• Slide
  Slide
  Slide
  previous arrow
  next arrow
 • ಅಂಡರ್‌ ಆರ್ಮ್ ಕ್ರಿಕೆಟ್ ಪಂದ್ಯಾವಳಿ: ಅರಬೈಲ್ ತಂಡ‌ ಚಾಂಪಿಯನ್

  300x250 AD

  ಅಂಕೋಲಾ: ತಾಲ್ಲೂಕಿನ ಹಳವಳ್ಳಿಯಲ್ಲಿ ಕಿರಣ ಯುವಕ ಸಂಘ ಇವರ ಆಶ್ರಯದಲ್ಲಿ ದಿ.ಕು. ಪಲ್ಲವಿ ಭಟ್ಟ ಸ್ಮರಣಾರ್ಥ ಗ್ರಾಮೀಣ ಮಟ್ಟದ ಅಂಡರ್ ಆರ್ಮ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.
  ಬಹುಮಾನ ವಿತರಕರಾಗಿ ಆಗಮಿಸಿ ಎಲ್.ಪಿ. ಭಟ್ಟ ಹಳವಳ್ಳಿ, ಡೋಂಗ್ರಿ ಗ್ರಾ.ಪಂ. ಉಪಾಧ್ಯಕ್ಷರಾದ ವಿನೋದ್ ಭಟ್ಟ ,ಗ್ರಾ.ಪಂ ಸದಸ್ಯರಾದ ನಿತ್ಯಾನಂದ ಭಟ್ಟ ಹಳವಳ್ಳಿ ಮಾತನಾಡಿದರು .ಕ್ರೀಡಾ ಪ್ರೋತ್ಸಾಹಕರಾದ ವಿನೋದ್ ನಾಯ್ಕ ,ನಾರಾಯಣ ಹೆಬ್ಬಾರ್, ನಾರಾಯಣ ಹೆಗಡೆ ಶಂಬಡೆ ಉಪಸ್ಥಿತರಿದ್ದರು.
  ಆತಿಥೇಯ ಟೀಮ್ ಹಳವಳ್ಳಿ ತಂಡವನ್ನು ಮಣಿಸಿ ಅರಬೈಲ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.
  ಉತ್ತಮ ಬ್ಯಾಟ್ಸ್‌ಮನ್ ಆಗಿ ಹಳವಳ್ಳಿ ತಂಡದ ಕೃಷ್ಣಮೂರ್ತಿ ಹೆಬ್ಬಾರ್,‌ ಉತ್ತಮ ಬೌಲರ್ ಆಗಿ ಅರಬೈಲ್ ತಂಡದ ದಾಮು ಶೆಟ್ಟಿ, ಸರಣಿ ಶ್ರೇಷ್ಠನಾಗಿ ಹಳವಳ್ಳಿ ತಂಡದ ಗುರು ನಾಯ್ಕ, ಪೈನಲ್ ಪಂದ್ಯ ಶ್ರೇಷ್ಠನಾಗಿ ಅರಬೈಲಿ ತಂಡದ ಹರೀಶ್ ನಾಯ್ಕ, ಉತ್ತಮ ಕ್ಷೇತ್ರರಕ್ಷಕನಾಗಿ ಅರಬೈಲ್ ತಂಡದ ದಿಲೀಪ್, ಉತ್ತಮ ಗೂಟ ರಕ್ಷಕನಾಗಿ ವಿಭಾ ರಾಕರ್ಸ್ ತಂಡದ ನಿತ್ಯಾನಂದ ಭಟ್ಟ ಪ್ರಶಸ್ತಿ ಪಡೆದರು. ಪಂದ್ಯಾವಳಿಯಲ್ಲಿ ಒಟ್ಟು ಸ್ಥಳೀಯ 13 ತಂಡಗಳು ಭಾಗವಹಿಸಿದ್ದವು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top