ಕಾರವಾರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗೆಯ ನಲಿಕಲಿ ಮಕ್ಕಳಿಗಾಗಿ ಚಟುವಟಿಕೆಯಾಧಾರಿತ ಶಿಕ್ಷಣದ ಜೊತೆಯಲ್ಲಿ ಹೊರ ಸಂಚಾರದ ಮಹತ್ವ (ಮಕ್ಕಳ ಪಿಕ್‌ನಿಕ್) ನಗೆಕೋವೆ ಹಳ್ಳದ ದಂಡೆಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಮಕ್ಕಳು ಶಾಲಾ ಸಮವಸ್ತ್ರದ ಜೊತೆಯಲ್ಲಿ ವರ್ಗದ ಶಿಕ್ಷಕಿ ರೂಪಾ ನಾಯ್ಕ ಮಾರ್ಗದರ್ಶನದಂತೆ ಹೊರಸಂಚಾರಕ್ಕೆ ಹೊರಟರು.
ಮಕ್ಕಳಲ್ಲಿ ಹೊರಸಂಚಾರದ ಮಹತ್ವ ತಿಳಿದುಕೊಂಡು ಪರಿಸರದ ರಕ್ಷಣೆಗಾಗಿ ಚಿಕ್ಕಮಕ್ಕಳು ಏನನ್ನು ಮಾಡಬಹುದು ಎನ್ನುವುದರ ಬಗ್ಗೆ ಮುಖ್ಯ ಶಿಕ್ಷಕ ಅಖ್ತರ್ ಸೈಯದ್ ಅವರು ಕೆಲವು ಸ್ವಚ್ಛತೆಯ ಕಾರ್ಯಕ್ರಮಗಳನ್ನು ರೂಪಿಸಿದ್ದರು. ನಗೆ ಕೋವೆ ಹಳ್ಳದ ದಂಡೆಯಲ್ಲಿ ಮಕ್ಕಳ ಪ್ರವಾಸ ಸಂಚರಿಸಿದ ತೀರದಲ್ಲಿ ಪ್ರವಾಸಿಗರು ತಿಂದು ಎಸೆದು ಹೊಗಿರುವ ಕಸ-ಕಡ್ಡಿಗಳನ್ನು, ಪ್ಲಾಸ್ಟಿಕ್ ಪ್ಯಾಕೇಟ್ ಹಾಗೂ ಬಾಟಲಿಗಳನ್ನು ಎತ್ತಿ ಸ್ವಚ್ಛಗೊಳಿಸುವುದರ ಮೂಲಕ ಹಸಿರು ಕಾರವಾರ- ಸ್ವಚ್ಛ ಕಾರವಾರದ ನೆನಪುಗಳು ಮತ್ತು ಮಹತ್ವವನ್ನು ಮಕ್ಕಳು ಅರಿಯುವಂತೆ ಮುಖ್ಯ ಶಿಕ್ಷಕರು ಕ್ರಮವಹಿಸಿದ್ದರು.
ಶಾಲಾ ಪುಟ್ಟ ಮಕ್ಕಳು ಆಗಿನ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಾದ ನಿಲಯ ಮಿತಾಶ್ ಇವರ ಹಾಗೂ ಹಸಿರು ಕಾರವಾರ-ಸ್ವಚ್ಛ ಕಾರವಾರ ತಂಡದವರ ಸಾಧನೆಗಳನ್ನು ಮತ್ತು ಸ್ವಚ್ಛತೆಯ ಬಗ್ಗೆ ಕಾರವಾರ ಜನತೆಯಲ್ಲಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಲು ತಂಡ ಮಾಡಿದ ಕಾರ್ಯವನ್ನು ಶ್ಲಾಘಿಸುತ್ತ ಇಂತಹ ಯೋಜನೆಗಳಿಂದ ನಮ್ಮ ಜಿಲ್ಲೆ ಹಸಿರು ಜಿಲ್ಲೆಯಾಗಿಸಲು ನಾವೆಲ್ಲ ಪಣತೊಡಬೇಕು ಎಂದು ಶ್ಲಾಘಿಸಿ ನೆನಪಿಸಿಕೊಂಡರು.
***