ಭಟ್ಕಳ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಕೇವಲ ತಮ್ಮ ಸಂಘದ ಸದಸ್ಯರಿಗಾಗಿ ಮಾತ್ರ ಕಾರ್ಯನಿರ್ವಹಿಸದೆ ಸಮಾಜಮುಖಿ ಕಾರ್ಯಗಳಲ್ಲೂ ತಮ್ಮ ದೇಣಿಗೆಯನ್ನು ನೀಡಿ ಉದಾರತೆಯನ್ನು ಮೆರೆಯುತ್ತಿದ್ದಾರೆ ಎಂದು ಸಂಘದ ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಕಮಲಾವತಿ ಸಭಾಂಗಣದಲ್ಲಿ ಭಟ್ಕಳ ಸಂಘದ ನೂತನ ಕಚೇರಿ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭಟ್ಕಳ ಸಂಘವೂ ಉತ್ತಮ ಕಚೇರಿಯನ್ನು ಹೊಂದಿದ್ದು ಇಲ್ಲಿ ಸರ್ಕಾರಿ ನೌಕರರು ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಅನುಕೂಲವಾಗಲಿದೆ. ಭಟ್ಕಳ ಸಂಘದ ಅಧ್ಯಕ್ಷ ಮೋಹನ ನಾಯ್ಕ ಕ್ರಿಯಾಶೀಲ ಅಧ್ಯಕ್ಷರಾಗಿದ್ದು ಇವರು ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಸಹಾಯ ಮಾಡಿದ್ದಾರೆ. ರಾಜ್ಯ ಸರ್ಕಾರದ ಪುಣ್ಯಕೋಟಿ ನಿಧಿಗೂ ಸಹಕಾರ ನೀಡಿದ್ದಾರೆ. ಸರ್ಕಾರದ ಜೊತೆ ನಾವು ಸಹಕಾರ ನೀಡಿದಾಗ ಮಾತ್ರ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತದೆ.ಸರ್ಕಾರಿ ನೌಕರರ ಎನ್ಪಿಎಸ್ ಸಮಸ್ಯೆಯನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಅವರು ಕೂಡ ಸಮಸ್ಯೆ ಬಗೆಹರಿಸಲು ಉತ್ಸುಕರಾಗಿದ್ದು ಮುಂದಿನ 15 ದಿನಗಳಲ್ಲಿ ತನ್ನ ಬಳಿ ಚರ್ಚೆ ನಡೆಸುವದಾಗಿ ತಿಳಿಸಿದ್ದಾರೆ. ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ನಾವು ಪಾಲನೆ ಮಾಡಬೇಕು. ಸದಾ ಒತ್ತಡದಲ್ಲಿರುವ ಸಿಬ್ಬಂದಿ ವರ್ಷಕ್ಕೆ ಒಮ್ಮೆಯಾದರೂ ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಕ್ಕೂ ಭಾಗಿಯಾಗಬೇಕು. ಇದರಿಂದ ಇತರೆ ಸರ್ಕಾರಿ ನೌಕರರೊಂದಿಗೆ ಒಡನಾಟ ಹೆಚ್ಚಿ ಇದು ಸಂಘಟನೆಗೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಶ್ಚಿಮಘಟ್ಟಗಳ ಕಾರ್ಯಪಡೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ರಾಜ್ಯ ಸರ್ಕಾರಿ ನೌಕರರು ಪುಣ್ಯಕೋಟಿ ನಿಧಿಗೆ ಹಣ ಸಂಗ್ರಹಿಸಿ ನೀಡಿದ್ದು ಸಂತಸದ ಸಂಗತಿ ಎಂದರು.
ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ಎಸ, ಟಿಎಚ್ಒ ಡಾ. ಸವಿತಾ ಕಾಮತ, ಸಂಗದ ಜಿಲ್ಲಾಧ್ಯಕ್ಷ ಸಂಜೀವ ಕುಮಾರ, ರಾಜ್ಯ ಉಪಾಧ್ಯಕ್ಷ ಮೋಹನಕುಮಾರ, ಇಒ ಪ್ರಭಾಕರ ಚಿಕ್ಕನಮನೆ, ಜಿಲ್ಲಾಪ್ರಕಾ ರಮೇಶ ನಾಯ್ಕ ಮಾತನಾಡಿದರು. ಅಧ್ಯಕ್ಷತೆ ಮವಿಸಿ ಭಟ್ಕಳ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿದರೆ, ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಉಲ್ಲಸ ನಾಯ್ಕ, ಪ್ರೌಡಶಾಲಾ ಶಿಕ್ಷಕರ ಸಂಘದ ಮಂಜುನಾಥ ನಾಯ್ಕ, ಪ್ರಧಾನ ಕಾರ್ಯದರ್ಶಿ ಗಣೇಶ ಹೆಗಡೆ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಖಜಾಂಚಿ ವಿದ್ಯಾ ಹೆಗಡೆ ಇದ್ದರು.
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸಂಘದ ವತಿಯಿಂದ ಸಂಗೀತ ಸೇರಿ ಇತರೆ ಮನರಂಜನಾ ಕಾರ್ಯಕ್ರಮ ನಡೆಯಿತು.
ಪ್ರತಿಬಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ, ಪ್ರಾಮಾಣಿಕ ಸವೆ ಸಲ್ಲಿಸಿದ 18 ಸಿಬ್ಬಂದಿಗೆ ತಾಲೂಕು ಸೇವಾ ರತ್ನ ಬಿರುದು ನೀಡಲಾಯಿತು. ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ವಿಜೇತೆ ಡಾ. ಸವಿತಾ ಕಾಮತ, ಕ್ರೀಡಾ ಸೇರಿ ವಿವಿದ ಕ್ಷೇತ್ರಗಳಲ್ಲಿ ಅವರನ್ನು ಗೌರವಿಸಲಾಯಿತು. ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.