Slide
Slide
Slide
previous arrow
next arrow

ಜ.17,18ಕ್ಕೆ ಸೇವಾ ಭಾರತಿ ವತಿಯಿಂದ ಬೆನ್ನು ಹುರಿ ಸಂಬಂಧ ವೈದ್ಯಕೀಯ ತಪಾಸಣೆ

300x250 AD

ಶಿರಸಿ :   ಇಂದು ಯುವ ಪೀಳಿಗೆಯಿಂದ ಹಿಡಿದು ಎಲ್ಲಾ ವಯಸ್ಸಿನವರು ಎದುರಿಸುವ ಬೆನ್ನು ಹುರಿ ಸಮಸ್ಯೆಯ ಬಗ್ಗೆ ಶಿರಸಿಯಲ್ಲಿ ಜ.17 ಮತ್ತು 18 ರಂದು ವೈದ್ಯಕೀಯ ತಪಾಸಣಾ, ಮಾಹಿತಿ, ತರಬೇತಿ ಶಿಬಿರವನ್ನು ನಗರದ ಸ್ಕ್ಯಾನ್ ಸೆಂಟರ್ ನಲ್ಲಿ ಮಂಗಳೂರಿನ ಸೇವಾ ಭಾರತಿ ವತಿಯಿಂದ ಆಯೋಜಿಸಲಾಗಿದೆ. 

ಈ ಕುರಿತು ನಗರದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಶಿಬಿರದ ಸಂಘಟಕ ಕೆ.ವಿನಾಯಕ ರಾವ್  ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸೇವಾಭಾರತಿಯು ಕಳೆದ 18 ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ.ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರನ್ನು ಗುರುತಿಸುವುದು, ಅವರನ್ನು ಪುನಶ್ಚೇತನಗೊಳಿಸುವುದು, ಒತ್ತಡ ಗಾಯಗಳ ನಿರ್ವಹಣೆ, ಅವರಿಗೆ ಸೂಕ್ತ ಸಾಧನ ಸಲಕರಣೆಗಳನ್ನು ಒದಗಿಸುವುದು, ಶೌಚಾಲಯ ಹಾಗೂ ರಾಂಪ್ ನಿರ್ಮಾಣಗಳಿಗೆ ಆರ್ಥಿಕ ಸಹಕಾರ ನೀಡುವುದು, ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಅರಿವು ಮೂಡಿಸುವುದು, ಅಲ್ಲದೆ ಸ್ವಾವಲಂಬಿ ಬದುಕು ನೀಡುವುದು ನಮ್ಮ ಸೇವಾಧಾಮದ ಉದ್ದೇಶವಾಗಿದೆ ಎಂದರು. 

ಈ  ನಿಟ್ಟಿನಲ್ಲಿ ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮವಾದ ಚಿಕಿತ್ಸೆ ನೀಡವುದು ನಮ್ಮ ಉದ್ದೇಶವಾಗಿದೆ. ಶಿರಸಿ ಸೇರಿದಂತೆ ಸುತ್ತಮುತ್ತಲಿನ ತಾಲೂಕಿನವರಿಗೆ ಶಿಬಿರ ಆಯೋಜನೆ ಮಾಡಲಾಗಿದೆ. ಈಗ 19ನೇ ವೈದ್ಯಕೀಯ ತಪಾಸಣೆ,ಮಾಹಿತಿ, ತರಬೇತಿ ಶಿಬಿರವು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶಿರಸಿಯಲ್ಲಿ ಜ.17,18 ರಂದು ಸ್ಕ್ಯಾನ್ ಸೆಂಟರ್ ನಲ್ಲಿ ನಡೆಯಲಿದೆ. ಇಲ್ಲಿಯವರೆಗೆ ಒಟ್ಟೂ 21 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು. 

ಈ ಶಿಬಿರದಲ್ಲಿ ಅರ್ಹ ಬೆನ್ನು ಹುರಿ ಮುರಿತಗೊಂಡ ದಿವ್ಯಾಂಗರಿಗಾಗಿ ವೀಲ್ ಚೇರ್ ವಿತರಣೆ,ಮೆಡಿಕಲ್ ಕಿಟ್ ಗಳ ವಿತರಣೆ ನಡೆಯಲಿದೆ. ಆರೋಗ್ಯ ತಪಾಸಣೆ ಮಾಡಿ ಸಲಹೆ ಗಳನ್ನೂ ನೀಡಲಾಗುತ್ತದೆ ಎಂದು ತಿಳಿಸಿದರು. ಶಿಬಿರವು ಸೇವಾ ಭಾರತಿ ಮಂಗಳೂರು, ರೋಟರಿ ಕ್ಲಬ್, ಶಿರಸಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್,ಶಿರಸಿ ಹಾಗೂ ಎ. ಪಿ. ಡಿ, ಬೆಂಗಳೂರು ಇದರ ಸಹಯೋಗದಲ್ಲಿ ನಡೆಯಲಿದೆ ಎಂದರು. 

300x250 AD

ಇನ್ನು ಸೇವಾ ಭಾರತಿಯು ಸಬಲೀಕರಣಕ್ಕಾಗಿ”-ಸಬಲಿನಿ”, ತುರ್ತು ಅವಶ್ಯಕತೆ, ಆಂಬುಲೆನ್ಸ್ ಮತ್ತು ರಕ್ತನಿಧಿ ಪೂರೈಕೆಗಾಗಿಬೆನ್ನು ಹುರಿ ಅಪಘಾತಕ್ಕೆ ಒಳಗಾದವರಿಗಾಗಿ ಪುನಶ್ವೇತನ ಕೇಂದ್ರ “ಸೇವಾಧಾಮ”, ಮಹಿಳಾ “ಆರೋಗ್ಯಮ್” ಯೋಜನೆಗಳು ಕಾರ್ಯ ಪ್ರವೃತ್ತವಾಗಿದೆ. ಕರ್ನಾಟಕ ಸರಕಾರವು ಸೇವಾ ಭಾರತಿಯು ವಿಕಲಚೇತನ ಕ್ಷೇತ್ರದಲ್ಲಿ ಮಾಡಿದ ಸೇವೆ ಹಾಗೂ ಸಾಧನೆಗಳನ್ನು ಗುರುತಿಸಿ 2022 ನೇ ಸಾಲಿನ ವಿಶ್ವ ವಿಶೇಷಚೇತನ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡಿರುತ್ತದೆ ಎಂದು ಮಾಹಿತಿ ಹಂಚಿಕೊಂಡರು. 

ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ದಿನೇಶ ಹೆಗಡೆ, ರೊ.ಗಣೇಶ ಹೆಗಡೆ, ಡಾ.ವಿನಾಯಕ ಭಟ್, ಸುಧೀಂದ್ರ ದೇಶಪಾಂಡೆ, ಡಾ.ದತ್ತಾತ್ರೇಯ ಭಟ್ ಮುಂತಾದವರು ಇದ್ದರು.  

ಶಿಬಿರವನ್ನು ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಉದ್ಘಾಟಿಸಲಿದ್ದಾರೆ. ಎಲ್ಲರ ಸಹಕಾರದಿಂದ ಶಿಬಿರ ನಡೆಯುತ್ತಿದೆ. ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸ್ವಾವಲಂಬಿ ಜೀವನ ನೀಡುವುದು ಸೇವಾ ಭಾರತಿಯ ಉದ್ದೇಶವಾಗಿದೆ. —    ಕೆ.ವಿನಾಯಕ ರಾವ್, ಸೇವಾ ಭಾರತಿ

Share This
300x250 AD
300x250 AD
300x250 AD
Back to top