Slide
Slide
Slide
previous arrow
next arrow

ಜನಸೇವೆಯಿಂದ ಸಿಗುವ ಆತ್ಮತೃಪ್ತಿ ಬೆಲೆ ಕಟ್ಟಲಾಗದ್ದು: ವಿವೇಕ್ ಹೆಬ್ಬಾರ್

300x250 AD

ಮುಂಡಗೋಡ: ಕ್ಷೇತ್ರದಲ್ಲಿ ರೈತರಿಗೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಬೇಕು ಎನ್ನುವುದು ಸಚಿವ ಶಿವರಾಮ ಹೆಬ್ಬಾರ್ ಅವರ ಆಸೆ, ಅದರಂತೆ ಮಂತ್ರಿಯಾದ ನಂತರ ಹಲವು ಕಾರ್ಯವನ್ನ ಮಾಡಲಾಗಿದೆ. ಜನಸೇವೆಯಿಂದ ಸಿಗುವ ಆತ್ಮತೃಪ್ತಿಗೆ ಬೆಲೆಕಟ್ಟಲು ಅಸಾಧ್ಯ ಎಂದು ಯುವ ಮುಖಂಡ ವಿವೇಕ್ ಹೆಬ್ಬಾರ್ ಹೇಳಿದರು.
ವಿ.ಐ.ಎನ್.ಪಿ ಡಿಸ್ಟಿಲರಿಸ್ ಆ್ಯಂಡ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಕಾರ್ಯ ಚಟುವಟಿಕೆಯ ಅಡಿಯಲ್ಲಿ ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ (ಡಿಪ್ಲೊಮಾ) ಕಾಲೇಜಿಗೆ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು  ನಮ್ಮ ಕುಟುಂಬ ಇಪ್ಪತ್ತಕ್ಕು ಅಧಿಕ ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದೆ ಅದರಲ್ಲಿ ಅತಿಹೆಚ್ಚು ಶೈಕ್ಷಣಿಕ ವಿಚಾರದಲ್ಲಿ ಸಾಧ್ಯವಾದಷ್ಟು ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.
ಕ್ಷೇತ್ರದಲ್ಲಿ ವಿವಿಧ ಕಂಪನಿಗಳ ಸಿ.ಎಸ್.ಆರ್ ಫಂಡ್ ಗಳನ್ನ ಸುಮಾರು 7 ಕೋಟಿ ಅನುಧಾನವನ್ನ ಕ್ಷೇತ್ರಕ್ಕೆ ಹೆಬ್ಬಾರ್ ಅವರ ಪ್ರಯತ್ನದಿಂದ ತಂದಿದ್ದಾರೆ.  ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿದೆಯೋ ಅದನ್ನ ಜನರಿಗೆ, ಬಡವರಿಗೆ ಮಾಡಬೇಕು ಎಂದು ತಂದೆಯವರು ತಿಳಿಸುತ್ತಾರೆ. ಯಾರೇ ಕಷ್ಟ ಎಂದು ಬಂದರೂ ಆದಷ್ಟು ಸಹಾಯವನ್ನು ಮಾಡುವ ಕಾರ್ಯವನ್ನು ಮಾಡಲಾಗುತ್ತಿದ್ದು, ಅದರಲ್ಲೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಮಾಡಿದ್ದೇವೆ. ಸಹಾಯ ಪಡೆದವರು ಉನ್ನತ ಸ್ಥಾನಕ್ಕೆ ಹೋದ ನಂತರ ಬಂದು ನಮ್ಮ ಬಳಿ ಮಾತನಾಡಿದ ಸಿಗುವಷ್ಟು ತೃಪ್ತಿ ಬೇರೆ ಸಂದರ್ಭದಲ್ಲಿ ಸಿಗುವುದಿಲ್ಲ ಎಂದರು.
ನಮ್ಮ ಕಂಪನಿ ಪರಿಪಾಠವನ್ನು ಇಟ್ಟುಕೊಂಡು ಬಂದಿದ್ದು ಗಳಿಸಿದ ಹಣವನ್ನು ಸಮಾಜದಲ್ಲಿ ಒಳ್ಳೆಯ ಕಾರ್ಯಕ್ಕೆ ಕೊಡಲಾಗುತ್ತಿದೆ. ಶುದ್ದ ನೀರಿನ ಘಟಕ ಕಟ್ಟುಕೊಡುವ ಕೆಲಸ ನಮ್ಮದು. ಅದನ್ನ ಸುರಕ್ಷಿತವಾಗಿ ಇಟ್ಟುಕೊಳ್ಳುವ ಕೆಲಸ ಕಾಲೇಜಿನವರದ್ದು ಹಾಗೂ ವಿದ್ಯಾರ್ಥಿಗಳದ್ದು. ಸುರಕ್ಷಿತವಾಗಿ ಎಲ್ಲರಿಗೂ ಉಪಯೋಗ ಆಗುವಂತೆ ಬಳಸಿ ಎಂದು ವಿವೇಕ್ ಹೆಬ್ಬಾರ್ ಹೇಳಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಹೆಚ್ಚು ಅಂಕ ಪಡೆದರು ಕೆಲ ವಿದ್ಯಾರ್ಥಿಗಳು ಕೆಲಸ ಸಂದರ್ಶನದಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕೆಲಸ ಪಡೆಯುವಾಗ ಕಷ್ಟ ಪಡುತ್ತಾರೆ. ಶಿಕ್ಷಣದ ಜೊತೆಗೆ ಜಗತ್ತಿನ ಆಗುಹೋಗುಗಳ ಬಗ್ಗೆ ಸಹ ಜ್ಞಾನವನ್ನು ಪಡೆಯಬೇಕು. ಈಗಿನ ಕಾಲ ಯೋಗ್ಯತೆ ಹಾಗೂ ಅರ್ಹತೆಯ ಮೇಲೆ ಎಲ್ಲವನ್ನೂ ಪಡೆಯುವ ಕಾಲವಾಗಿದ್ದು ಪ್ರತಿಯೊಬ್ಬರು ಶ್ರಮಪಟ್ಟರೇ ಉನ್ನತ ಸ್ಥಾನಕ್ಕೆ ಹೋಗಬಹುದು ಎಂದರು.
ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪರೀಕ್ಷೆ ಬಂದರೆ, ನಮಗೆ ಐದು ವರ್ಷಕ್ಕೊಮ್ಮೆ ಪರೀಕ್ಷೆ ಬರುತ್ತದೆ. ನಮ್ಮ ಪರೀಕ್ಷೆಯಲ್ಲಿ ಪಾಸು ಮಾಡುವವರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು. ಶಿಕ್ಷಣ ಪಡೆದ ವಿದ್ಯಾರ್ಥಿಗಳು ಎಲ್ಲವನ್ನೂ ಗಮನಿಸಿ ಯಾರಿಂದ ಸಮಾಜಕ್ಕೆ ಒಳಿತಾಗಲಿದೆಯೋ ಅಂತಹ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್.ಟಿ.ಪಾಟೀಲ್, ಪ.ಪಂ ಉಪಾಧ್ಯಕ್ಷ ಶ್ರೀಕಾಂತ ಸಾನು, ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ಕೊಣನಕೇರಿ, ಪ್ರಮುಖರಾದ ಉಮೇಶ್ ಬಿಜಾಪುರ, ದೇವು ಪಾಟೀಲ್, ಗುಡ್ಡಪ್ಪ ಕಾತೂರ, ವೈ.ಪಿ.ಪಾಟೀಲ್ ಸೇರಿದಂತೆ, ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top