ಯಲ್ಲಾಪುರ: ತಾಲೂಕಿನ ಹೊಸಳ್ಳಿಯಲ್ಲಿ ಶನಿವಾರ ಸಂಜೆ ರೈತನೊಬ್ಬ ಹೈನುಗಾರಿಕೆಗಾಗಿ ಮೇವು ಸಂಗ್ರಹಣೆ ಮಾಡಿದ್ದ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ನಡೆದಿದೆ.
ಹೊಸಳ್ಳಿಯ ಬಾಗು ಬೀರು ಬಾಜಾರಿ ಹೈನುಗಾರಿಕೆಗಾಗಿ ಮೇವು ಸಂಗ್ರಹಣೆ ಮಾಡಿ ತನ್ನ ಉಪ ಜೀವನ ನಡೆಸಿ ಉಳಿದ ಮೇವನ್ನು ಬೇರೆ ರೈತರಿಗೆ ಮಾರಾಟ ಮಾಡಲು ನೆರೆಯ ಕಲಘಟಗಿ, ಅಳ್ಳಾವರ ಮುಂಡಗೋಡ ತಾಲೂಕಿನಿಂದ ಖರೀದಿ ಮಾಡಿ ದಾಸ್ತಾನು ಮಾಡಿದ್ದ ಹುಲ್ಲಿನ ಬಣವೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ,
ಸುಟ್ಟು ಕರಕಲಾಗಿದ್ದ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.
ಹೊತ್ತಿ ಉರಿಯುತ್ತಿದ್ದ ಬೆಂಕಿ ನಂದಿಸಲು ಯಲ್ಲಾಪುರ ಹಾಗೂ ಕಲಘಟಗಿಯಿಂದ ಆಗಮಿಸಿದ್ದ ಅಗ್ನಿಶಾಮಕದಳದವರು ಮತ್ತು ಊರಿನ ಯುವಕರು ಬೆಂಕಿಯನ್ನು ಆರಿಸಲು ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.