Slide
Slide
Slide
previous arrow
next arrow

ಶಿರಸಿ ಲಯನ್ಸ್ ಕ್ಲಬ್ ವತಿಯಿಂದ e-ವೇಸ್ಟ್ ಸಂಗ್ರಹ

300x250 AD

ಶಿರಸಿ: ಲಯನ್ಸ್ ಇಂಟರನ್ಯಾಷನಲ್ ವತಿಯಿಂದ ಜನೇವರಿ 13 ರಿಂದ ಫ಼ೆಬ್ರವರಿ 13 ರವರೆಗೆ  e- ವೇಸ್ಟ್ (ನಿರುಪಯುಕ್ತ ವಿದ್ಯುತ್ ಚಾಲಿತ ಉಪಕರಣಗಳು) ಸಂಗ್ರಹಗಳ ಮೆಗಾ ಕ್ಯಾಂಪೇನ್ ನಡೆಯುತ್ತಿದೆ. ಈ ನಿರುಪಯುಕ್ತ ವಸ್ತುಗಳು ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುವುದಲ್ಲದೆ, ಆರೋಗ್ಯಕ್ಕೂ ಹಾನಿಕರ. ಈ ನಿಟ್ಟಿನಲ್ಲಿ‌ ಶಿರಸಿ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮನೆಯಲ್ಲಿ, ಕಛೇರಿಯಲ್ಲಿ ಇರುವ ನಿರುಪಯುಕ್ತ ವಿದ್ಯುತ್ ಚಾಲಿತ ಉಪಕರಣಗಳನ್ನು ಉದಾಹರಣೆಗೆ ಫ್ರಿಡ್ಜ್, ಟಿವಿ, ಕಂಪ್ಯೂಟರ್, ಕೀಬೋರ್ಡ್, ಮೌಸ್, ಯುಪಿಎಸ್, ಇಸ್ತ್ರಿ ಪೆಟ್ಟಿಗೆ, ವೈರ್ ಗಳು, ಮೊಬೈಲ್, ಚಾರ್ಜರ್, ಹೆಡ್ ಫೋನ್, ಫ್ಯಾನ್, ಓವನ್, ಜೆನರೇಟರ್ ಇತ್ಯಾದಿಗಳನ್ನು ಸಂಗ್ರಹಿಸಿ ಫೆ.5ರ ಒಳಗಾಗಿ ಲಯನ್ಸ್ ಸದಸ್ಯರಿಗೆ ಕರೆ ಮಾಡಿದಲ್ಲಿ, ಅವನ್ನು ಸಂಗ್ರಹಿಸುವ ಮಹತ್ಕಾರ್ಯವನ್ನು ಕೈಗೊಳ್ಳಲಾಗಿದೆ.


ಸಂಪರ್ಕಿಸಬೇಕಾದ ಲಯನ್ ಸದಸ್ಯರ ಯಾದಿ.
1. ಲಯನ್ ತ್ರಿವಿಕ್ರಮ್ ಪಟವರ್ಧನ್ ( ಅಧ್ಯಕ್ಷರು, ಲಯನ್ಸ್ ಕ್ಲಬ್, ಶಿರಸಿ)          ಮೋ: 9845324308
2. ಲಯನ್ ರಮಾ ಪಟವರ್ಧನ್ (ಕಾರ್ಯದರ್ಶಿ, ಲಯನ್ಸ್ ಕ್ಲಬ್, ಶಿರಸಿ)          ಮೋ: 9986042308
3. ಲಯನ್ ಅಶೋಕ ಹೆಗಡೆ (ಈ ವೇಸ್ಟ್ ಕೊ ಅರ್ಡಿನೇಟರ್, ಉತ್ತರ ಕನ್ನಡ)   ಮೋ: 9945255753
4. ಲಯನ್ ಅಶ್ವಥ್ ಹೆಗಡೆ (ಲಿಯೊ ಅಡ್ವೈಸರ್,ಲಿಯೊ ಕ್ಲಬ್ ಶಿರಸಿ)                 ಮೋ: 9886555919

300x250 AD


ಇನ್ನುಳಿದ ಯಾವುದೇ ಸಂದೇಹಗಳಿದ್ದಲ್ಲಿ ಮೇಲ್ಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಲು‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top