Slide
Slide
Slide
previous arrow
next arrow

ಉಳವಿ ಜಾತ್ರೆಗೆ ಚಕ್ಕಡಿ ಗಾಡಿ ತರದಿರಿ: ಉಪವಿಭಾಗಾಧಿಕಾರಿ ಜಯಲಕ್ಷ್ಮಿ

300x250 AD

ಜೊಯಿಡಾ: ಶ್ರೀಕ್ಷೇತ್ರ ಉಳವಿ ಜಾತ್ರೆಯು ಜ.28ರಿಂದ ಫೆ.8ರವರೆಗೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ಚಕ್ಕಡಿ ಗಾಡಿ ಎತ್ತುಗಳನ್ನು ಜಾತ್ರೆಗೆ ತರದಂತೆ ನೋಡಿಕೊಳ್ಳಲು ಆಡಳಿತ ಸಮಿತಿಗೆ ಸೂಚಿಸಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದ ಅವರು, ದನಗಳಿಗೆ ಚರ್ಮಗಂಟು ರೋಗ ತುಂಬಾ ಪ್ರಮಾಣದಲ್ಲಿ ಹರಡಿದೆ. ಜಿಲ್ಲೆಯಲ್ಲಿ ಅಳಿವಿನ ಅಂಚಿನಲ್ಲಿರುವ ಇರುವ ಮಲೆನಾಡು ಗಿಡ್ಡ ತಳಿಗಳಿದ್ದು, ಅವುಗಳ ಆರೋಗ್ಯದ ದೃಷ್ಟಿಯಿಂದ ಮತ್ತು ಇಲ್ಲಿರುವ ರೋಗಗಳು ಹೊರಗಿನಿಂದ ಬರುವ ಎತ್ತುಗಳಿಗೆ ಹರಡಬಾರದು ಎಂಬ ಉದ್ದೇಶದಿಂದ ಉಳವಿ ಜಾತ್ರೆಗೆ ಚಕ್ಕಡಿ ಗಾಡಿ, ಎತ್ತುಗಳನ್ನು ತರಬಾರದು. ಭಕ್ತರು ವಾಹನದಲ್ಲಿ ಬಂದು ಕೋವಿಡ್ ನಿಯಮದಂತೆ ಜಾತ್ರೆ ಮಾಡಿ ಹೋಗಲಿ. ಯಾವುದೇ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಕೆಲಸ ಮಾಡಿದರೂ ಜಾತ್ರೆಯ ಖರ್ಚು ವೆಚ್ಚಗಳನ್ನು ದೇವಸ್ಥಾನದ ಆಡಳಿತ ಮಂಡಳಿಯೇ ನಿರ್ವಹಿಸಬೇಕು ಎಂದರು.
2016ರಿAದ ಉಳವಿ ದೇವಸ್ಥಾನ ಮುಜರಾಯಿ ಇಲಾಖೆಯಿಂದ ಹೊರಗೆ ಇದೆ. ಆ ಕಾರಣದಿಂದ ಆಡಳಿತ ಮಂಡಳಿಗೆ ಬರುವ ಹಣದ ಲೆಕ್ಕ ನಾವು ಕೇಳುತ್ತಿಲ್ಲ. ಇಲ್ಲಿ ಸಾಕಷ್ಟು ಆದಾಯವಿದೆ ಭಕ್ತರಿಗೆ ಎಲ್ಲ ವ್ಯವಸ್ಥೆಯನ್ನು ದೇವಸ್ಥಾನವೇ ನೋಡಿಕೊಳ್ಳಬೇಕು. ಕಳೆದ ಸಭೆಗೆ ಸರ್ಕಾರದ ಕೆಲಸ ನಿಮಿತ್ತ ನನಗೆ ಬರಲಿಕ್ಕೆ ಆಗಿಲ್ಲ. ಆ ಸಭೆಗೆ ನಾನು ಸೂಚಿಸಿದ ನಿಯಮ ಪಾಲನೆ ಮಾಡದೇ ಸಭೆ ನಡೆಸಲಾಗಿದೆ. ಹೀಗೆ ಮನಬಂದAತೆ ನಡೆದುಕೊಂಡರೆ ನಾವು ನಿರ್ದಾಕ್ಷಿಣ್ಯ ಕ್ರಮ ಕೈ ಕೊಳ್ಳಬೇಕಾಗುತ್ತದೆ. ಮೊಂಡುತನ ಬಿಟ್ಟು ನಡೆದುಕೊಳ್ಳಿ. ಜಾತ್ರೆಗೆ ಬರುವ ಭಕ್ತರ ಸುರಕ್ಷತೆ ಮುಖ್ಯ, ರಸ್ತೆ ಅಕ್ಕ ಪಕ್ಕ ಹೊಲಸು ತನ, ಅಡಿಗೆ ಮಾಡುವುದು ಬೇಡ. ಕಳೆದ ವರ್ಷ ಆಡಳಿತ ಸಮಿತಿ ನಡೆದುಕೊಂಡ ರೀತಿ ಸರಿ ಇಲ್ಲ. ಈ ವರ್ಷ ಕೂಡ ಗೈಡ್ ಲೈನ್ಸ್ ತಪ್ಪಿದರೆ ಕಾನೂನು ಕ್ರಮ ಮಾಡಬೇಕಾಗುತ್ತದೆ. ಎಲ್ಲದಕ್ಕೂ ಉಳವಿ ಟ್ರಸ್ಟ್ ಜವಾಬ್ದಾರಿ ಆಗುತ್ತದೆ. ಟ್ರಾಫಿಕ್ ಜಾಮ್ ಆಗದಂತೆ ಕ್ರಮ ಕೈಗೊಳ್ಳಿ ಸಾಕಷ್ಟು ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಟಿವಿ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ದೇವಸ್ಥಾನದ ಆಡಳಿತ ಮಂಡಳಿ ಶಿಸ್ತಿನಿಂದ ತಯಾರಿ ಮಾಡಿಕೊಂಡಿರಬೇಕು. ನಾವು ಅಧಿಕಾರಿಗಳು ಇಲ್ಲಿ ಬಂದು ಸಭೆ ನಡೆಸಬೇಕು ಎಂದಿಲ್ಲ. ಜಾತ್ರೆ ನಿಮ್ಮದು, ಬರುವ ಭಕ್ತರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ದೇವರು ಎಲ್ಲರನ್ನೂ ಹಾರೈಸುತ್ತಾನೆ ಎಂದರು. ಕೆಲವು ವಿಷಯಗಳಲ್ಲಿ ಉಳವಿ ಗ್ರಾ.ಪಂ ಮಧ್ಯಸ್ಥಿಕೆ ಬಗ್ಗೆ ಪಿಡಿಒ ಅವರನ್ನು ವಿಚಾರಿಸಿದರು.
ಗುಂದ ಅರಣ್ಯ ವಲಯಾಧಿಕಾರಿ ರವಿಕಿರಣ್ ಸಂಪಗಾವಿ, ಲೋಕೋಪಯೋಗಿ ಇಲಾಖೆಯ ಎಇಇ ವಿಜಯಕುಮಾರ್, ಆರೋಗ್ಯ ಇಲಾಖೆಯ ಡಾ.ಸುಜಾತಾ ಉಕ್ಕಲಿ, ಪಶುಸಂಗೋಪನಾ ಇಲಾಖೆಯ ಮಂಜಪ್ಪ, ಕುಡಿಯುವ ನೀರು ವಿಭಾಗದ ಮಂಜುನಾಥ ಎ.ಇ., ವಿದ್ಯುತ್ ಇಲಾಖೆಯ ದೀಪಕ್ ನಾಯಕ್ ಇಲಾಖೆಯ ವಿಷಯದ ಕುರಿತು ಆಯುಕ್ತರೊಂದಿಗೆ ಅವಶ್ಯಕ ಚರ್ಚೆ ನಡೆಸಿದರು. ಜಾತ್ರೆಗೆ ಸೀಮೆಎಣ್ಣೆ ಬೇಡಿಕೆ ಇಟ್ಟ ಆಡಳಿತ ಕಮಿಟಿ ಅವರಿಗೆ, ಸೀಮೆಎಣ್ಣೆ 1 ವರ್ಷದಿಂದ ಪೂರೈಕೆ ಇಲ್ಲ ಉಳವಿ ಗೆ ಸೀಮೆ ಎಣ್ಣೆ ಪೂರೈಸಿದರೆ ನಿರಂತರವಾಗಿ ಕತ್ತಲೆಯಲ್ಲಿ ಇರುವ ಡಿಗ್ಗಿಯ ಗೌಳಾ ದೇವಿ ಜಾತ್ರೆಗೂ ಸೀಮೆ ಎಣ್ಣೆ ಕೊಡಿ ಎಂದು ಅಲ್ಲಿನ ಭಕ್ತರು ಕೇಳುತ್ತಿದ್ದಾರೆ. ಸೀಮೆ ಎಣ್ಣೆ ಇಲ್ಲ ಹಾಗಾಗಿ ನಾವು ಪೂರೈಸುತ್ತಿಲ್ಲ. ನಿಮ್ಮ ಜಾತ್ರೆ ನೀವೇ ನಿಮ್ಮ ಭಕ್ತರಿಗೆ ಉತ್ತಮ ಸೇವೆ ನೀಡಬೇಕು ಎಂದು ಉಪವಿಭಾಗಾಧಿಕಾರಿ ಸೂಚಿಸಿದರು. ಆ ಮೂಲಕ ಜಾತ್ರೆ ಉತ್ತಮವಾಗಿ ನಡೆಯಬೇಕು ಎಂದರು.
ಉಳವಿ ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ಸಂಜಯ್ ಕಿತ್ತೂರ, ಶಂಕರಯ್ಯ ಕಲ್ಮಠ, ತಹಶೀಲ್ದಾರ್ ಪ್ರಮೋದ್ ನಾಯಕ್, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top