ಹೊನ್ನಾವರ: 2022ನೇ ಸಾಲಿನ ತಾಲೂಕಿನ ಉತ್ತಮ ಗಣೇಶೋತ್ಸವ ಸಮಿತಿ ಪ್ರಶಸ್ತಿ ಸಮಾರಂಭ ಪೊಲೀಸ್ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಸಿಪಿಐ ಶ್ರೀಧರ ಎಸ್.ಆರ್., ಸಮಾಜ ಸಹಕಾರವಿಲ್ಲದೇ ಪೊಲೀಸ್ ಇಲಾಖೆ ಯಶ್ವಸಿಯಾಗಲು ಸಾಧ್ಯವಿಲ್ಲ. ಜನಸ್ನೇಹಿ ಪೊಲೀಸರಾಗಲು ಪ್ರತಿಯೋರ್ವರ ಸಹಕಾರವು ಕಾರಣವಿದೆ. ಸ್ವಾಮಿ ವಿವೇಕಾನಂದರ ಆದರ್ಶ ಗುಣವನ್ನು ಪಾಲಿಸೋಣ. ಇಂತಹ ಮಹಾನ್ ಸಾಧಕರ ಜಯಂತಿಯಂದು ಉತ್ತಮ ಗಣೇಶೋತ್ಸವ ಸಮಿತಿಯವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯಾಗುತ್ತಿದೆ ಎಂದರು.
ಗಣೇಶೋತ್ಸವ ವಿಸರ್ಜನಾ ಕಾರ್ಯ ಉತ್ತಮ ರೀತಿಯಿಂದ ನಡೆಯಲು ಸಹಕಾರ ನೀಡಿದ ಯುವಕರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಪೊಲೀಸ್ ಇಲಾಖೆಯ ವತಿಯಿಂದ ಪ್ರಕಟಿಸಿರುವ 2022ನೇ ಸಾಲಿನ ಉತ್ತಮ ಗಣೇಶ ಉತ್ಸವ ಸಮಿತಿ ಪ್ರಶಸ್ತಿಯ ಪ್ರಥಮ ಸ್ಥಾನ ತುಳಸಿನಗರ ಸಮಿತಿ, ದ್ವಿತೀಯ ಸ್ಥಾನ ಸಿದ್ದಿವಿನಾಯಕ ದುರ್ಗಾಕೇರಿ ಸಮಿತಿ, ತೃತೀಯ ಸರಳಗಿ ಸಮಿತಿ ಹಾಗೂ ಕೋಮು ಸೌಹಾರ್ದತೆಗಾಗಿ ಚಂದಾವರ ಸಮಿತಿ ಪ್ರಶಸ್ತಿ ಹಾಗೂ ಸ್ಮರಣಿಕೆ ಸ್ವೀಕರಿಸಿದರು.
ಶಾಸಕ ಸುನೀಲ ನಾಯ್ಕ, ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್., ಡಿವೈಎಸ್‌ಪಿ ಶ್ರೀಕಾಂತ, ಇಓ ಸುರೇಶ ನಾಯ್ಕ, ಪ.ಪಂ. ಅಧ್ಯಕ್ಷೆ ಭಾಗ್ಯ ಮೇಸ್ತ, ಇ.ಓ ಸುರೇಶ ನಾಯ್ಕ, ಸಿಪಿಐ ಶ್ರೀಧರ ಎಸ್.ಆರ್., ಗ್ರಾ.ಪಂ. ಅಧ್ಯಕ್ಷ ಮಂಜುನಾಥ ನಾಯ್ಕ, ಜಿ.ಜಿ.ಶಂಕರ್, ರಜನಿ ನಾಯ್ಕ, ವಿಘ್ನೇಶ್ವರ ಹೆಗಡೆ, ಪ್ರಮೋದ ನಾಯ್ಕ, ಯುವ ಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ ಉಪಸ್ಥಿತರಿದ್ದರು. ಪಿಎಸೈ ಮಹಾಂತೇಶ ನಾಯ್ಕ ವಿಜೇತರ ಯಾದಿ ಪ್ರಕಟಿಸಿದರು. ಇಲಾಖೆಯ ಸಿಬ್ಬಂದಿಗಳು, ವಿವಿಧ ಗಣೇಶೊತ್ಸವ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.