• first
  Slide
  Slide
  previous arrow
  next arrow
 • ಕಾಗೇರಿ ಅಭಿನಂದನಾ ಸಮಾರಂಭ ಹಿನ್ನೆಲೆ: ಬೈಕ್ ರ‍್ಯಾಲಿ ಯಶಸ್ವಿ

  300x250 AD

  ಶಿರಸಿ: ಜ.15ರಂದು ಶಿರಸಿಯಲ್ಲಿ ನಡೆಯಲಿರುವ ನಮ್ಮ ಹೆಮ್ಮೆ ನಮ್ಮ ಕಾಗೇರಿ ಅಭಿನಂದನಾ ಸಮಾರಂಭದ ಅಂಗವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿಯಿಂದ ಶುಕ್ರವಾರ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.
  ಮಾರಿಕಾಂಬಾ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಹೊರಟ ಬೈಕ್ ರ‍್ಯಾಲಿಗೆ ಅಭಿನಂದನಾ ಸಮಿತಿಯ ಜಯದೇವ ನಿಲೇಕಣಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎನ್.ಹೊಸ್ಮನಿ, ಸ್ಪೀಕರ್ ಕಾಗೇರಿಯವರು ಈ ನಾಡಿನ ಗೌರವವನ್ನು ಎತ್ತಿ ಹಿಡಿದ ನಮ್ಮೂರಿನ ನೇತಾರ. ಕಾಗೇರಿ ನಡೆದು ಬಂದ ದಾರಿ ನೋಡಿದಾಗ ಇವರು ಇಡೀ ದೇಶಕ್ಕೆ ಬೇಕಾದ ವ್ಯಕ್ತಿಯಾಗಿದ್ದಾರೆ. ಇಂತಹ ಮಾದರಿ ವ್ಯಕ್ತಿಯನ್ನು ಪರಿಚಯಿಸುವ ಕೆಲಸ ನಮ್ಮಿಂದ ಆಗಬೇಕಾಗಿದ್ದು, ಈ ಹಿನ್ನಲೆಯಲ್ಲಿ ಅವರಿಗೆ ಪಕ್ಷಾತೀತವಾಗಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದರು.
  ಯುವ ಮೋರ್ಚಾದ ವಿಶಾಲ ಮರಾಠೆ ಮಾತನಾಡಿ, ಕಾಗೇರಿಯವರು ನಮ್ಮೂರಿನ ಶಾಸಕ ಎನ್ನುವುದೇ ನಮಗೆಲ್ಲಾ ಅಭಿಮಾನದ ವಿಷಯ. ಅವರು ಅದ್ವಿತೀಯ ನಾಯಕರು. ಅಂಕೋಲಾದಲ್ಲಿ ಮತ್ತು ಶಿರಸಿಯಲ್ಲಿ ಎರಡರಲ್ಲೂ ಹ್ಯಾಟ್ರಿಕ್ ಸಾಧಿಸಿದ ನಾಯಕರು. ಇವರಿಗೆ ಸಾರ್ವಜನಿಕವಾಗಿ ಪಕ್ಷಾತೀತವಾಗಿ ಅಭಿನಂದಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
  ಬೈಕ್ ರ‍್ಯಾಲಿಯಲ್ಲಿ ನಗರಸಭೆ ಅದ್ಯಕ್ಷ ಗಣಪತಿ ನಾಯ್ಕ, ಅಭಿನಂದನ ಸಮಿತಿಯ ಡಾ.ವೆಂಕಟೇಶ ನಾಯ್ಕ, ಸುರೇಶ್ಚಂದ್ರ ಹೆಗಡೆ, ಲೋಕೇಶ ಹೆಗಡೆ, ಗಣಪತಿ ಭಟ್, ಶೋಭಾ ನಾಯ್ಕ, ಸದಾನಂದ ಭಟ್ಟ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top