Slide
Slide
Slide
previous arrow
next arrow

ವಾಯಲಿನ್ ವಾದಕ ಪಂ.ಶಂಕರ ಕಬಾಡಿಗೆ ಸನ್ಮಾನ

300x250 AD

ದಾಂಡೇಲಿ: ವಾಯಲಿನ್ ವಾದಕ ಪಂ.ಶಂಕರ ಕಬಾಡಿಯವರನ್ನು ನಗರದ ಬರ್ಚಿ ರಸ್ತೆಯಲ್ಲಿರುವ ಭಾರತೀಯ ಸಂಗೀತ ವಿದ್ಯಾಲಯದ ತರಬೇತಿ ಕೇಂದ್ರದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲೆ ಬದುಕಿನ ಭಾಗವಾದಾಗ ಮಾತ್ರ ಅದು ಜೀವಂತವಾಗಿರಲು ಸಾಧ್ಯ. ಎಲ್ಲರು ಕಲಾವಿದನಾಗಲು ಸಾಧ್ಯವಿಲ್ಲ. ಆದರೆ ಕಲೆಯನ್ನು ಎಲ್ಲರೂ ಪ್ರೋತ್ಸಾಹಿಸಿದಾಗ ಕಲಾವಿದ ಬೆಳೆಯುತ್ತಾನೆ. ಕನ್ನಡ ನಾಡಿನ ಜನತೆ ಕಲೆಯನ್ನು ಬೆಳೆಸಿ, ಪ್ರೋತ್ಸಾಹಿಸುತ್ತಿರುವುದರಿಂದಲೆ ನಾಡಿನ ಕಲಾವಿದರು ಕಲಾಸೇವೆಯಲ್ಲಿ ಪರಿಪೂರ್ಣ ಮನಸ್ಸಿನಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ಪಂ.ಚoದ್ರಶೇಖರ್ ಅವರ ಸಾರಥ್ಯದಲ್ಲಿ ಭಾರತೀಯ ಸಂಗೀತ ವಿದ್ಯಾಲಯವು ಈ ಭಾಗದಲ್ಲಿ ಕಲಾವಿದರನ್ನು ಸೃಷ್ಟಿಸುವ ಸಾಧನಾ ಕೇಂದ್ರವಾಗಿ ಕೆಲಸ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತೀಯ ಸಂಗೀತ ವಿದ್ಯಾಲಯದ ಪ್ರವರ್ತಕ ಪಂ.ಚAದ್ರಶೇಖರ್ ಎಸ್., ಕಲಾವಿದರುಗಳಿಗೆ ಕಲಾಭಿಮಾನಿಗಳ ಪ್ರೋತ್ಸಾಹವೇ ಕಲಾಸೇವೆ ಮಾಡಲು ಮಹತ್ವದ ಶಕ್ತಿ. ಪಂ.ಶಂಕರ ಕಬಾಡಿಯ ಕಲಾಸೇವೆ ಸದಾ ಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ಕಲಾವಿದರುಗಳಾದ ರಘುವೀರ್ ಗೌಡ, ಮಹಾಂತೇಶ ಅಂಧಕಾರ, ಜೈತ್ ಸಿ.ಎಸ್., ಗಂಗಮ್ಮಾ, ಮಾಲಾ ಚಂದ್ರಶೇಖರ್ ಮೊದಲಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top