• first
  Slide
  Slide
  previous arrow
  next arrow
 • ಸಿದ್ಧಾಪುರದಲ್ಲಿ ಜ.25ಕ್ಕೆ ಅರಣ್ಯ ಅತಿಕ್ರಮಣದಾರರ ಸಭೆ

  300x250 AD

  ಸಿದ್ಧಾಪುರ: ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನು ಸಿದ್ಧಾಪುರದ ನೆಹರೂ ಮೈದಾನದ ಎದುರುಗಡೆಯ ಗಂಗಾಬಿಕಾ ದೇವಸ್ಥಾನದ ಸಭಾಭವನದಲ್ಲಿ ಜ. ರ ಮುಂಜಾನೆ 10 ಗಂಟೆಗೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಅರಣ್ಯ ಸಿಬ್ಬಂದಿಗಳ ದೌರ್ಜನ್ಯ, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಕುರಿತು ಮಾಹಿತಿ,ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಜರಗುವ ಬಜೆಟ್ ಅಧಿವೇಶನದಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳುವ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಯ ಅನುಭೋಗದ ಕ್ಷೇತ್ರಕ್ಕೆ  ಆತಂಕ ಪಡಿಸುವುದಿಲ್ಲ ಎಂಬ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ ಲಿಖಿತ ಪತ್ರದ ಕುರಿತು, ಅಸಮರ್ಪಕ ಜಿಪಿಎಸ್ ರಶೀದಿ ಹಿಂತಿರುಗಿಸುವ ಹಾಗೂ ಗುರುತಿನ ಪತ್ರ ವಿತರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD

   ಸಿದ್ಧಾಪುರ ತಾಲೂಕಿನ ಅರಣ್ಯ ಅತಿಕ್ರಮಣದಾರರು ಸಭೆಯಲ್ಲಿ ಭಾಗವಹಿಸಲು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

  Share This
  300x250 AD
  300x250 AD
  300x250 AD
  Back to top