ಸಿದ್ದಾಪುರ: ತಾಲೂಕಿನ ಬಿಳಗಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಹಳ್ಳಿಬೈಲ್ ಪ್ರೌಢಶಾಲೆ ಸಭಾಂಗಣದಲ್ಲಿ ನಡೆಯಿತು.
ಸೋವಿನಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಗೌಡ ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಣವಿಲ್ಲದೆ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ. ಶಿಕ್ಷಣ ಪಡೆದ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಪಠ್ಯ ಪುಸ್ತಕದ ಹೊರತು ಹಲವು ಜ್ಞಾನವನ್ನು ನಾವು ಪಡೆಯಬೇಕು. ಎಲ್ಲ ಜ್ಞಾನ ಹೊಂದಿದರೆ ಮುಂದಿನ ಸಾಧನೆಗೆ ದಾರಿಯಾಗುತ್ತದೆ ಕಲಿಕಾ ಹಬ್ಬ ವಿಶೇಷ ಶಿಕ್ಷಣ ಕ್ರಮವಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್ ನಾಯ್ಕ್ ವಹಿಸಿದ್ದರು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಶೇಟ್, ಕಲಾವತಿ ಹರಿಜನ, ಬಿಳಗಿ ಗ್ರಾಮ ಪಂಚಾಯತ್ ಸದಸ್ಯ ಆದರ್ಶ ಪೈ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶಾಂತಿ ಹೆಗಡೆ, ಸದಸ್ಯ ನರಹರಿ ಗೌಡ, ಇಲಾಖೆಯ ಚಂದ್ರಗೌಡ, ಮಂಜುನಾಥ್ ಚಂದಾವರ, ಶಾಲೆ ಮುಖ್ಯ ಶಿಕ್ಷಕ ಚೈತನ್ಯಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಹಳ್ಳಿಬೈಲ್ ಪ್ರೌಢಶಾಲೆ ವಿದ್ಯಾರ್ಥಿ ವಿದ್ಯಾ ನಾಯ್ಕ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸುಷ್ಮಿತ ಗೌಡ, ಅನುಷಾ ಹೆಗಡೆ ನಿರೂಪಿಸಿದರು. ಶ್ರೀರಕ್ಷಾ ಗೌಡ ವಂದಿಸಿದರು. ಹಳ್ಳಿಬೈಲ್ ಪ್ರೌಢಶಾಲೆ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅತಿಥಿಗಳ ಗಮನ ಸೆಳೆದರು.