ಕುಮಟಾ: ತಾಲೂಕಿನ ಮಿರ್ಜಾನದ ಶ್ರೀಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ಭಕ್ತರಿಂದ ನಡೆಯಿತು.
ಭಕ್ತರ ಸಂಕಲ್ಪದಂತೆ ಮಿರ್ಜಾನದ ಶ್ರೀಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ 24 ಗಂಟೆಗಳ ನಿರಂತರ ಭಜನೆಯ ಸೇವೆ ನಡೆಸಲು ಭಕ್ತರು ಶನಿವಾರ ಮೊದಲು ಶ್ರೀದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮುಂಜಾನೆ 11 ಗಂಟೆಗೆ ಅಹೋರಾತ್ರಿ ಭಜನೆ ಆರಂಭಿಸಿದರು. ಭಜನೆ ಮುಂಜಾನೆಯಿAದ ರಾತ್ರಿ ನಡೆಯಲಿದ್ದು, ನಿರಂತರವಾಗಿ ನಡೆಯುವ ಈ ಧಾರ್ಮಿಕ ಕಾರ್ಯಕ್ಕೆ 9 ವಿಶೇಷ ತಂಡಗಳನ್ನು ರಚಿಸಲಾಗಿದೆ.
ಮುಂಜಾನೆ 11ರಿಂದ 3ರವರೆಗೆ ಮಹಿಳಾ ಭಜನಾ ಮಂಡಳಿ ಮಿರ್ಜಾನ್, 2ರಿಂದ 5ರವರೆಗೆ ತಾರಿಬಾಗಿಲ ಸ್ಥಾಯಿ ಸಮಿತಿ, 5ರಿಂದ 8 ನಾಗೂರು ಸಾಯಿ ಮಂದಿರ, ರಾತ್ರಿ 8ರಿಂದ 11 ಮಾಸೂರು ಭಜನಾ ಮಂಡಳಿ, 11ರಿಂದ 2ರವರೆಗೆ ಸಾಯಿ ಮಂದಿರ ಕೋಡ್ಕಣಿ, 2ರಿಂದ 5 ಸಾಯಿಮಂದಿರ ಛತ್ರಕುವೆ, 5ರಿಂದ 8 ಸಾಯಿಮಂದಿರ ಕುಮಟಾ, 8ರಿಂದ 9.30 ಮಿರ್ಜಾನ್ ರಾಮನಗರ 9.30ರಿಂದ 11.30ರವರೆಗೆ ಜೈನ ಮಹಾಸತಿ ಭಜನಾ ಮಂಡಳಿ ಪಾಲ್ಗೊಳ್ಳಲಿದೆ.
ಭಾನುವಾರ ಮುಂಜಾನೆ 11 ಗಂಟೆಗೆ ಭಜನ ತಂಡಗಳು ಮೆರವಣಿಗೆಯಲ್ಲಿ ಸಾಗಿ ಲಕ್ಷ್ಮಿನಾರಾಯಣ ದೇಗುಲದ ಕಿಮಾನಿನ ಬಳಿ ಮೊಸರು ಗಡಿ ಒಡೆಯುವ ಕಾರ್ಯಕ್ರಮವಿದ್ದು, ತದನಂತರ ಈ ಮೆರವಣಿಗೆ ಭೈರವೇಶ್ವರ ಸನ್ನಿಧಿಗೆ ತಲುಪಿ ಅಲ್ಲಿ ಕೆರೆಯಲ್ಲಿ ಸ್ನಾನ ಮಾಡಿದ ಬಳಿಕ ಭೈರವೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ಬಳಿಕ ಕಾರ್ಯಕ್ರಮ ಸಮಾಪ್ತಿಯಾಗಲಿದೆ.