ಶಿರಸಿ: ಶಿರಸಿ 220/11 ಕೆ.ವಿ ಎಸಳೆ ಉಪಕೇಂದ್ರದಲ್ಲಿ ಹೊಸದಾಗಿ ಬಸ್ ಕಪ್ಲರ್ ಹಾಗೂ ಹೆಚ್ಚುವರಿ 11 ಕೆ.ವಿ ಬ್ರೇಕರ್ ನಿರ್ಮಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ಉಪ ವಿಭಾಗದ ಗ್ರಾಮೀಣ ಮಾರ್ಗಗಳಾದ ತಿಗಣಿ, ಅಂಡಗಿ, ಭಾಶಿ, ಇಸಳೂರು, ಬಂಕನಾಳ, ದಾಸನಕೊಪ್ಪ 11 ಕೆ.ವಿ ಮಾರ್ಗದಲ್ಲಿ ಜ. 17 ಮಂಗಳವಾರ ಹಾಗೂ ಜ.18 ಬುಧವಾರ ಬೆಳಿಗ್ಗೆ 9 ಘಂಟೆ ಇಂದ ಸಾಯಂಕಾಲ 6 ಘಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಪಟ್ಟಣ ಶಾಖೆಯ ಕೆ.ಎಚ್.ಬಿ ಕಾಲೋನಿ, ಕಸ್ತೂರಾಬಾನಗರ, ಚಿಪಗಿ, ವಿವೇಕಾನಂದನಗರ, ಬಸಟ್ಟಿಕೆರೆ, ಡಿಪೋ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.