ದಾಂಡೇಲಿ: ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದ ಆರ್.ವಿ.ದೇಶಪಾಂಡೆಯವರನ್ನು ತಾಲೂಕು ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ಹಳಿಯಾಳ ಪಟ್ಟಣದಲ್ಲಿರುವ ಅವರ ಸ್ವಗೃಹದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ದೇಶಪಾಂಡೆಯವರು ಅಸಂಘಟಿತ ಕಾರ್ಮಿಕರ ಸಂಘ ಮತ್ತು ದಾಂಡೇಲಿ ಕಾರ್ಮಿಕರ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ದಾಂಡೇಲಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಸಾಬ ಕೇಸನೂರು, ಸಂಘಟನೆಯ ಪ್ರಮುಖರುಗಳಾದ ಶರಣಪ್ಪ ಬಾಗಲಿ, ರವಿಕುಮಾರ್ ಚಾಟ್ಲಾ, ಸಿ.ಡಿ.ಬೈಲಾ, ಮಂಜುನಾಥ್ ಭೋವಿ, ರವಿ, ರಾಜಶೇಖರ್, ಮೆಹಬೂಬು ಅತ್ತಾರ್, ತಿಮೋತಿ, ಮಹಾದೇವ, ಅಬ್ದುಲ್ ಮಜೀದ್ ಮೊದಲಾದವರು ಇದ್ದರು.