Slide
Slide
Slide
previous arrow
next arrow

ಮಂಕಿ ಗೋಲ್ ಇಂಟರ್ನ್ಯಾಶನಲ್ ಶಾಲೆಗೆ ಶ್ರೇಷ್ಠ ಶಿಕ್ಷಣ ಪ್ರಶಸ್ತಿ

300x250 AD

ಹೊನ್ನಾವರ: ಗೋಲ್ ಇಂಟರ್ನ್ಯಾಶನಲ್ ಪಬ್ಲಿಕ್ ಶಾಲೆಯು ತನ್ನ ವಿಭಿನ್ನವಾದ ಶಿಕ್ಷಣ ಪದ್ಧತಿಯಿಂದ ಜಿಲ್ಲೆಯಲ್ಲಿ ಹೆಸರು ಮಾಡುತ್ತಿದ್ದು, ಶಾಲೆಗೆ ಬೆಂಗಳೂರಿನಲ್ಲಿ ಜರುಗಿದ ಎಜುಕೇಶನ್ ಇನ್ನೋವೇಶನ್ ಸಮ್ಮೇಳನದಲ್ಲಿ ಎಕ್ಸಲೆನ್ಸ್ ಇನ್ ಅಕಾಡಮಿಕ್ಸ್ ಶೈಕ್ಷಣಿಕ ಪ್ರಗತಿಗಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಅಲೋಫ್ಟ್ ಮ್ಯಾರಿಯಾಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಲ್ಟಿಪಲ್ ಇಂಟಲಿಜೆನ್ಸ್ ಮತ್ತು ಬ್ಲೂಮ್ಸ್ ಟ್ಯಾಕ್ಸೋನಮಿಯಂತಹ ಅಂತರರಾಷ್ಟ್ರೀಯ ಪರಿಕಲ್ಪನೆಗಳನ್ನು ಅಳವಡಿಸಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಶಿಕ್ಷಣವನ್ನು ನೀಡಲಾಗುತ್ತಿರುವ ಜೊತೆ, ಚಟುವಟಿಕೆಗಳ ಮುಖಾಂತರ ಪ್ರತಿಯೊಂದು ಪಾಠವನ್ನು ಮನದಟ್ಟು ಮಾಡಿಸುವುದನ್ನು ಪರಿಗಣಿಸಿ ಇದನ್ನು ನೀಡಲಾಗಿದೆ. ಒಮ್ಮೆ ತರಗತಿಯಲ್ಲಿ ಮಕ್ಕಳು ವಿಷಯವನ್ನು ಸರಿಯಾಗಿ ಅರಿತುಕೊಂಡಲ್ಲಿ, ಅವರಿಗೆ ಪರೀಕ್ಷೆಗಳನ್ನು ಎದುರಿಸುವುದು ಸುಲಭವಾಗುತ್ತದೆ ಹಾಗೂ ಕಲಿತ ಪಾಠಗಳು ಅವರಿಗೆ ಸದಾ ನೆನಪಿನಲ್ಲಿ ಇರುತ್ತವೆ.
ಗೋಲ್ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯೊಂದಿಗೆ ಜೀವನಕ್ಕೆ ಬಹು ಮುಖ್ಯವಾಗಿ ಬೇಕಾದ ಆತ್ಮವಿಶ್ವಾಸ, ನಿರ್ಭಯವಾಗಿ ಇತರರೊಂದಿಗೆ ವಿಷಯಗಳನ್ನು ಮಂಡಿಸುವುದು, ನಾಯಕತ್ವದ ಗುಣಗಳನ್ನು ಬೆಳೆಸುವುದರ ಜೊತೆಗೆ ಜೀವನದ ಮೌಲ್ಯಗಳಿಗೂ ಕೂಡ ಮಹತ್ವವನ್ನು ನೀಡಿ ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತದೆ. ಈ ಎಲ್ಲಾ ಸಾಧನೆಗಳನ್ನು ಗಮನಿಸಿ ಬೆಂಗಳೂರಿನ ಗ್ಲೋಬಲ್ ಟ್ರಿಯುಂಪ್ ಫೌಂಡೇಶನ್‌ನಿಂದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶಾಲೆಯ ಚೇರ್ಮನ್ ಎ.ಆರ್.ನಾಯಕ್, ನಿರ್ದೇಶಕ ಬಸವರಾಜ್ ಗೌಡ ಹಾಗೂ ದೀಪರಾವ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿಗಾಗಿ ಶಾಲೆಯ ಶಿಕ್ಷಕ ವರ್ಗ, ಪೋಷಕ ವೃಂದದ ಸಹಕಾರಕ್ಕೆ ಆಡಳಿತ ಮಂಡಳಿಯು ಅಭಿನಂದಿಸಿದೆ.

300x250 AD
Share This
300x250 AD
300x250 AD
300x250 AD
Back to top