Slide
Slide
Slide
previous arrow
next arrow

ಮಕ್ಕಳು, ಚರ್ಮರೋಗ ತಜ್ಞರ ನೇಮಕಕ್ಕೆ ಕರವೇ ಆಗ್ರಹ

300x250 AD

ಹಳಿಯಾಳ: ತಾಲೂಕು ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ತಜ್ಞರು ಹಾಗೂ ಚರ್ಮರೋಗ ತಜ್ಞರನ್ನು ಕೂಡಲೇ ನೇಮಕ ಮಾಡುವಂತೆ ಆಗ್ರಹಿಸಿ ತಾಲೂಕಾ ಆರೋಗ್ಯ ಅಧಿಕಾರಿಗಳ ಮೂಲಕ ಜಿ.ಪಂ ಸಿಇಒ ಹಾಗೂ ಜನಸಂಪರ್ಕ ಕಾರ್ಯಾಲಯದ ಮುಖಾಂತರ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಿಸಲಾಯಿತು.
ಹಳಿಯಾಳದ ಸಮುದಾಯ ಭವನ (ಸರ್ಕಾರಿ ಆರೋಗ್ಯ ಕೇಂದ್ರ)ದಲ್ಲಿ ಮುಂಚೆ ಇರುವ ಮಕ್ಕಳ ತಜ್ಞರು ಗುತ್ತಿಗೆ ಆದಾಯದ ಮೇಲೆ ಇದ್ದು, ಇವರ ಅವಧಿ ಕಳೆದ ಮೂರ್ನಾಲ್ಕು ತಿಂಗಳುಗಳ ಹಿಂದೆ ಮುಗಿದಿದೆ. ಈ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರು ಕೂಡ ಇಲ್ಲದೇ ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದನ್ನು ಗಮನಿಸಿ ಈ ಹಿಂದೆ ಕರವೇ ವತಿಯಿಂದ ಮನವಿ ಮಾಡಿಕೊಳ್ಳಲಾಗಿತ್ತು. ಈ ಸಮಸ್ಯೆಗಳು ಒಂದು ಗ್ರಾಮ ಅಥವಾ ಒಂದು ನಗರಕ್ಕೆ ಸೀಮಿತವಾಗದೆ ಸುಮಾರು 50 ಹಳ್ಳಿಗಳ ತಾಣವಾಗಿರುವ ತಾಲೂಕಾ ಆಸ್ಪತ್ರೆಯ ಸಮಸ್ಯೆಯಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯವರು ಈಗಲಾದರೂ ಎಚ್ಚೆತ್ತು ನಗರದ ಸರ್ಕಾರಿ ತಾಲೂಕಾ ಆಸ್ಪತ್ರೆಗೆ ಅತಿ ಶೀಘ್ರದಲ್ಲಿ ಮಕ್ಕಳ ಹಾಗೂ ಚರ್ಮರೋಗ ತಜ್ಞರನ್ನು ನೇಮಕಾತಿ ಮಾಡಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷ ವಿನೋದ ದೊಡ್ಮನಿ, ಚಂದ್ರು ಅರಿಶಿನಗೇರಿ, ಈರಯ್ಯ ಹಿರೇಮಠ, ರೈತ ಘಟಕದ ಅಧ್ಯಕ್ಷರಾದ ಸುರೇಶ ಕೋಕಿತ್ಕರ್ ಉಪಾಧ್ಯಕ್ಷರಾದ ರಾಮಾ ಜಾವಳೇಕರ್, ಸುಧಾಕರ್ ಕುಂಬಾರ್, ಪರಶುರಾಮ್ ಶಾಪುರಕರ, ನಾಗೇಶ್ ಹೆಗಡೆ, ಲಕ್ಷ್ಮಣ ಪೆಟ್ನೇಕರ, ಆನಂದ ಮಠಪತಿ, ರಾಮು ಹಗರಿ, ಹಾಗೂ ಅಶೋಕ ಪಾಟೀಲ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top