Slide
Slide
Slide
previous arrow
next arrow

ಶಿರಸಿಯಲ್ಲಿ ಮೊದಲ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಬೊಮ್ಮಾಯಿ

300x250 AD

ಶಿರಸಿ: ರಾಜ್ಯದಲ್ಲಿ ಮೊದಲ ಪರಿಸರ ವಿಶ್ವವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ನಗರಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜತೆ ಮಾತನಾಡಿದರು.

ಬಜೆಟ್ ನಲ್ಲಿ ಇದಕ್ಕಾಗಿ ಅನುದಾನ ಘೋಷಿಸಲಾಗುವುದು. ತೋಟಗಾರಿಕೆ, ಅರಣ್ಯ ಕಾಲೇಜು ಇಲ್ಲಿದೆ. ಇವುಗಳನ್ನು ವಿಲೀನಗೊಳಿಸಿ ವನ್ಯಜೀವಿ ರಕ್ಷಣೆ, ಪರಿಸರ ಸಂರಕ್ಷಣೆ, ಕೃಷಿ ಸೇರಿದಂತೆ ಪರಿಸರ ಪೂರಕ ಅಧ್ಯಯನಗಳಿಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯ ಸ್ಥಾಪನೆ ಭರವಸೆ ನೀಡಿದರು.

ಅರಣ್ಯ ಭೂಮಿ ಹೆಚ್ಚಿರುವ ಉತ್ತರ ಕನ್ನಡದಲ್ಲಿ ಪರಿಸರ ರಕ್ಷಣೆ ಜತೆಗೆ ಅಭಿವೃದ್ಧಿ ಕೈಗೊಳ್ಳುವ ಸವಾಲು ಇದೆ. ಕಳಚೆ ಗ್ರಾಮದಲ್ಲಿ ಭೂಕುಸಿತ ಉಂಟಾಗದಂತೆ ಕ್ರಮವಹಿಸಲಾಗುವುದು. ಅರಣ್ಯ ಮರು ನಿರ್ಮಾಣ ಮಾಡಲಾಗುವುದು. ಪುನರ್ವಸತಿಗೆ ಹೆಚ್ಚಿನ ಅನುದಾನ ಕೊಡಲಾಗುವುದು ಎಂದು ಭರವಸೆ ನೀಡಿದರು.

ಅರಣ್ಯವಾಸಿಗಳಿಗೆ ಒಂದೇ ತಲೆಮಾರಿನ ದಾಖಲೆ ಪಡೆದು ಮಂಜೂರು ನೀಡುವಂತೆ ಸುಪ್ರಿಂಕೋರ್ಟ್‌ ಗೆ ರಾಜ್ಯ ಸರ್ಕಾರದ ಅಭಿಪ್ರಾಯ ತಿಳಿಸಲಾಗಿದೆ ಎಂದರು.

300x250 AD

ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಾಡದು. ಸುಪ್ರಿಂಕೋರ್ಟ್ ನಿರ್ಣಯ ಬರುವವರೆಗೂ ಅತಿಕ್ರಮಣದಾರರಿಗೆ ತೊಂದರೆ ನೀಡದಂತೆ ಅರಣ್ಯ ಇಲಾಖೆಗೂ ಸೂಚಿಸಲಾಗಿದೆ ಎಂದರು.

ಶಿರಸಿ ಜಿಲ್ಲೆ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ಬೇಡಿಕೆ ಇದೆ. ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ ಹೆಬ್ಬಾರ, ಕೋಟ ಶ್ರೀನಿವಾಸ ಪೂಜಾರಿ, ಸಿ.ಸಿ.ಪಾಟೀಲ್, ಶಾಸಕರಾದ ಸುನೀಲ ನಾಯ್ಕ, ಶಾಂತಾರಾಮ ಸಿದ್ಧಿ ಇದ್ದರು.

Share This
300x250 AD
300x250 AD
300x250 AD
Back to top