Slide
Slide
Slide
previous arrow
next arrow

ಮಾತು ತಪ್ಪಿದ ಅರಣ್ಯಾಧಿಕಾರಿ: ಜಿಲ್ಲಾಧಿಕಾರಿ ಸೂಚನೆ ಉಲ್ಲಂಘನೆ

300x250 AD

ಶಿರಸಿ: ಅಸಮರ್ಪಕ ಜಿಪಿಎಸ್ ವ್ಯಾಪ್ತಿಗೆ ಅನುಗುಣವಾಗಿ ಒಕ್ಕಲೆಬ್ಬಿಸುವ ಕುರಿತು ಅಧಿಕೃತ ಲಿಖಿತ ಕಾಲಾವಕಾಶದಲ್ಲಿ ಜಿಲ್ಲಾಧಿಕಾರಿಗಳ ಸಮಕ್ಷಮ ನೀಡುವುದಾಗಿ ಬಹಿರಂಗವಾಗಿ ಹಿರಿಯ ಅರಣ್ಯಾಧಿಕಾರಿ ನೀಡಿದ ವಾಗ್ದಾನ ತಪ್ಪಿ ಮಾತು ತಪ್ಪಿದ ಅರಣ್ಯಾಧಿಕಾರಿ ಎಂಬ ಅಪವಾದಕ್ಕೆ ಕಾರಣರಾಗಿದ್ದಾರೆ.

 ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಶ್ರಯದಲ್ಲಿ, ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜನವರಿ 7ರಂದು ಶಿರಸಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಶಿರಸಿ ಅರಣ್ಯ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಅವರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚನೆ ಮೇರೆಗೆ ಡಿಸೆಂಬರ್ 21 ರಂದು ಹೋರಾಟಗಾರರ ವೇದಿಕೆಯು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ  ಅಸಮರ್ಪಕ ಜಿಪಿಎಸ್ ಒಕ್ಕಲೆಬ್ಬಿಸುವ ಕಾನೂನು ಬಾಹಿರ ಕೃತ್ಯ ಸ್ಪಷ್ಟೀಕರಣದ ಉತ್ತರ ನೀಡುವಂತೆ ಹೋರಾಟಗಾರರು ಆಗ್ರಹಿಸಿದ ಹಿನ್ನೆಲೆಯಲ್ಲಿ ಮುಂದಿನ 7 ದಿನಗಳಲ್ಲಿ ಲಿಖಿತ ಉತ್ತರ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು.

300x250 AD

 ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಘೋಷಿಸಿದ ಏಳು ದಿನಗಳ ಅವಧಿ ಇಂದಿಗೆ ಮುಗಿದ್ದಿದ್ದಾಗಿಯೂ ಸಂಬಂಧಿಸಿದ ಅರಣ್ಯಾಧಿಕಾರಿಗಳಿಂದ ಲಿಖಿತ ಹೇಳಿಕೆ ಬರದಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಅಲ್ಲದೇ, ಮಾತು ತಪ್ಪಿದ ಅರಣ್ಯ ಅಧಿಕಾರಿಗಳ ವಿರುದ್ಧ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top