Slide
Slide
Slide
previous arrow
next arrow

‘ಕುಮಾರವ್ಯಾಸ ಭಾರತ ಕಥಾಮೃತ’ ಕೃತಿ ಬಿಡುಗಡೆ

300x250 AD

ಸಿದ್ದಾಪುರ: ಕರ್ಣಾಟಭಾರತ ಕಥಾಮಂಜರಿ ರಸಯುಕ್ತವಾದ ಕಾವ್ಯ. ತೆಪ್ಪದ ಲಕ್ಷ್ಮೀನಾರಾಯಣ ಭಟ್ಟರು ಇಂದಿನ ಭಾಷೆಯಲ್ಲಿ ಕುಮಾರವ್ಯಾಸನ ಕಾವ್ಯವನ್ನು ಮತ್ತೊಮ್ಮೆ ರಚಿಸಿದ್ದಾರೆ. ಈ ಕೃತಿಕಾರರಿಂದ ಮತ್ತಷ್ಟು ಮೌಲಿಕ ಕೃತಿಗಳು ಹೊರಬರುವಂತಾಗಲಿ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.
ಅವರು ಭಾನ್ಕುಳಿ ಮಠ ಗೋಸ್ವರ್ಗದ ಗೋದಿನ-ಉತ್ಸವ ಸಂದರ್ಭದಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಗವಂತನ ಅವತಾರದ ಕಥೆಗಳ ಅನುಸಂಧಾನ ಜೀವಿಯ ಸಮುದ್ಧರಣಕ್ಕೆ ಕಾರಣವಾಗುತ್ತದೆ. ಇದಕ್ಕಾಗಿಯೇ ಪ್ರಾಚೀನರು ಆ ಚರಿತೆಗಳನ್ನು ಪುರಾಣವಾಗಿ, ಇತಿಹಾಸವಾಗಿ, ಕಾವ್ಯವಾಗಿ, ದೃಶ್ಯಕಲೆಯಾಗಿ ಬಹುವಿಧದಲ್ಲಿ ಮತ್ತೆ ಮತ್ತೆ ಸೃಜಿಸುತ್ತಾ ಬಂದರು. ಇದರ ಮುಂದುವರಿಕೆಯೇ ಭಾರತೀಯ ಸಾಹಿತ್ಯದ ಮೇರು ಕವಿಗಳಲ್ಲಿ ಒಬ್ಬನಾದ ಕುಮಾರವ್ಯಾಸ ವಿರಚಿಸಿದ ಕರ್ಣಾಟಭಾರತ ಕಥಾಮಂಜರಿ ಎಂದರು.
ಕೃತಿಯ ಲೇಖಕರಾದ ಲಕ್ಷ್ಮೀನಾರಾಯಣ ಭಟ್ಟ ತೆಪ್ಪ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಶ್ರೀಭಾರತೀ ಪ್ರಕಾಶನದ ಅಧ್ಯಕ್ಷರಾದ ಸಚಿನ್ ಎಲ್.ಎಸ್. ಮುಂತಾದ ಗಣ್ಯರು ಭಾಗವಹಿಸಿದ್ದರು. ಕೃತಿಕಾರರ ಸರಳಗನ್ನಡದ ಸುಲಲಿತ ಭಾಷೆ, ಅಂಕಣಕಾರರಾದ ನಾರಾಯಣ ಯಾಜಿ ಅವರ ಮುನ್ನುಡಿ, ಶ್ರೀಭಾರತೀ ಪ್ರಕಾಶನದ ದಿಗ್ದರ್ಶಕರಾದ ವಿದ್ವಾನ್ ಜಗದೀಶಶರ್ಮಾ ಸಂಪ ಅವರ ಬೆನ್ನುಡಿ ಬರಹ ಹೊಂದಿರುವ ಈ ಹೊತ್ತಿಗೆ ಕನ್ನಡಲೋಕ (http://www.kannadaloka.in ) ಜಾಲತಾಣದಲ್ಲಿ ಲಭ್ಯವಿದೆ.

300x250 AD
Share This
300x250 AD
300x250 AD
300x250 AD
Back to top