• first
  Slide
  Slide
  previous arrow
  next arrow
 • ನಾನು ಕಾಂಗ್ರೆಸ್ ಪಕ್ಷದ ಸೇವಕ: ಜ್ಞಾನೇಶ್ವರ ಗುಡಿಯಾಳ

  300x250 AD

  ಮುಂಡಗೋಡ: ಕ್ಷೇತ್ರದ ಕಾಂಗ್ರೆಸ್ ಬಲವರ್ಧನೆಗೆ ಯಾರು ಕರೆದರೂ ಯಾವ ಹೊತ್ತಿನಲ್ಲೂ ಕರೆದರೂ ಬರಲು ಸಿದ್ಧ. ನಾನು ಪಕ್ಷದ, ಧುರೀಣರ ಹಾಗೂ ಕಾರ್ಯಕರ್ತರ ಸೇವಕ ಎಂದು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ ಹೇಳಿದರು.
  ಅವರು ತಾಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿ, ನಮ್ಮ ಮೊದಲ ಗುರಿ ಪಕ್ಷದಲ್ಲಿರುವ ಭಿನ್ನಾಭಿಪ್ರಾಯ ಮರೆತು ನಾನು ಕಾಂಗ್ರೆಸ್ಸಿಗ ಎನ್ನುವ ಮನೋಭಾವನೆ ಎಲ್ಲರಲ್ಲೂ ಮೂಡಿ ಎಲ್ಲರೂ ಒಟ್ಟಾಗಿ ಪಕ್ಷದ ಸಂಘಟನೆಗೆ ದುಡಿದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೆ ಆಗಿದೆ. ಆ ನಿಟ್ಟಿನಲ್ಲಿ ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದರು.
  ನಾನು ಪಕ್ಷದ ಯಾವ ಕಾರ್ಯಕರ್ತರಲ್ಲಿಯೂ ಭಿನ್ನಾಭಿಪ್ರಾಯ ಹೊಂದಿಲ್ಲ. ಕಾರ್ಯಕರ್ತರ ಧ್ವನಿಗೆ ಓಗೊಟ್ಟು ಬರುವೆ. ನಾನು ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸಿದವನಲ್ಲ. ರಾಜ್ಯ ನಾಯಕರಿಗೆ, ಜಿಲ್ಲಾ ಅಧ್ಯಕ್ಷರು ಹಾಗೂ ನಾಯಕರಿಗೆ ಯಾರಲ್ಲೂ ಅಧ್ಯಕ್ಷ ಸ್ಥಾನ ಕೊಡಿಸಿ ಎಂದು ಕೇಳಿಕೊಂಡಿಲ್ಲ. ನಿಮ್ಮಲ್ಲರ ಆಶೀರ್ವಾದಿಂದ, ದೇವರ ಆಶೀರ್ವಾದಿಂದ ನನಗೆ ಬ್ಲಾಕ್ ಅಧ್ಯಕ್ಷ ಸ್ಥಾನ ದೊರೆತಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿರುವುದು ಖುಷಿ ತಂದಿದೆ, ಅಷ್ಟೆ ಕಷ್ಟ ಕೂಡ ಮುಂದಿದೆ. ಖುರ್ಚಿ ನೋಡಲಿಕ್ಕೆ ಬಹಳ ಚಂದೈತಿ, ಖುರ್ಚಿ ತುಂಬ ಮುಳ್ಳು ಚುಚ್ಚುತ್ತವೆ ಎಂಬುದೂ ಗೊತ್ತು ಎಂದರು.

  300x250 AD
  Share This
  300x250 AD
  300x250 AD
  300x250 AD
  Back to top