Slide
Slide
Slide
previous arrow
next arrow

ಜ.15ಕ್ಕೆ‌ ಕಾನಸೂರಿನಲ್ಲಿ ‘ಜಗಜ್ಜಟ್ಟಿ ಜರಾಸಂಧ’ ಯಕ್ಷಗಾನ

300x250 AD

ಸಿದ್ದಾಪುರ: ಶ್ರೀ ಸಿದ್ಧಿವಿನಾಯಕ ದೇವರು ಮತ್ತು ಶ್ರೀ ಕಾಳಿಕಾ ಭವಾನಿ ದೇವಿ ಅನುಗ್ರಹದೊಂದಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್  ಸಿರಸಿ ಇವರ ಆಶ್ರಯದಲ್ಲಿ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ,ಶ್ರೀ ನಟರಾಜ ಎಮ್ ಹೆಗಡೆ  & ಗೆಳೆಯರ ಬಳಗದವರ ಸಮರ್ಥ ಸಂಯೋಜನೆಯಲ್ಲಿ, ಕಲಾ ಪೋಷಕರು,ಕಲಾಭಿಮಾನಿಗಳು,ಕಲಾ ಪ್ರೇಮಿಗಳ ಸಂಪೂರ್ಣ ಸಹಕಾರದೊಂದಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸವಿನೆನಪಿನಲ್ಲಿ, ತಾಲೂಕಿನ ಕಾನಸೂರಿನ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಸಿರಿಗನ್ನಡ ವೇದಿಕೆಯಲ್ಲಿ, ಜ.15 ಭಾನುವಾರದಂದು ಅದ್ದೂರಿ‌ ಪೌರಾಣಿಕ ಯಕ್ಷಗಾನ‌ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಂದು ಸಂಜೆ 6 ಘಂಟೆಯಿಂದ, ಭರತನಾಟ್ಯ, ಚಿಕ್ಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ,ಗೌರವ ಸಮರ್ಪಣೆಯ ನಂತರ ರಾತ್ರಿ 8 ಗಂಟೆಯಿಂದ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ದಿಗ್ಗಜ ಅತಿಥಿ ಕಲಾವಿದರಿಂದ ‘ಜಗಜ್ಜಟ್ಟಿ ಜರಾಸಂಧ’ ಅದ್ಧೂರಿ ಪೌರಾಣಿಕ ಯಕ್ಷಗಾನ ಪ್ರದರ್ಶನ  ನಡೆಯಲಿದೆ. ಹಿಮ್ಮೇಳದಲ್ಲಿ ಶ್ರೀಪಾದ‌ ಹೆಗಡೆ‌ ಬಾಳೆಗದ್ದೆ, ನರಸಿಂಹ ಭಟ್ ಹಂಡ್ರಮನೆ,‌ ಪ್ರಸನ್ನ ಹೆಗ್ಗಾರ, ಮುಮ್ಮೇಳದಲ್ಲಿ‌ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ,ವಿಧ್ಯಾದರ ಜಲವಳ್ಳಿ,ಅಶೋಕ‌ ಭಟ್ ಸಿದ್ದಾಪುರ, ಗಣೇಶ ನಾಯ್ಕ  ಮುಗ್ವಾ, ಮಾಬ್ಲೇಶ್ವರ ಗೌಡ ಹಾರೆಕೊಪ್ಪ, ಗುರು‌ ಕಡತೋಕಾ,‌ ಮಂಜು ಗೌಡ, ಕಾರ್ತೀಕ, ನಾಗರಾಜ ಹಾಗೂ ಇತರ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

300x250 AD

ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ  ಬಂದು ಕಾರ್ಯಕ್ರಮವನ್ನು  ಚಂದಗಾಣಿಸಲು ಸಂಘಟಕರು ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top