• first
  Slide
  Slide
  previous arrow
  next arrow
 • ಗುರುದತ್ತ ಭಟ್‌ಗೆ ಆರ್.ಎಲ್. ವಾಸುದೇವ ರಾವ್ ಪ್ರಶಸ್ತಿ

  300x250 AD

  ಶಿರಸಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ವನ್ಯಜೀವಿ ವಿಭಾಗದ ಅತ್ಯುತ್ತಮ ವರದಿಗೆ ಕೊಡಮಾಡುವ ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿಗೆ ‘ವಿಜಯ ಕರ್ನಾಟಕ’ ಪತ್ರಿಕೆ ಬೆಳಗಾವಿ ಆವೃತ್ತಿಯ ಹಿರಿಯ ವರದಿಗಾರ ಗುರುದತ್ತ ಭಟ್ ಆಯ್ಕೆಯಾಗಿದ್ದಾರೆ.
  ಮೂಲತಃ ಶಿರಸಿಯವರಾದ ಗುರುದತ್ತ ಭಟ್ ಶಿರಸಿಯಲ್ಲಿ ಜನಮಾಧ್ಯಮ, ವಿಜಯವಾಣಿ ಪತ್ರಿಕೆಯ ವರದಿಗಾರರಾಗಿ ಬಳಿಕ ಕಾರವಾರದಲ್ಲಿ ‘ವಿಜಯ ಕರ್ನಾಟಕ’ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಕುರಿತಂತೆ ಅವರ ಪರಿಣಾಮಕಾರಿ ವರದಿಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
  ವಿಜಯಪುರದಲ್ಲಿ ನಡೆಯುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top