• first
  Slide
  Slide
  previous arrow
  next arrow
 • ಅಜ್ಜಿಕಟ್ಟಾ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

  300x250 AD

  ಅಂಕೋಲಾ: ತಾಲೂಕಿನ ಅಜ್ಜಿಕಟ್ಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಪುರಸಭೆಯ ಸದಸ್ಯ ಅಶೋಕ ಶೇಡಗೇರಿ ಆಗಮಿಸಿದ್ದರು.
  ಅಧ್ಯಕ್ಷ ಸ್ಥಾನವನ್ನು ಪುರಸಭೆಯ ಅಧ್ಯಕ್ಷೆ ಶಾಂತಲಾ ಅರುಣ ನಾಡಕರ್ಣಿ ವಹಿಸಿದ್ದರು. ಹಸ್ತಪತ್ರಿಕೆಯ ಉದ್ಘಾಟಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ರಚನಾ ನಾಯಕ ಆಗಮಿಸಿದ್ದರು.
  ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರಕಾಶ ಕುಂಜಿ, ಮಂಜೇಶ್ವರ ನಾಯಕ, ಸಿಆರ್‌ಪಿ ದೀಪಾ ನಾಯಕ, ಗುಣು ಆಗೇರ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು.
  ಈ ಸಂದರ್ಭದಲ್ಲಿ ಶಾಂತಲಾ ನಾಡಕರ್ಣಿಯವರು ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ಕುಳಿತುಕೊಳ್ಳಲು ಚಾಪೆ ಹಾಗೂ ಐಡಿ ಕಾರ್ಡ್ನ್ನು ವಿತರಿಸಿದರು. ಅವರಿಗೆ ಶಾಲಾ ಮುಖ್ಯಾಧ್ಯಾಪಕರು, ಸಹಶಿಕ್ಷಕರು ಹಾಗೂ ಎಸ್‌ಡಿಎಂಸಿಯವರಿoದ ಹೃದಯ ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದರು.

  300x250 AD
  Share This
  300x250 AD
  300x250 AD
  300x250 AD
  Back to top