ಭಟ್ಕಳ: ನಮ್ಮ ಮೇಲೆ ನಾವು ವಿಶ್ವಾಸವಿಟ್ಟು ಸಾಧಿಸಲು ಹೊರಟರೆ ಅದ್ಭುತವಾದದ್ದನ್ನು ಪಡೆಯಲು ಸಾಧ್ಯ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ ಹೇಳಿದರು.
ಅವರು ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ‘ಸಾಧನಾ 2023’ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಮೇಲೆ ನಂಬಿಕೆಯನ್ನಿಟ್ಟುಕೊAಡು ಪ್ರಯತ್ನಶೀಲರಾದರೆ ಏನನ್ನೂ ಸಾಧಿಸಬಹುದು. ಜೊತೆಗೆ ಧೃತಿಗೆಡದೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಯಂತಹ ನಿರ್ಧಾರವನ್ನು ತೆಗೆದುಕೊಳ್ಳಬಾರದೆಂದು ಹೇಳಿದರು.
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುರೇಶ್ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ವಿರೇಂದ್ರ ವಿ.ಶಾನಭಾಗ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ ಶ್ಯಾನಭಾಗ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಂದೇಶ ಆಚಾರ್ಯ ಸ್ವಾಗತಿಸಿದರು. ಅರ್ಜುನ ವಂದಿಸಿದರು. ದಿಶಾ ಮತ್ತು ಶ್ರೀಭಾಗ್ಯಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಭಾಗಾವಾರು ಅತ್ಯುತ್ತಮ ವಿದ್ಯಾರ್ಥಿಗಳಾಗಿ ಕಲಾ ವಿಭಾಗದಲ್ಲಿ ಆರತಿ ನಾಯ್ಕ, ವಾಣಿಜ್ಯದ ಗಣಕಶಾಸ್ತ್ರ ವಿಭಾಗದಲ್ಲಿ ಧೀರಜ ಶೆಟ್ಟಿ, ವಾಣಿಜ್ಯದ ಸಂಖ್ಯಾಶಾಸ್ತçದ ವಿಭಾಗದಲ್ಲಿ ಜೀವೋತ್ತಮ ಮತ್ತು ಧನುಷ ಶೆಟ್ಟಿ, ವಿಜ್ಞಾನ ವಿಭಾಗದಲ್ಲಿ ತಿಲಕ ಮೊಗೇರ ಮತ್ತು ಮನೀಷಾ ಮೊಗೇರ ಹಾಗೂ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ವರಮಹಾಲಕ್ಷ್ಮಿ ಪ್ರಶಸ್ತಿಯನ್ನು ಪಡೆದುಕೊಂಡರು. ಕೊನೆಯಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.