Slide
Slide
Slide
previous arrow
next arrow

ವಿದ್ಯಾರ್ಥಿಯು ಕೌಶಲ್ಯವನ್ನು ಮೈಗೂಡಿಸಿಕೊಳ್ಳುವುದು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ: ವಸಂತ ಹೆಗಡೆ

300x250 AD

ಶಿರಸಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಜನರು ಗುರುತಿಸಬಲ್ಲ ಯಾವುದಾದರೂ ಕೌಶಲ್ಯವನ್ನು ಮೈಗೂಡಿಸಿಕೊಳ್ಳುವುದು ಆಕೆಯ/ಆತನ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾಗಿದೆ ಎಂದು ಆಗಸ್-360 ಸಂಸ್ಥೆಯ ಮುಖ್ಯಸ್ಥ ವಸಂತ ಹೆಗಡೆ ಹೇಳಿದರು. 

ಅವರು  ಶಿರಸಿಯ ಎಂಎಂ ಕಾಲೇಜಿನಲ್ಲಿ ಐಕ್ಯುಎಸಿ ಸಂಯೋಜಿತ ವಿಜ್ಞಾನ ವೇದಿಕೆ, ಭೌತಶಾಸ್ತ್ರ ವಿಭಾಗ  ಭೂಮಿಕಾ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಆಕಾಶವೀಕ್ಷಣೆ’ ಕಾರ್ಯಾಗಾರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಿದರು. 

ನಕ್ಷತ್ರವೀಕ್ಷಣೆಯೂ ಒಂದು ಉತ್ತಮ ಹವ್ಯಾಸ ಅದು ಮೂಲವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. 

ಪುರಾಣ, ಇತಿಹಾಸಗಳ ಕಾಲನಿರ್ಣಯಗಳಲ್ಲಿ ಖಗೋಳಶಾಸ್ತ್ರದ ಪಾತ್ರದ ಕುರಿತು (ಮಹಾಭಾರತದಲ್ಲಿ ಉಲ್ಲೇಖಿತವಾದ ಕ್ರ್ಯಾಬ್ ನೆಬ್ಯುಲಾ, ರಾಮಾಯಣದಲ್ಲಿ ಹನುಮಂತನ ಸಾಗರೋಲ್ಲಂಘನದ ದಾಖಲೆಗಳು..)ಉದಾಹರಣೆಯೊಂದಿಗೆ ವಿವರಿಸಿದರು. ಭಾರತೀಯ ಹಾಗೂ ಪಾಶ್ಚಾತ್ಯ ಪುರಾಣಕಥೆಗಳು ಆಕಾಶಕಾಯಗಳೊಂದಿಗೆ ಬೆಸೆದುಕೊಂಡು ಅವನ್ನು ಗುರುತಿಸುವಲ್ಲಿ ಹೇಗೆ ಸಹಾಯಕವೆಂದು ತಿಳಿಸಿದರು. ಖಗೋಳಶಾಸ್ತ್ರ ಹಾಗೂ ತನ್ಮೂಲಕ ಆದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿ, ಜಾಗತಿಕ ಪ್ರಸಿದ್ಧಿಪಡೆದ ಭಾರತೀಯ ವಿಜ್ಞಾನಿಗಳಾದ ವಿಕ್ರಮ ಸಾರಾಭಾಯಿ, ಎಸ್. ಚಂದ್ರಶೇಖರ್, ಸತ್ಯೇಂದ್ರನಾಥ ಬೋಸ್ ಇವರುಗಳನ್ನು ವಿದ್ಯಾರ್ಥಿಗಳು ಎಂದೂ ಮರೆಯಬಾರದೆಂದು ಕಿವಿಮಾತು ಹೇಳಿದರು. 

300x250 AD

ಐನ್ಸ್ಟೀನ್-ಬೋಸ್ ರವರ ಕತೆಗಳು, ನಭದಲ್ಲಿ ಎಲಾನ್ ಮಸ್ಕ್ ರವರ ಸಾಹಸಗಳು, ಹಬಲ್-ಜೇಮ್ಸ್ ವೆಬ್ ದೂರದರ್ಶಕಗಳು, ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿಯ ಸಂಕ್ರಾಂತಿ ವಿಶೇಷ, ಕಪ್ಪುಕುಳಿ, ಸರ್ನ್ ಪ್ರಯೋಗ, ಗುರುತ್ವಮಸೂರ,  ಖಗೋಳಶಾಸ್ತ್ರ ಹಾಗೂ ನಾಗರೀಕತೆ, ಪಿರಮಿಡ್ ಹಾಗೂ ನಕ್ಷತ್ರ, ಸುಶಾಂತ್ ಸಿಂಗ್ ರಜಪೂತರ ಆಕಾಶವೀಕ್ಷಣಾ ಹವ್ಯಾಸ, ಆಗಸ್-360 ಮತ್ತು ಭೈರುಂಬೆಶಾಲಾ ವಿದ್ಯಾರ್ಥಿಗಳ ಕುತೂಹಲಕರ ಪ್ರಯೋಗಗಳು, ಮುಂತಾದ ರೋಚಕ ವಿಷಯಗಳ ಕುರಿತು ಸಚಿತ್ರ ಪ್ರಸ್ತುತಿ ನಡೆಸಿದರು. ತದನಂತರ ಕಾಲೇಜಿನ ಮೈದಾನದಲ್ಲಿ ರಾತ್ರಿ ಹತ್ತರವರೆಗೆ ಬರಿಗಣ್ಣು ಹಾಗೂ ದೂರದರ್ಶಕ ಮುಖಾಂತರ ಆಕಾಶವೀಕ್ಷಣೆ ನಡೆಸಿಕೊಟ್ಟರು. 

    ಕಾಲೇಜಿನ ಪ್ರಾಚಾರ್ಯರಾದ ಡಾ. ಟಿ.ಎಸ್.ಹಳೆಮನೆ, ಐಕ್ಯುಏಸಿ ಸಂಯೋಜಕರಾದ ಡಾ. ಎಸ್.ಎಸ್.ಭಟ್ಟ, ಭೌತಶಾಸ್ತ್ರ ವಿಭಾಗದ ಪ್ರೊ. ಆರ್.ವಾಯ್. ಕೋಳೇಕರ್ ಹಾಗೂ ಭೂಮಿಕಾದ ಪ್ರೊ. ಶೈಲಜಾ ಭಟ್ಟ  ಉಪಸ್ಥಿತರಿದ್ದರು. ವಿಜ್ಞಾನವೇದಿಕೆಯ ಸಂಚಾಲಕ ಡಾ. ಗಣೇಶ ಎಸ್. ಹೆಗಡೆ ನಿರೂಪಿಸಿದರು. ಆಸಕ್ತ 150 ವಿದ್ಯಾರ್ಥಿಗಳು ಕಾರ್ಯಾಗಾರವನ್ನು ಆಸ್ವಾದಿಸಿದರು.

Share This
300x250 AD
300x250 AD
300x250 AD
Back to top