ಹೊನ್ನಾವರ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ್ ಖಂಡೂ ಅವರು ತಾಲೂಕಿನ ವಿವಿಧ ಇಲಾಖೆಯ ಕಾಮಗಾರಿ ಪರಿಶೀಲನೆ ನಡೆಸಿದರು.
ಚುನಾಹಿತ ಪ್ರತಿನಿಧಿಗಳು, ಅಧಿಕಾರಿಗಳು ಸಮನ್ವಯತೆಯಿಂದ ಜನಪರ ಚಿಂತನೆಯಿoದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ ಚಂದಾವರ, ಕಡತೋಕಾ, ಕಡ್ಲೆ, ಸಾಲ್ಕೊಡ್, ಕಾಸರಕೋಡ ಪಂಚಾಯತಿ ವ್ಯಾಪ್ತಿಯ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೆಶನ ನೀಡಿದರು. ಚಂದಾವರದ ಅಮೃತ ಉದ್ಯಾನವನ, ಹೊದಕೆ ಶಿರೂರಿನ ಬಾಸ್ಕೆಟ್ ಬಾಲ್ ಕೊರ್ಟ್, ಕೆಕ್ಕಾರನಲ್ಲಿ ತೋಟಗಾರಿಕಾ ಇಲಾಖೆಯ ಡ್ರ್ಯಾಗನ್ ಪ್ರೂಟ್ಸ, ಪರಿಶೀಲನೆ ನಡೆಸಿ ನಾಗಪ್ಪ ಗೌಡ ಇವರೊಂದಿಗೆ ಚರ್ಚಿಸಿದರು. ಕಡ್ಲೆಯ ಅಂಗನವಾಡಿ, ಸಾಲ್ಕೋಡ್ ಜೆ.ಎಂ.ಎo. ಕಾಮಗಾರಿ, ಪ್ರಾಥಮಿಕ ಆರೊಗ್ಯ ಕೇಂದ್ರ, ಪಟ್ಟಣದ ಮಹಿಳಾ ವಸತಿ ನಿಲಯ, ಕಾಸರಕೋಡ ಇಕೋ ಬೀಚ್, ಕಾಂಡ್ಲವನ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಗೆ ಆಡಳಿತ ವರ್ಗ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ್ದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುವುದು, ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.
ಇ.ಓ ಸುರೇಶ ನಾಯ್ಕ, ಎ.ಇ.ಇ. ಪ್ರದೀಪ ಆಚಾರಿ, ನರೇಗಾ ಸಹಾಯಕ ನಿರ್ದೇಶಕ ಕೃಷ್ಣಾನಂದ ವಲಯ ಅರಣ್ಯಾಧಿಕಾರಿ ವಿಕ್ರಂ ರೆಡ್ಡಿ, ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.