• Slide
    Slide
    Slide
    previous arrow
    next arrow
  • ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಆರ್.ವಿ. ದೇಶಪಾಂಡೆಗೆ ಸನ್ಮಾನ

    300x250 AD

    ಯಲ್ಲಾಪುರ: ಆರು ಬಾರಿ ಯಲ್ಲಾಪುರದಿಂದ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಸಂದಿರುವ ಪ್ರಶಸ್ತಿ, ನನ್ನನ್ನು ಆರು ಬಾರಿ ಆಯ್ಕೆ ಮಾಡಿರುವ ಇಲ್ಲಿಯ ಜನರಿಗೆ ಸಲ್ಲುವಂತಹದು. ನನ್ನನ್ನು ಈ ಕ್ಷೇತ್ರದಿಂದ ಗೆಲ್ಲಿಸಿದ್ದೀರಿ ಮಂತ್ರಿಯಾಗಿಸಿದ್ದಿರಿ, ನಿಮಗೆ ಚಿರ ಋಣಿಯಾಗಿದ್ದೇನೆ ಎಂದು ಮಾಜಿ ಸಚಿವ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
    ಅವರು ಪಟ್ಟಣದ ಅಡಿಕೆ ಭವನದಲ್ಲಿ ಪ್ರಮೋದ ಹೆಗಡೆ ಅಭಿನಂಧನಾ ಸಮಿತಿ ಹಾಗೂ ಆರ್.ವಿ.ದೇಶಪಾಂಡೆ ಅಭಿಮಾನಿ ಬಳಗದಿಂದ ಕರ್ನಾಟಕ ರಾಜ್ಯ ಶಾಸನಸಭೆಯ ‘ಉತ್ತಮ ಶಾಸಕ ಪ್ರಶಸ್ತಿ’ ಪುರಸ್ಕೃತರಾದ ಹಿನ್ನಲೆಯಲ್ಲಿ ಅವರಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಇಂದು ರಾಜಕೀಯ ಜೀವನ ಯಾವ ರೀತಿ ಬದಲಾಗಿದೆ ಎಂದು ಎಲ್ಲರು ನೋಡುತ್ತಿದ್ದಾರೆ. ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಮೌಲ್ಯಗಳು ಕುಸಿಯುತ್ತಿವೆ. ಜನ ರಾಜಕೀಯದಲ್ಲಿ ಆಸಕ್ತಿ ತೋರಿಸುವುದನ್ನು ಕಡಿಮೆಮಾಡಿದ್ದಾರೆ. ಮಾನವೀಯ ಮೌಲ್ಯಗಳಿಗೆ ಆಧ್ಯತೆ ನೀಡುವ ಯುವ ಜನತೆ ರಾಜಕೀಯವನ್ನು ಪ್ರವೇಶಿಸಬೇಕು ಅಂದಾಗ ಬದಲಾವಣೆಗಳು ಸಾಧ್ಯ ಎಂದ ಅವರು ಈ ಅಭಿನಂದನೆ ನನಗೆ ಸಂತಸ ತಂದಿದೆ, ಗೌರವ ಸಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
    ಪ್ರಮೋದ ಹೆಗಡೆ ಅಭಿನಂದನಾ ಸಮಿತಿಯ ಅಧ್ಯಕ್ಷ ಡಿ ಶಂಕರ ಭಟ್ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ ನಿರೂಪಿಸಿದರು. ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಮಾಜಿ ಶಾಸಕ ವಿ.ಎಸ್.ಪಾಟೀಲ್, ಉದ್ಯಮಿ, ಧಾತ್ರಿ ಪೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಧಾತ್ರಿ, ಸಾಮಾಜಿಕ ಕಾರ್ಯಕರ್ತರಾದ ಗೋಪಾಲಕೃಷ್ಣ ಹಂಡ್ರಮನೆ, ರಾಜ್ಯ ಕಿಸಾನ ಸೆಲ್ ಉಪಾಧ್ಯಕ್ಷ ಶ್ರೀಪಾದ ಹೆಗಡೆ ಕಡವೆ, ಪ್ರಮುಖರಾದ ಸೂರ್ಯನಾರಾಯಣ ಭಟ್, ಉಲ್ಲಾಸ ಶಾನಭಾಗ, ಪಿ.ಜಿ.ಹೆಗಡೆ, ವೇಣುಗೋಪಾಲ ಮದ್ಗುಣಿ ವೇದಿಕೆಯಲ್ಲಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top