ಹೊನ್ನಾವರ: ತಾಲೂಕಿನ ಹಳದೀಪುರದ ಶ್ರೀ ತೆಂಗಾಯಿ ಮಹಾಸತಿ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ವತಿಯಿಂದ ನಡೆಯುವ 2 ನೇ ವರ್ಷದ ಎಚ್.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಗೆ ಉದ್ಯಮಿ ಜನಾರ್ಧನ ನಾಯ್ಕ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಊರಿನ ಯುವಕರು ಹಾಗೂ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಆಟಗಾರರನ್ನು ಕರೆಸಿ ಆಕರ್ಷಣೀಯವಾಗಿ ಪಂದ್ಯಾವಳಿ ನಡೆಸುತ್ತಾರೆ. ಸಂಘಟನೆಯವರು ಆಯೋಜಿಸಿದ ಎಚ್.ಪಿ.ಎಲ್ ಪಂದ್ಯಾವಳಿ ಹಳದಿಪುರದ ಹೆಮ್ಮೆ. ಯಾವುದೇ ಚ್ಯುತಿ ಬಾರದಂತೆ ಹಳದಿಪುರದ ಕ್ರೀಡಾಭಿಮಾನಿಗಳು ಊರಿನ ಕೀರ್ತಿಯನ್ನು ಹೆಚ್ಚಿಸುವಂತೆ ಕರೆ ನೀಡಿದರು..
ಗ್ರಾಮ ಪಂಚಾಯತ್ ಸದಸ್ಯ ಸಂಶಿರ್ ಶೇಖ್ ಮಾತನಾಡಿ ಕ್ರೀಡೆ ಎನ್ನುವುದು ಸರ್ವಧರ್ಮ ಸಹಬಾಳ್ವೆಗೆ ಪೂರಕವಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮಹೇಶ್ ನಾಯ್ಕ ಮಾತನಾಡಿ ಒಂದು ಕಾರ್ಯಕ್ರಮ ಸಂಘಟನೆಯ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ. ಖಾರ್ವಿ ಸಮಾಜದ ಯುವಕರು ತಮ್ಮದೊಂದು ಸಂಘಟನೆ ಕಟ್ಟಿಕೊಂಡು ಪಂದ್ಯಾವಳಿ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಂಡದ ಮಾಲೀಕರಾದ ಮಹೇಶ್ ನಾಯ್ಕ, ರವಿ ಮೊಗೇರ, ಗಣಪತಿ ಭಂಡಾರಿ, ಈಶ್ವರ್ ಪಟಗಾರ, ಖಾರ್ವಿ ಸಮಾಜದ ಮುಖಂಡರಾದ ಸುರೇಶ್ ಮೇಸ್ತ, ಶ್ರೀ ತೇಂಗಾಯಿ ಮಹಾಸತಿ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯ ಅಧ್ಯಕ್ಷರಾದ ವಿ. ಪಿ. ಮೇಸ್ತ ಉಪಸ್ಥಿತರಿದ್ದರು.