ಸಿಎಮ್ ಕರ್ನಾಟಕದ ಹೈಕೋರ್ಟ್ಗೆ ಸುಳ್ಳು ವರದಿ ಸಲ್ಲಿಸಿತ್ತು ಎಂದು ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತಾ ತಿಳಿಸಿದ್ದಾರೆ.
ಶ್ರೀಹರಿಯ ದಶವತಾರದ ಪ್ರತೀಕವಾದ ಮೂಖ ಕೂರ್ಮಗಳು ತಂಡೋಪ ತಂಡಗಳಾಗಿ ಟೊಂಕಾ ತೀರಕ್ಕೆ ಬಂದು ಮೊಟ್ಟೆಯ ಗೂಡು ಕಟ್ಟಿ ತಮ್ಮ ಪಾರಂಪರಿಕ ಅವಾಸಸ್ಥಾನ ಮತ್ತು ಮೊಟ್ಟೆ ಇಡುವ ಪ್ರದೇಶದ ಬಗ್ಗೆ ಸಾಕ್ಷಿ ನೀಡುತ್ತಿದೆ ಎಂದು ಸ್ಥಳೀಯ ಮೀನುಗಾರರು ಹೇಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತವು ಕಳೆದ ವರ್ಷ ಕಡಲಾಮೆ ಜೀವಂತ ಮೊಟ್ಟೆ ಗೂಡುಗಳ ಮೇಲೆ ಕಲ್ಲು- ಮಣ್ಣು ಸುರಿದು ಮುಚ್ಚಿ ಕಡಲತಡಿಯ ಮರಳು ತೀರದ ಮೇಲೆ ನಿಯಮಗಳನ್ನು ಗಾಳಿಗೆ ತೂರಿ ರಸ್ತೆ ಮಾಡಿತ್ತು ಎಂದು ಸ್ಥಳೀಯ ಮೀನುಗಾರರು ಪರಿಸರ ಇಲಾಖೆಗೆ ದೂರು ನೀಡಿದ್ದರು. ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿ ಕಾಸರಕೋಡ ಟೊಂಕದ ಕಡಲತೀರದಲ್ಲಿ ಸಿಆರ್‌ಝೆಡ್ ಮತ್ತು ಪರಿಸರ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಕಾಮಗಾರಿ ನಡೆಸದಂತೆ ವಾಣಿಜ್ಯ ಬಂದರು ನಿರ್ಮಾಣ ಕಂಪನಿ ಮತ್ತು ಬಂದರು ಇಲಾಖೆಯ ವಿರುದ್ಧ ತಡೆಯಾಜ್ಞೆ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

300x250 AD
Share This
300x250 AD
300x250 AD
300x250 AD
Back to top